ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರೀ ದೇಣಿಗೆ ನೀಡಿದ ಐಟಿ ದಿಗ್ಗಜ ಇನ್ಪೋಸಿಸ್

|
Google Oneindia Kannada News

ಬೆಂಗಳೂರು, ಅ. 28: ಅಮೆರಿಕದ ನ್ಯೂ ಜೆರ್ಸಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್ (ಐಎಎಸ್)ಗೆ ಭೇಟಿ ನೀಡಿ ವಿವಿಧ ಸಂಶೋಧನೆಗಳಲ್ಲಿ ಭಾಗಿಯಾಗುವವರಿಗೆ ನೆರವು ನೀಡಲು ಇನ್ಫೋಸಿಸ್ 2 ಲಕ್ಷ ಡಾಲರ್ ನೆರವು ನೀಡಿದೆ. ವಿಜ್ಞಾನದ ಮೂಲ ತತ್ವಗಳು ಮತ್ತು ವಿಶೇಷ ಸಂಶೋಧನೆಗೆ ಈ ಹಣ ಬಳಸಿಕೊಳ್ಳಲಾಗುತ್ತದೆ.

ಮಾನವೀಯ ಮೌಲ್ಯಗಳು ಮತ್ತು ಉತ್ತರ ಕಂಡು ಹಿಡಿಯಲಾಗದ ವಿಜ್ಞಾನದ ಪ್ರಶ್ನೆಗಳು ಇಲ್ಲಿ ಪ್ರಮುಖವಾಗುತ್ತವೆ. ವಿಶ್ವದ ಪ್ರಮುಖ ವಿಶ್ವವಿದ್ಯಾನಿಲಯಗಳಿಂದ ಆಗಮಿಸಿದವರು ಈ ಬಗ್ಗೆ ಸಂಶೋಧನೆ ನಡೆಸಲು ಈ ಹಣ ಬಳಕೆಯಾಗುತ್ತದೆ.[ನಿರೀಕ್ಷೆಗೂ ಮೀರಿದ ಲಾಭ ದಾಖಲಿಸಿದ ಇನ್ಫೋಸಿಸ್]

 infosys

ಹೆಚ್ಚಿನ ಸಂಶೋಧನೆ ಮತ್ತು ಅಭ್ಯಾಸಕ್ಕೆ ಇನ್ಫೋಸಿಸ್ ನೀಡದ ಹಣ ಬಳಕೆಯಾಗಲಿದೆ. ಇದನ್ನು ಒಂದು ಉತ್ತಮ ಕೆಲಸದ ಆರಂಭ ಎಂದು ಅಂದುಕೊಂಡಿದ್ದೇವೆ. 80 ವರ್ಷದಿಂದ ವಿವಿಧ ಸಂಶೋಧನೆಗಳಲ್ಲಿ ಭಾಗಿಯಾಗಿರುವ ಸಂಸ್ಥೆಗೆ ಈ ಹಣ ಹೊಸ ಚೈತನ್ಯ ನೀಡಿದೆ ಎಂದು ಐಎಎಸ್ ನಿರ್ದೇಶಕ ರಾಬರ್ಟ್ ಹೇಳಿದ್ದಾರೆ.[ನಿರ್ಗಮನದ ಹೊಸ್ತಿಲಲ್ಲಿ ಇನ್ಫೋಸಿಸ್ಸಿನ 'ಸೇನಾಪತಿ']

ನಾವು ಯಾವಾಗಲೂ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡುತ್ತಲೇ ಬಂದಿದ್ದೇವೆ. ವಿಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಐಎಎಸ್ ತೊಡಗಿಕೊಂಡಿದ್ದು ಅದಕ್ಕೆ ಸಹಕಾರ ನೀಡುವ ಉದ್ದೇಶದಿಂದ ದೇಣಿಗೆ ನೀಡಿದ್ದೇವೆ. ನಮ್ಮ ಹಣ ಉತ್ತಮ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ತೃಪ್ತಿ ತಂದಿದೆ ಎಂದು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ.

English summary
Infosys and the Institute for Advanced Study (IAS) announced a new endowment fund that will be used to support visiting scientists and scholars advance their research at the world-renowned institute in Princeton, New Jersey. The Infosys Fund has been created following a donation of US$2 million by Infosys to the IAS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X