ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸ್ಕಾವಾ' ಖರೀದಿಸಿದ ಐಟಿ ದಿಗ್ಗಜ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಜೂ. 06: ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಇ- ಕಾಮರ್ಸ್ ಸಂಸ್ಥೆ ಸ್ಕಾವಾವನ್ನು ಖರೀದಿ ಮಾಡಿದೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಬೃಹತ್ ಕಂಪನಿಗಳನ್ನು ಇನ್ಫಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಖರೀದಿ ಪ್ರಕ್ರಿಯೆ ಕಳೆದ ಏಪ್ರಿಲ್​ನಲ್ಲೇ ಆರಂಭವಾಗಿತ್ತು. ಸ್ಕಾವಾವನ್ನು 768 ಕೋಟಿ ರೂ.ಗಳಿಗೆ ಖರೀದಿ ಮಾಡಲಾಗಿತ್ತು. ಈಗ ಆರಂಭಿಕವಾಗಿ ಸ್ಕಾವಾದ ಅಂಗಸಂಸ್ಥೆ ಕಾಲ್ಲಿಡಸ್ ಇಂಕ್ ಅನ್ನು ಇನ್ಫೋಸಿಸ್ ತನ್ನ ವಶಕ್ಕೆ ಪಡೆದುಕೊಂಡಿದೆ.[ಉದ್ಯೋಗಿಗಳಿಗೆ 'ವಸ್ತ್ರ ಸ್ವಾತಂತ್ರ್ಯ' ಕೊಟ್ಟ ಸಿಕ್ಕಾ]

infosys

ಹಿಂದೆ ಇಸ್ರೇಲ್ ಮೂಲದ ಪನಾಯಾ ಸಂಸ್ಥೆಯನ್ನು 1280 ಕೋಟಿ ರೂ.ಗೆ ಖರೀದಿ ಮಾಡಲಾಗಿತ್ತು. 2020ರ ವೇಳೆ ಇನ್ಫೋಸಿಸ್ ಮೌಲ್ಯ 1.28 ಲಕ್ಷ ಕೋಟಿ ರು. ಗೆ ಏರಲಿದೆ. ಸಿಇಒ ವಿಶಾಲ್ ಸಿಕ್ಕಾ ಈ ಬಗ್ಗೆ ವಿವರ ನೀಡಿದ್ದು ಮಾರುಕಟ್ಟೆ ವಿಸ್ತಾರದ ದೃಷ್ಟಿಯಲ್ಲಿ ಇದೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ. ಹೊಸ ಸೇರ್ಪಡೆ ಸಂಸ್ಥೆಗಳಿಂದ ಇನ್ಫೋಸಿಸ್ ವಾರ್ಷಿಕ 9600 ಕೋಟಿ ರೂ. ಆದಾಯ ನಿರೀಕ್ಷೆ ಹೊಂದಿದೆ.[ಕನ್ನಡಿಗ ಕೆವಿ ಕಾಮತ್ ಜಾಗಕ್ಕೆ ಶೇಷಸಾಯಿ]

ಇನ್ಫಿ ತನ್ನ ಆಡಳಿತ ಮಂಡಳಿಯಲ್ಲೂ ಕೆಲ ಬದಲಾವಣೆ ಮಾಡಿದ್ದು ಸ್ವತಂತ್ರ ನಿರ್ದೇಶಕರ ಸ್ಥಾನಕ್ಕೆ ಶೇಷಸಾಯಿ ಅವರನ್ನು ನೇಮಕ ಮಾಡಲಾಗಿತ್ತು, ಕನ್ನಡಿಗ ಕೆವಿ ಕಾಮತ್ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ರಾಗಿ ನೇಮಕವಾದ ಹಿನ್ನಲೆಯಲ್ಲಿ ಬದಲಾವಣೆ ಮಾಡಲಾಗಿತ್ತು.

English summary
India's second largest software exporter Infosys, which in April agreed to buy e-commerce services provider Skava for $120 million, said that it had completed the acquisition of Kallidus Inc, which is the holding group behind Skava. In a statement posted on their website, Infosys said it completed the acquisition of Kallidus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X