ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯ ಅವರ ಸಾಲಮನ್ನಾ ಪುಸ್ತಕಕ್ಕೆ ಸೀಮಿತ : ಜೇಟ್ಲಿ

By Mahesh
|
Google Oneindia Kannada News

ನವದೆಹಲಿ, ನವೆಂಬರ್ 16: ಉದ್ಯಮಿ ವಿಜಯ್ ಮಲ್ಯ ಸೇರಿದಂತೆ 63ಕ್ಕೂ ಅಧಿಕ ಉದ್ದೇಶಪೂರ್ವಕ ಸುಸ್ತಿದಾರರ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನ್ನಾ ಮಾಡಿರುವ ಸುದ್ದಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ವಿತ್ತ ಸಚಿವ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಎಲ್ಲಾ ಖಾತೆಗಳನ್ನು ದುಡಿಯದ ಬಂಡವಾಳ ಎಂದು ಲೆಕ್ಕ ಪುಸ್ತಕದಲ್ಲಿ ಬರೆದಿಡಲಾಗಿದೆ. ಆದರೆ, ಇದರಿಂದ ಸಾಲ ಮನ್ನಾ ಮಾಡದಂತೆ ಆಗುವುದಿಲ್ಲ ಸಾಲಗಾರರಿಂದ ಸಾಲ ವಸೂಲಿ ಮಾಡುವ ಹಕ್ಕು ಬ್ಯಾಂಕ್ ‍ಗಳಿಗೆ ಇವೆ. ಮಲ್ಯ ವಿರುದ್ಧದ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ರಾಜ್ಯಸಭೆಯಲ್ಲಿ ಹೇಳಿದರು.[ಉದ್ದೇಶಪೂರ್ವಕ ಸುಸ್ತಿದಾರ ಮಲ್ಯಗೆ ಎಸ್ಬಿಐ ಸಾಲದಿಂದ ಮುಕ್ತಿ!]

Loans to Mallya- Write off only in books says Jaitley

ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಸರಿ ಸುಮಾರು 1,201 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಎಸ್ಬಿಐ ಈಗ non performing assets ಸಾಲದ ಬಗ್ಗೆ ಮೌಲ್ಯರಹಿತ ಎಂದು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಈ ಪೈಕಿ 63 ಉದ್ದೇಶಪೂರ್ವಕ ಸುಸ್ತಿದಾರರಿಗೆ ಪೂರ್ಣ ಪ್ರಮಾಣದ ಸಾಲಮನ್ನಾ ಹಾಗೂ 31 ಖಾತೆಗಳಿಗೆ ಪಾರ್ಶ್ವ ಉಪಯೋಗ ಸಿಕ್ಕಿದೆ ಎಂದು ಡಿಎನ್ ಎ ಪತ್ರಿಕೆಗೆ ಸಿಕ್ಕಿರುವ ದಾಖಲೆಗಳು ಹೇಳಿದೆ.

Advance Under Collection Account (AUCA) ಅಡಿಯಲ್ಲಿ ಬ್ಯಾಂಕ್ ಖಾತೆಗೆ 7,016 ಕೋಟಿ ರು ಸೇರಿಸಿ ಬ್ಯಾಲೆನ್ಸ್ ಶೀಟ್ ಸಮ ಮಾಡಲಾಗಿದೆ. ದಾಖಲೆಗಳ ಪ್ರಕಾರ ಕಿಂಗ್ ಫಿಷರ್ ಏರ್ ಲೈನ್ಸ್ 17 ಬ್ಯಾಂಕ್ ಗಳಿಂದ 6,963 ಕೋಟಿ ರು ಸಾಲ ಬಾಕಿ ಉಳಿಸಿಕೊಂಡಿದೆ.

English summary
The loans to Vijay Maliya is a write off only in the books said, finance Minister, Arun Jaitley in the Rajya Sabha today(November 16).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X