ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2016ರಲ್ಲಿ 2.5 ಲಕ್ಷ ಮಂದಿಗೆ ಐಟಿ ಉದ್ಯೋಗಾವಕಾಶ

By Mahesh
|
Google Oneindia Kannada News

ಬೆಂಗಳೂರು, ಫೆ. 03: ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಹಂಬಲ ಹೊಂದಿರುವ ಪದವೀಧರರಿಗೆ ಸುದ್ದಿ ಇಲ್ಲಿದೆ. 2016ರಲ್ಲಿ ಸರಿ ಸುಮಾರು 2.5 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ.

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲೇ ಸುಮಾರು 70,000 ನೇಮಕಾತಿ ನಡೆಯಲಿದೆ ಎಂದು ನೇಮಕಾತಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[ಇನ್​ವೆಸ್ಟ್ ಕರ್ನಾಟಕ 2016ಕ್ಕಾಗಿ ಮೊಬೈಲ್ ಆಪ್]

ಸರ್ವೀಸ್ ಆಧಾರಿತ ಕಂಪನಿಗಳು ಸಲ್ಯೂಷನ್ ಆಧಾರಿತ ಕಂಪನಿಗಳಾಗಿ ಬದಲಾಗಲಿವೆ. ಹೆಚ್ಚೆಚ್ಚು ಡಿಜಲೀಕರಣ ಕಾರ್ಯ ನಡೆಯಲಿದೆ. ಇದರಿಂದ ಐಟಿ ಕ್ಷೇತ್ರದ ನೇಮಕಾತಿಯಲ್ಲಿ ಶೇ 14 ರಿಂದ 16ರಷ್ಟು ಹೆಚ್ಚಳ ಕಂಡು ಬರಲಿದೆ. ಕಳೆದ ವರ್ಷ ಶೇ 12ರಷ್ಟು ಹೆಚ್ಚಳವಾಗಿತ್ತು.[ಇನ್ಫೋಸಿಸ್ ನಿಂದ 20 ಸಾವಿರ ನೇಮಕಾತಿ ಘೋಷಣೆ!]

‘IT sector to create 2.5 lakh new job openings in 2016’

ಗ್ರಾಹಕಸ್ನೇಹಿ ವಿನ್ಯಾಸಗಾರರು, ವೆಬ್ ಡೆವೆಲಪರ್ಸ್, ಪ್ರಾಡಕ್ಟ್ ಡೆವಲಪರ್ಸ್, ಮೊಬೈಲ್ಸ್ ಉತ್ಪನ್ನ, ಮಾಹಿತಿ ಸುರಕ್ಷತೆ ವಿಶ್ಲೇಷಕರು, ಕ್ಲೌಂಡ್ ವಿನ್ಯಾಸ, ಒಗ್ಗೂಡಿಸುವಿಕೆ, ಡಾಟಾ ವಿಜ್ಞಾನಿಗಳಲ್ಲದೆ ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಸಿಎಂಎಸ್) ತಂತ್ರಜ್ಞಾನದ ಮೇಲೆ ಹಿಡಿತ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಟೀಮ್ ಲೀಸ್ ಸರ್ವೀಸಸ್ ಸಂಸ್ಥೆ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅಲ್ಕಾ ಧಿಂಗ್ರಾ ಹೇಳಿದ್ದಾರೆ.[ಟೆಕ್ಕಿಗಳಿಗೆ ಕೈ ತುಂಬಾ ಸಂಬಳ ಸಿಗ್ತಿಲ್ಲವಂತೆ!]

ಇನ್ವೆಸ್ಟ್ ಕರ್ನಾಟಕ ಮೂಲಕ ಕರ್ನಾಟಕ ಸರ್ಕಾರ, ಆಟೋಮೊಬೈಲ್, ಏರೋಸ್ಪೇಸ್, ಮೆಷಿನ್ ಟೂಲ್ಸ್, ರಕ್ಷಣಾ ಖಾತೆ ಸಾಧನಗಳು, ಹೆವಿ ಇಂಜಿನಿಯರಿಂಗ್, ಕೃಷಿ ಹಾಗೂ ಆಹಾರ ಸಂಸ್ಕರಣೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಹಾಗೂ ಬಯೋ ಟೆಕ್ನಾಲಜಿ, ಮೂಲ ಸೌಕರ್ಯ ಅಭಿವೃದ್ಧಿ, ಖಾಸಗಿ ಕೈಗಾರಿಕಾ ಪಾರ್ಕ್, ಸ್ಮಾರ್ಟ್ ಟೌನ್ ಶಿಪ್, ಔಷಧ ಹಾಗೂ ಫಾರ್ಮಸ್ಯೂಟಿಕಲ್ಸ್ ಮುಂತಾದ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಭರವಸೆ ಹುಟ್ಟಿಸಿದೆ.(ಪಿಟಿಐ)

English summary
Hiring in the information technology sector is expected to see a significant uptrend this year as more and more companies focus on digitisation and the sector is likely to create 2.5 lakh new job openings this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X