ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರವೇ ಭಾರತದ ಮಾರುಕಟ್ಟೆಗೆ ಆಲಿಬಾಬಾ ಆಗಮನ

|
Google Oneindia Kannada News

ನವದೆಹಲಿ, ಏ. 1 : ಇ ಕಾಮರ್ಸ್ ಕ್ಷೇತ್ರದ ಬೆಳವಣಿಗೆಗೆ ಭಾರತದಲ್ಲಿ ಉತ್ತಮ ಅವಕಾಶ ಇದೆ ಎಂದು ಮನಗಂಡಿರುವ ಚೀನಾದ ದೈತ್ಯ ಕಂಪನಿ ಆಲಿಬಾಬಾ ಹೆಜ್ಜೆ ಇಡಲು ಸಿದ್ಧವಾಗಿದೆ. ಆಲಿಬಾಬಾ ಮುಖ್ಯಸ್ಥ ಜಾಕ್ ಮಾ ಪ್ರಾಥಮಿಕವಾಗಿ ಸಣ್ಣ ಸಂಸ್ಥೆಗಳಲ್ಲಿ ಬಂಡವಾಳ ಹೂಡುತ್ತೇನೆ ಎಂದು ತಿಳಿಸಿದ್ದಾರೆ.[ಆಲಿಬಾಬಾ ಚೀನಾದ ಇ ಕಾಮರ್ಸ್ ದೈತ್ಯ]

ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಜಾಕ್‌ ಮಾ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ಭಾರತದಲ್ಲಿ ಸಣ್ಣ ಉದ್ದಿಮೆಗಳ ವೃದ್ಧಿಗೆ ನೆರವಾಗುವ ಕುರಿತಾದ ತಮ್ಮ ಯೋಜನೆಯನ್ನು ಪ್ರಧಾನಿ ಮುಂದಿಟ್ಟಿದ್ದಾರೆ.

india

ಮುಂದಿನ 3 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಣ್ಣ ಉದ್ದಿಮೆಗಳಿಗೆ ನೆರವಾಗುವುದು ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಾಕ್‌ ಮಾ ಹೇಳಿದ್ದಾರೆ.

ಈಗಾಗಲೇ ಚೀನಾದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿರುವ ಆಲಿಬಾಬಾ ಭಾರತಕ್ಕೆ ಕಾಲಿಡುವದು ಬಹುತೇಕ ಖಚಿತವಾಗಿದೆ. ಆಲಿಬಾಬಾ ಬಂದರೆ ಆನ್ ಲೈನ್ ಮಾರುಕಟ್ಟೆಯಲ್ಲಿ ಮತ್ತಷ್ಟು ಪೈಪೋಟಿ ನಿರೀಕ್ಷಿಸಬಹುದು.[ಬೇಸಿಗೆ ಆನ್ ಲೈನ್ ಹಬ್ಬಕ್ಕೆ ಭರಪೂರ ಕೊಡುಗೆ]

ಜಾಕ್‌ ಮಾ ಅವರೊಂದಿಗಿನ ಮಾತುಕತೆ ಉತ್ತಮವಾಗಿತ್ತು ಎಂದು ಪ್ರಧಾನಿ ಮೋದಿ ಕೂಡಾ ಟ್ವೀಟ್‌ ಮಾಡಿದ್ದಾರೆ. ಹಿಂದೆ 2014ರ ನವೆಂಬರ್‌ನಲ್ಲಿ ಜಾಕ್‌ ಭಾರತಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಎಲ್ಲ ವಿವರಗಳನ್ನು ಮಾಧ್ಯಮಕ್ಕೆ ನೀಡಲಾಗಿಲ್ಲ.

English summary
Looking to expand its presence in India, Chinese ecommerce giant Alibaba's Chairman Jack Ma met Prime Minister Narendra Modi, as he came on a visit to India for the second time in just about four months. In his meeting with Modi, Ma discussed how Alibaba can help empower small businesses in India, the ecommerce major said without elaborating further.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X