ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಸಂಕಷ್ಟದಲ್ಲಿ ಇನ್ಫೋಸಿಸ್, ತಾರತಮ್ಯ ನೀತಿ ವಿರುದ್ಧ ಕೇಸ್

By Mahesh
|
Google Oneindia Kannada News

ಕ್ಯಾಲಿಫೋರ್ನಿಯಾ, ಜೂನ್ 22 : ಭಾರತದ ಎರಡನೇ ಅತಿದೊಡ್ಡ ಐಟಿ ರಫ್ತು ಸಂಸ್ಥೆ ಇನ್ಫೋಸಿಸ್ ಮತ್ತೊಮ್ಮೆ ಕಾನೂನು ಸಮರಕ್ಕೆ ಸಜ್ಜಾಗಬೇಕಿದೆ. ಉದ್ಯೋಗಿಗಳ ಮೇಲೆ ಸಂಸ್ಥೆಯ ಹಿರಿಯ ಸಿಬ್ಬಂದಿಗಳಿಂದ ತಾರತಮ್ಯವಾಗುತ್ತಿದೆ ಎಂದು ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಕೇಸ್ ಜಡೆದಿದ್ದಾರೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ನೌಕರರನ್ನು ಹೊರತು ಪಡಿಸಿ ಉಳಿದ ನೌಕರರೊಂದಿಗೆ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಜತೆಗೆ ತನ್ನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

Infosys faces fresh lawsuit in the U.S. former head of immigration

2011ರ ಅಕ್ಟೋಬರ್ ನಲ್ಲಿ ಟೆಕ್ಸಾನ್ ನ ಇನ್ಫೋಸಿಸ್ ಪ್ಲಾನೋ ಕಚೇರಿ ಸೇರಿದ್ದ ಎರಿಕ್ ಗ್ರೀನ್ ಅವರು ಟೆಕ್ಸಾಸ್ ನ ಪೂರ್ವ ಜಿಲ್ಲೆಯ ಯುಎಸ್ ಡಿಸ್ಟ್ರಿಕ್ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ನೌಕರರನ್ನು ಹೊರತು ಪಡಿಸಿ ಉಳಿದ ನೌಕರರೊಂದಿಗೆ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಜತೆಗೆ ತನ್ನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ದೂರಲಾಗಿದೆ.

ಇನ್ಫೋಸಿಸ್​ನ ಗ್ಲೋಬಲ್​ ಇಮಿಗ್ರೇಷನ್​ ವಿಭಾಗದ ಮುಖ್ಯಸ್ಥ ವಾಸುದೇವ ನಾಯಕ್​ ಮತ್ತು ಎಕ್ಸಿಕ್ಯೂಟೀವ್​ ವೈಸ್​ ಪ್ರೆಸಿಡೆಂಟ್​ ಹಾಗೂ ಗ್ಲೋಬಲ್​ ಹೆಡ್​ ಆಫ್​ ಟ್ಯಾಲೆಂಡ್​ ಮತ್ತು ಟೆಕ್ನಾಲಜಿ ವಿಭಾಗದ ಬಿನೋದ್​ ಹಂಪನಪುರ ರಂಗದೊರೆ​ ವಿರುದ್ಧ ಎರಿನ್​ ಗ್ರೀನ್​ ಅವರು ಜೂನ್​ 19 ರಂದು ಪ್ರಕರಣ ದಾಖಲಿಸಿದ್ದಾರೆ.

ಎರಿನ್​ ಗ್ರೀನ್​ ಅವರು ಇನ್ಫೋಸಿಸ್​ನ ಇಮಿಗ್ರೇಷನ್​ ವಿಭಾಗದ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಕೆಲವು ದಿನಗಳ ಹಿಂದೆ ಸಂಸ್ಥೆಯಿಂದ ವಜಾ ಮಾಡಲಾಗಿತ್ತು.

English summary
India’s second-largest IT exporter Infosys may have to face another legal battle in the U.S. as the company’s former head of immigration filed a lawsuit for alleged employee discrimination by senior management of the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X