ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ರೂವಾರಿ ನವೀನ್ ಕುಮಾರ್ ಬಗ್ಗೆ ತಿಳಿಯಿರಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 29: ಎನ್ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸರಕು ಸಾಗಣೆ ಮತ್ತು ಸೇವಾ ತೆರಿಗೆಯ ಬೆನ್ನೆಲುಬಾಗಿರುವ ಜಿಎಸ್ ಟಿ ನೆಟ್ವರ್ಕ್ ಬಗ್ಗೆ ಇಲ್ಲಿದೆ ಮಾಹಿತಿ.

ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?

ಜುಲೈ 1ರಿಂದ ಜಾರಿಗೆ ಬರಲಿರುವ ಜಿ ಎಸ್ ಟಿಯ ರೂವಾರಿಯಾದ ಜಿ ಎಸ್ ಟಿಎನ್ ಮೊದಲ ಚೇರ್ಮನ್ ನವೀನ್ ಕುಮಾರ್ ಬಗ್ಗೆ ಇಲ್ಲಿ ಓದಿ. ಸುಮಾರು 66 ಲಕ್ಷಕ್ಕೂ ಅಧಿಕ ತೆರಿಗೆದಾರರು ಈಗಾಗಲೆ ಜಿಎಸ್ ಟಿಎನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ದೇಶದಾದ್ಯಂತ ಜಿಎಸ್ ಟಿ ಜಾರಿ, ನಿರ್ವಹಣೆಯನ್ನು ಜಿಎಸ್ ಟಿಎನ್ ಪೋರ್ಟಲ್ ನೋಡಿಕೊಳ್ಳಲಿದೆ.

30ರಂದು ನಡೆಯಲಿರುವ ಮಧ್ಯರಾತ್ರಿ ಸಂಸತ್ ಅಧಿವೇಶನದ ಮಹತ್ವ30ರಂದು ನಡೆಯಲಿರುವ ಮಧ್ಯರಾತ್ರಿ ಸಂಸತ್ ಅಧಿವೇಶನದ ಮಹತ್ವ

2015ರಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ಹಾಗೂ ಜಿಎಸ್ ಟಿಎನ್ ಜತೆ ಒಪ್ಪಂದ. ಜಿ ಎಸ್ ಟಿ ಜಾರಿಗೊಂಡ ಕ್ಷಣದಿಂದ 5 ವರ್ಷಗಳ ಕಾಲ ನಿರ್ವಹಣೆಯ ಹೊಣೆ. ಜಿಎಸ್ ಟಿ ವ್ಯವಸ್ಥೆಯ ವಿನ್ಯಾಸ, ಅಭಿವೃದ್ಧಿ, ಮೂಲ ಸೌಕರ್ಯ, ಸಾಫ್ಟ್ ವೇರ್ ಲೈಸನ್ಸ್, ಆನ್ ಲೈನ್ ಬ್ಯಾಂಡ್ ವಿಡ್ತ್ ಎಲ್ಲವನ್ನು ಇನ್ಫೋಸಿಸ್ ನೋಡಿಕೊಳ್ಳುತ್ತಿದೆ. ಜುಲೈ 15ರ ನಂತರ ಆಫ್ ಲೈನ್ ನಲ್ಲೂ ಬಳಕೆ ಮಾಡಬಲ್ಲ ಸಾಧನಗಳನ್ನು ಪರಿಚಯಿಸಲಗುತ್ತದೆ ಎಂದು ಜಿಎಸ್ ಟಿ ಚೇರ್ಮನ್ ನವೀನ್ ಕುಮಾರ್ ಹೇಳಿದರು.

ಚೇರ್ಮನ್ ನವೀನ್ ಕುಮಾರ್

ಚೇರ್ಮನ್ ನವೀನ್ ಕುಮಾರ್

ನವೀನ್ ಕುಮಾರ್ ಅವರು Goods and Services Tax Network(ಜಿಎಸ್ ಟಿಎನ್) ನ ಮೊದಲ ಚೇರ್ಮನ್ ಆಗಿದ್ದಾರೆ. 1975ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, 2012ರಲ್ಲಿ ಮುಂಬಡ್ತಿ ಪಡೆದರು. ಬಿಹಾರದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಯಾಗಿ 37 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ.

