ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಪ್ರಕರಣ: ಮಲ್ಯ ಮನೆ ಮೇಲೆ ಸಿಬಿಐ ದಾಳಿ

By Mahesh
|
Google Oneindia Kannada News

ಬೆಂಗಳೂರು, ಅ.10: ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಮಾಲೀಕ ವಿಜಯ್ ಮಲ್ಯ ಅವರ ಮನೆ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳ ತಂಡ ಶನಿವಾರ ಮಧ್ಯಾಹ್ನ ದಾಳಿ ನಡೆಸಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗಾಗಿ ಐಡಿಬಿಐ ಬ್ಯಾಂಕಿನಿಂದ 950 ಕೋಟಿ ರು ಸಾಲ ಪಡೆದುಕೊಂಡಿದ್ದ ಮಲ್ಯ ಅವರು ಹಿಂತಿರುಗಿಸಿರಲಿಲ್ಲ. ಮಲ್ಯ,ಕಿಂಗ್ ಫಿಷರ್ ಸಿಎಫ್ ಒ ರಘುರಾಮ್ ಹಾಗೂ ಐಡಿಬಿಐ ಅಧಿಕಾರಿಗಳ ಮೇಲೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿತ್ತು.

ಈಗ ದೆಹಲಿ, ಮುಂಬೈ, ಗೋವಾ ಹಾಗೂ ಬೆಂಗಳೂರು ಮನೆ, ಕಚೇರಿ ಮೇಲೆ ದಾಳಿ ನಂತರ ಮಲ್ಯ ಅವರನ್ನು ವಿಚಾರಣೆ ನಡೆಸಲು ಸಿಬಿಐ ತಂಡ ಸಿದ್ಧ ನಡೆಸುತ್ತಿದೆ.[ವಿಜಯ್ ಮಲ್ಯ ಆಸ್ತಿ ಮೊತ್ತ ಎಷ್ಟು?]

CBI raids Vijay Mallya's defunct

ಸಾಲದ ಹೊರೆ ಹೊತ್ತು ನೆಲಕ್ಕೆ ಕುಸಿದಿರುವ ಕಿಂಗ್ ಫಿಷರ್ ವಿಮಾನಗಳು ಅಕ್ಟೋಬರ್ 2012ರ ನಂತರ ಮೇಲಕ್ಕೇರಿಲ್ಲ. ಬ್ಯಾಂಕಿಂಗ್ ಕ್ಷೇತ್ರದ ಅಂದಾಜು ಪ್ರಕಾರ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ 8,000 ಕೋಟಿ ರೂ ಸಾಲ ನೀಡಲಾಗಿದೆ. [ಸುಸ್ತಿದಾರನಾದರೂ ಸುಸ್ತಾಗದ ಮಲ್ಯ]

ಇದಕ್ಕೆ ವಿಜಯ್ ಮಲ್ಯ ಅವರು ವೈಯಕ್ತಿಕ ಗ್ಯಾರಂಟಿ ಜತೆಗೆ ಕಂಪನಿ ಷೇರುಗಳು, ಯುಬಿ, ಯುನೈಟೆಡ್ ಸ್ಪಿರೀಟ್ಸ್ ಕಂಪನಿಯ ಷೇರುಗಳ ಖಾತ್ರಿ ನೀಡಿದ್ದರು. ಮಾರುಕಟ್ಟೆಯಲ್ಲಿನ ಮಾತುಕತೆ ಪ್ರಕಾರ ಮಲ್ಯ ಅವರ ತಲೆ ಮೇಲೆ ಸರಿ ಸುಮಾರು 12,000 ಕೋಟಿ ರೂ ಸಾಲ ಇದೆಯಂತೆ.

Sarfesi Act (Securitsation and reconstruction of financial assets and enforcement of security interest act)- 2002 ಕಾಯಿದೆ ಇದೆಯಾದರೂ ಮಲ್ಯ ಜಾಣತನದಿಂದ ಇದರ ವ್ಯಾಪ್ತಿಗೂ ನಿಲುಕದಂತೆ ಸಾಲ ಮಾಡಿದ್ದಾರೆ. ಮಲ್ಯರ ಕಂಪನಿಗಳ ಮಾರುಕಟ್ಟೆ ಮೌಲ್ಯ 4 ಸಾವಿರ ಕೋಟಿ ರು ಇದ್ದರೂ ಬ್ಯಾಂಕುಗಳ ಕೈಗೆ ಸುಲಭಕ್ಕೆ ದಕ್ಕುತ್ತಿಲ್ಲ.

ಮುಂಬೈನ ಕಿಂಗ್ ಫಿಷರ್ ವಿಲ್ಲಾ, ಕೇಪ್ ಟೌನ್ ನ ಬಂಗಲೆ(ಜಿಂಬಾಬ್ವೆ ಉದ್ಯಮಿಗೆ 40 ಕೋಟಿಗೆ ಸೇಲ್), ಕಿಂಗ್ ಫಿಷರ್ ಏರ್ ಲೈನ್ಸ್ 4ಕೋಟಿ ಷೇರುಗಳು, ಫೋರ್ಸ್ ಇಂಡಿಯಾ ಎಫ್ 1 ಟೀಂ, ರೇಸಿಂಗ್ ಕುದುರೆಗಳ ಮಾರಾಟಕ್ಕೆ ಬ್ಯಾಂಕ್ ಗಳು ಆಗ್ರಹಿಸಿವೆ.

English summary
The Central Bureau of Investigation (CBI) is conducting raids on Vijay Mallya and his now defunct company Kingfisher Airlines in its probe into IDBI bank's Rs 950 crore loan, which was given to the company despite the airline's negative credit ratings and net worth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X