ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೊಸಿಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರಿತಿಕಾ ಸೂರಿ ರಾಜೀನಾಮೆ

|
Google Oneindia Kannada News

ನವದೆಹಲಿ, ಜುಲೈ 19 : ದೈತ್ಯ ಐಟಿ ಸಂಸ್ಥೆ ಇನ್ಫೊಸಿಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರಿತಿಕಾ ಸೂರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ.

ಜೂನ್ ತ್ರೈಮಾಸಿಕ : ಇನ್ಫೋಸಿಸ್ ನಿವ್ವಳ ಲಾಭ ತುಸು ಏರಿಕೆಜೂನ್ ತ್ರೈಮಾಸಿಕ : ಇನ್ಫೋಸಿಸ್ ನಿವ್ವಳ ಲಾಭ ತುಸು ಏರಿಕೆ

ಇಸ್ರೇಲ್‌ನ ತಂತ್ರಜ್ಞಾನ ಸಂಸ್ಥೆ ಪನಯಾದ ಖರೀದಿಸಲು ಇನ್ಫೊಸಿಸ್ ಅಗತ್ಯಕ್ಕಿಂತ ಹೆಚ್ಚು ಹಣ ಪಾವತಿಸಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪಗಳ ಕುರಿತು ಆಂತರಿಕ ತನಿಖೆ ನಡೆಸಲು ಇನ್ಫೊಸಿಸ್, ಗಿಬ್ಸನ್ ಡನ್ ಆಂಡ್ ಕಂಟ್ರೋಲ್‌ ರಿಸ್ಕ್ಸ್ (ಜಿಡಿಸಿಆರ್) ಸಂಸ್ಥೆಗೆ ವಹಿಸಲಾಗಿತ್ತು. ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಜಿಡಿಸಿಆರ್ ವರದಿ ನೀಡಿತ್ತು.

Infosys Executive Vice-President Ritika Suri Quits

ಎಸ್‌ಎಪಿ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕಿಯಾಗಿದ್ದ ರಿತಿಕಾ ಸೂರಿ ಅವರನ್ನು ಇನ್ಫೊಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ಸಂಸ್ಥೆಗೆ ಕರೆತಂದಿದ್ದರು.

ಸ್ಟಾರ್ಟ್‌ಅಪ್‌ಗಳಲ್ಲಿ ಬಂಡವಾಳ ತೊಡಗಿಸುವ ಉದ್ದೇಶಕ್ಕೆ 3,250 ಕೋಟಿಗಳ ನಿಧಿ ಸ್ಥಾಪಿಸಲು ಇವರು ಸಂಸ್ಥೆಗೆ ನೆರವಾಗಿದ್ದರು.

English summary
Infosys executive vice-president Ritika Suri, who was focused on getting large deals, has resigned from the company, according to sources. Suri, who led the acquisition of Israeli automation technology firm Panaya for Infosys, was based out of the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X