ಬಿಹಾರ ಮೂಲದ ನವೀನ್

ಬಿಹಾರ ಮೂಲದ ನವೀನ್

1952ರಲ್ಲಿ ಜನಿಸಿದ ಕುಮಾರ್ ಅವರು ಪ್ರಥಮ ದರ್ಜೆಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಸಿವಿಎಲ್ ಸರ್ವೀಸ್ ಪರೀಕ್ಷೆ ಬರೆದರು. 1975ರಲ್ಲಿ ಬಿಹಾರದಲ್ಲಿ ಅಧಿಕಾರಿಯಾಗಿ ನಗರಾಭಿವೃದ್ಧಿ, ಶಿಕ್ಷಣ, ಸಾಮಾಜಿಕ ಭದ್ರತೆ, ಯುವಜನ ಇಲಾಖೆ, ಜಲ ಸಂಪನ್ಮೂಲ, ಇಂಧನ, ಕೈಗಾರಿಕೆ, ಐಟಿ ಹಾಗೂ ವಾಣಿಜ್ಯ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಆನ್ ಲೈನ್ ಮಾರಾಟಗಾರರಿಗೆ ಟಿಡಿಎಸ್ : ನಿರ್ಧಾರ ಮುಂದೂಡಿಕೆಆನ್ ಲೈನ್ ಮಾರಾಟಗಾರರಿಗೆ ಟಿಡಿಎಸ್ : ನಿರ್ಧಾರ ಮುಂದೂಡಿಕೆ

ಮೆಟ್ರೋ ರೈಲು ನಿಗಮ ನಿರ್ವಹಣೆ

ಮೆಟ್ರೋ ರೈಲು ನಿಗಮ ನಿರ್ವಹಣೆ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ನವೀನ್ ಕುಮಾರ್ ಅವರು ದೆಹಲಿ ಮೆಟ್ರೋ ರೈಲು ನಿಗಮ ಸೇರಿದಂತೆ ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮೆಟ್ರೋಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿದ ನವೀನ್ 2012ರಲ್ಲಿ ನಿವೃತ್ತಿ ಹೊಂದಿದರು.

ಐಟಿ ಕಾರ್ಯದರ್ಶಿಯಾಗಿ ನವೀನ್

ಐಟಿ ಕಾರ್ಯದರ್ಶಿಯಾಗಿ ನವೀನ್

ಬಿಹಾರದ ಮೊದಲ ಐಟಿ ಕಾರ್ಯದರ್ಶಿಯಾಗಿದ್ದ ನವೀನ್ ಅವರು ಬಿಹಾರದಲ್ಲಿ ಇಂಟರ್ನೆಟ್ ಜಾಲ ಹರಡಲು ಕಾರಣರಾದರು. ವ್ಯಾಟ್ ನಿರ್ವಹಣೆ, ರಾಜ್ಯದ ಬೊಕ್ಕಸಕ್ಕೆ ಇ ರಕ್ಷೆ, ಪಂಚಾಯಿತಿ ಮಟ್ಟದಲ್ಲಿ ಇ ಸೇವೆಗಳನ್ನು ಜಾರಿಗೊಳಿಸಿದರು. ತಮ್ಮ ಬ್ಲಾಗ್ (www.1wordtut.com) ಮೂಲಕ ಎಂಎಸ್ ವರ್ಡ್ ಬಗ್ಗೆ ಅನೇಕ ಕುತೂಹಲದ ಸಂಗತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಜಿಎಸ್ಟಿ ಬಳಿಕ ಚಿನ್ನದ ಬೆಲೆ ಗಗನ ಚುಂಬನಜಿಎಸ್ಟಿ ಬಳಿಕ ಚಿನ್ನದ ಬೆಲೆ ಗಗನ ಚುಂಬನ

English summary
GST Network, providing technology backbone for the new tax regime, said it has completed all software trials and testings necessary to successfully rollout GST from July 1. Know more about Navin Kumar- first Chairman of the Goods and Services Tax Network(GSTN)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X