ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q3: ಇನ್ಫೋಸಿಸ್ ಗೆ ನಿರೀಕ್ಷೆಗೂ ಮೀರಿದ ಲಾಭ

By Mahesh
|
Google Oneindia Kannada News

ಬೆಂಗಳೂರು, ಜ. 14: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರುಕಟ್ಟೆ ನಿರೀಕ್ಷೆಗೂ ಮೀರಿದ ಲಾಭ ಪಡೆದುಕೊಂಡಿದ್ದು, ಶೇ 1.9ರಷ್ಟು ನಿವ್ವಳ ಲಾಭ ಹೆಚ್ಚಳ ಕಂಡು 3,465 ಕೋಟಿ ರು ಗಳಿಸಿದೆ. ಆದಾಯ ಶೇ 1.7 ರಷ್ಟು ಏರಿಕೆಯಾಗಿದ್ದು ತ್ರೈಮಾಸಿಕದಿಂದ ತ್ರೈಮಾಸಿಕ ಲೆಕ್ಕದಂತೆ 15,902 ಕೋಟಿ ರು ಗಳಿಸಿದೆ.

ಈ ತ್ರೈಮಾಸಿಕಕ್ಕೆ 3,300 ಕೋಟಿ ರು ನಿರೀಕ್ಷೆಯಿತ್ತು. ಆದರೆ, 3,465 ಕೋಟಿ ರು ಗಳಿಸಿ ಉತ್ತಮ ಸಾಧನೆ ತೋರಿದೆ. ಡಾಲರ್ ನಂತೆ ಆದಾಯ ಈ ತ್ರೈಮಾಸಿಕಕ್ಕೆ ಶೇ 0.6 ರಷ್ಟು ಏರಿಕೆ ಕಂಡು 2,407 ಮಿಲಿಯನ್ ಯುಎಸ್ ಡಾಲರ್ ಗಳಿಸಿದೆ. ಕಳೆದ ತ್ರೈಮಾಸಿಕದಲ್ಲಿ 2,392 ಮಿಲಿಯನ್ ಯುಎಸ್ ಡಾಲರ್ ಗಳಿಸಿತ್ತು. [ಈ ದಿನದ ಷೇರುಪೇಟೆ ವಹಿವಾಟು ಅಂಕಿ ಅಂಶ]

Infosys Net Profit For Q3 At Rs 3,465 Crores
ಈ ತ್ರೈಮಾಸಿಕದಲ್ಲಿ ಡಾ. ಪುನೀತಾ ಕುಮಾರ್ ಸಿನ್ಹಾ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ನೇಮಿಸಲಾಗಿದೆ. ಜನವರಿ 14,2016 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರೊ. ಜೆಫ್ರಿ ಎಸ್ ಲೆಹ್ಮನ್ ಅವರು ಕೂಡಾ ಸ್ವತಂತ್ರ ನಿರ್ದೇಶಕರಾಗಿ ಏಪ್ರಿಲ್ 14, 2016ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇನ್ಫೋಸಿಸ್ ಸಂಸ್ಥೆಯ ಆಟ್ರಿಷನ್ ದರ ಶೇ 18.1ರಷ್ಟು ಪ್ರಮಾಣದಲ್ಲಿದ್ದು ಕಳೆದ ತ್ರೈಮಾಸಿಕದಲ್ಲಿ ಶೇ 19.9ರಷ್ಟಿತ್ತು. ಆದಾಯ ಪ್ರಗತಿ ದರ ಶೇ 8.9-9.3 ರಷ್ಟಿದ್ದು, ಈ ಮುಂಚೆ ಶೇ 6.4-804ರಷ್ಟು ನೀಡಲಾಗಿತ್ತು.

ಸಂಸ್ಥೆಯ ಶೇರುಗಳು ಗುರುವಾರ 1,135 ರು ನಂತೆ ಶೇ 4.93 ಏರಿಕೆ ಕಂಡಿತ್ತು ಬಿಎಸ್ ಇಯಲ್ಲಿ ಆರಂಭಿಕ ವಹಿವಾಟು ಚೇತರಿಕೆ ಪಡೆದುಕೊಂಡಿದೆ. ಇಂಟ್ರಾ ಡೇ ಹೊತ್ತಿಗೆ 1,139ರು ನಂತೆ ಏರಿಕೆ ಕಾಣುತ್ತಿದೆ. (ಒನ್ ಇಂಡಿಯಾ ಸುದ್ದಿ)

English summary
Software and IT major Infosys, reported profit after tax that beat analysts and street estimates. The company reported a net profit higher by 1.94 percent to Rs 3,465 crore and revenue rising 1.7 percent to Rs 15,902 crore quarter on quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X