ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು'

ಐಟಿ ಕಂಪೆನಿಗಳೆಲ್ಲ ಒಟ್ಟಾಗಿ ಮಾತನಾಡಿಕೊಂಡು ಹೊಸದಾಗಿ ಸಾಫ್ಟ್ ವೇರ್ ಉದ್ಯೋಗಕ್ಕೆ ಬರುವವರ ಸಂಬಳವನ್ನು ಕಡಿಮೆ ಇಟ್ಟಿವೆ. ಹೆಚ್ಚಿನ ಸಂಖ್ಯೆ ಎಂಜಿನಿಯರ್ ಬರುತ್ತಿದ್ದಾರೆ ಎಂದು ಹೀಗೆ ಮಾಡಲಾಗುತ್ತಿದೆ ಎಂಬುದು ಟಿವಿ ಮೋಹನ್ ದಾಸ್ ಪೈ ಆರೋಪ

|
Google Oneindia Kannada News

ಹೈದರಾಬಾದ್, ಫೆಬ್ರವರಿ 21: ಭಾರತದ ದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆ ಒದಗಿಸುವ ಕಂಪೆನಿಗಳೆಲ್ಲ ಒಟ್ಟಾಗಿ ಸೇರಿ, ಹೆಚ್ಚಿನ ಸಂಖ್ಯೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳು ಬರುತ್ತಿರುವುದನ್ನು ತಿಳಿದು, ಹೊಸಬರ ಸಂಬಳವನ್ನು ಕಡಿಮೆ ಮಾಡಿವೆ ಎಂದು ಟಿವಿ ಮೋಹನ್ ದಾಸ್ ಪೈ ಆರೋಪಿಸಿದ್ದಾರೆ.

"ಭಾರತದ ಐಟಿ ಉದ್ಯಮದ ಸಮಸ್ಯೆಯೇ ಇದು. ಇಲ್ಲಿನ ಐಟಿ ಕಂಪೆನಿಗಳು ಹೊಸಬರಿಗೆ ಒಳ್ಳೆ ಸಂಬಳ ಕೊಡುತ್ತಿಲ್ಲ. ದೊಡ್ಡ ಕಂಪೆನಿಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡು ಸಂಬಳ ಹೆಚ್ಚಿಸುತ್ತಿಲ್ಲ" ಎಂದು ಅವರು ಪಿಟಿಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ್ದಾರೆ.[ಒಳ್ಳೆ ಜನರು ಕೂಡ ಕೆಲವು ತಪ್ಪು ಮಾಡ್ತಾರೆ: ಇನ್ಫಿ ಮೂರ್ತಿ]

IT companies ganged up to keep freshers' salary low: Mohandas Pai

ವರದಿಗಳ ಪ್ರಕಾರ ಎರಡು ದಶಕದ ಹಿಂದೆ ಹೊಸಬರಿಗೆ ವರ್ಷಕ್ಕೆ 2.25 ಲಕ್ಷ ರುಪಾಯಿ ಸಂಬಳ ಕೊಡಲಾಗುತ್ತಿತ್ತು. ಅದನ್ನು ಈಗ 3.5 ಲಕ್ಷ ರುಪಾಯಿಗೆ ಏರಿಸಲಾಗಿದೆ. ಹಣದುಬ್ಬರ ದರ ಏರಿಕೆಗೆ ಹೋಲಿಸಿದರೆ ಈ ಸಂಬಳ ಹೆಚ್ಚಳದ ಪ್ರಮಾಣ ತೀರಾ ಕಡಿಮೆ.

ಪೈ ಅವರು 1994ರಿಂದ 2006ರವರೆಗೆ ಇನ್ಫೋಸಿಸ್ ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. "ದೊಡ್ಡ ಕಂಪೆನಿಗಳು ಹೊಸಬರ ವೇತನ ಹೆಚ್ಚಿಸಬಾರದು ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದು ಒಳ್ಳೆ ಲಕ್ಷಣ ಅಲ್ಲ" ಎಂದು ಅವರು ಹೇಳಿದ್ದಾರೆ.[ಬೆಂಗಳೂರಿನಲ್ಲಿ ನಾಡೆಲ್ಲ, ಫ್ಲಿಪ್ ಕಾರ್ಟ್ ಜತೆಗೆ ಮೈಕ್ರೋಸಾಫ್ಟ್ ಒಪ್ಪಂದ]

ಸದ್ಯಕ್ಕೆ ಪೈ ಅವರು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸ್ ಹಾಗು ಆರಿನ್ ಕ್ಯಾಪಿಟಲ್ ನ ಅಧ್ಯಕ್ಷರಾಗಿದ್ದಾರೆ. "ಐಟಿ ಕಂಪೆನಿಗಳು ಹೊಸಬರ ವೇತನ ಹೆಚ್ಚಿಸಿ, ಈಗಾಗಲೇ ಉನ್ನತ ಸ್ಥಾನದಲ್ಲಿರುವವರ ವೇತನದಲ್ಲಿ ಕಡಿತ ಮಾಡಬೇಕು. ಆದರೆ ಕಳೆದ ಏಳೆಂಟು ವರ್ಷಗಳಿಂದ ದೊಡ್ಡ ಕಂಪೆನಿಗಳು ಒಂದಕ್ಕೊಂದು ಮಾತನಾಡಿಕೊಂಡು ಸಂಬಳ ಹೆಚ್ಚಿಸುತ್ತಿಲ್ಲ ಎಂದು ಪೈ ಹೇಳಿದ್ದಾರೆ.

ಸಾಫ್ಟ್ ವೇರ್ ಎಂಜಿನಿಯರ್ ಗಳ ಸಂಖ್ಯೆ ಹೆಚ್ಚಾಗಿದೆ. ಕೆಲಸ ಹಿಡಿಯುವುದಕ್ಕೆ ಯುವಕರು ಪರದಾಡುತ್ತಿದ್ದಾರೆ. ಆದ್ದರಿಂದಲೇ ಮೊದಲ ಮೂರು ವರ್ಷದಲ್ಲೇ ಕೆಲಸ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಅದೂ ಹೆಚ್ಚಿನ ಪಕ್ಷ ವೇತನದ ವಿಚಾರದಲ್ಲಿ ಅಸಮಾಧಾನವಾಗಿ ಕೆಲಸ ಬಿಡುವವರು ಹೆಚ್ಚು ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.

English summary
India's big IT services companies have ganged up to keep salary of freshers low taking advantage of oversupply of software engineers at the entry level, says industry veteran T V Mohandas Pai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X