ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ ತ್ರೈಮಾಸಿಕ : ಇನ್ಫೋಸಿಸ್ ನಿವ್ವಳ ಲಾಭ ತುಸು ಏರಿಕೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 14: ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಮೊದಲ ತ್ರೈಮಾಸಿಕದ ಫಲಿತಾಂಶ ಮಾರುಕಟ್ಟೆಯ ನಿರೀಕ್ಷೆ ಮಟ್ಟವನ್ನು ಮೀರಿದೆ.

ಜೂನ್ 30, 2017ರ ಅಂತ್ಯಕ್ಕೆ ಇನ್ಫೋಸಿಸ್ ಆದಾಯ ರೂ. 17,078 ಕೋಟಿ ಆಗಿದ್ದು, ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ. ಕಂಪನಿಯ ನಿವ್ವಳ ಆದಾಯ ರೂ. 3,483 ಕೋಟಿಯಾಗಿದ್ದು, ಇದು ಕೂಡ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿದೆ.

 Infosys Q1 net grows 1.3% to Rs 3,483 crore

ಜೂನ್ 2017ರಲ್ಲಿ ನಿವ್ವಳ ಲಾಭ ಶೇ 1.3ರಷ್ಟು ಏರಿಕೆ ಕಂಡು 3,483 ಕೋಟಿ ರು ಬಂದಿದೆ. ಏಪ್ರಿಲ್ ಜೂನ್ 2016-17ರಲ್ಲಿ ನಿವ್ವಳ ಲಾಭ 3,436 ಕೋಟಿ ರು ಬಂದಿತ್ತು.

ಬೆಂಗಳೂರು ಮೂಲದ ಸಂಸ್ಥೆಯ ಆದಾಯ ಶೇ 1.7ರಷ್ಟು ಏರಿಕೆ ಕಂಡು 17,078 ಕೋಟಿ ರು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16,782 ಕೋಟಿ ರು ಗಳಿಸಿತ್ತು.

ನಿವ್ವಳ ಉದ್ಯೋಗ ಕಡಿತ ಜೂನ್ ತ್ರೈಮಾಸಿಕ 1,811 ಆಗಿದೆ. ಆಟ್ರಿಷನ್ ದರ ಶೇ 16.9ರಷ್ಟಿತ್ತು. ಕಳೆದ ವರ್ಷ ಇದೇ ಅವಧಿಗೆ ಶೇ 15.8ರಷ್ಟಿತ್ತು.

English summary
The second-largest Indian IT exporter Infosys today reported 1.3 per cent growth in consolidated net profit at Rs 3,483 crore for the quarter to June 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X