ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಟೆಕ್ಕಿಗಳಿಗೆ ಕೈ ತುಂಬಾ ಸಂಬಳ ಸಿಗ್ತಿಲ್ಲವಂತೆ!

By Mahesh
|
Google Oneindia Kannada News

ನವದೆಹಲಿ, ಸೆ. 22: ವಿಶ್ವದ ಅತಿ ಕಳಪೆ ಸಂಬಳ ಪಡೆಯುವ ಟಾಪ್ 10 ಪಟ್ಟಿಯಲ್ಲಿ ಭಾರತದ ಐಟಿ ಕಂಪನಿಗಳು ಕಾಣಿಸಿಕೊಂಡಿವೆ. ಸ್ವಿಸ್ ಕಂಪನಿಗಳು ಭಾರತೀಯ ಕಂಪನಿಗಳ ಉದ್ಯೋಗಿಗಳ ಸಂಬಳದ ನಾಲ್ಕು ಪಟ್ಟು ಪಗಾರ ಎಣಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮೈಹೈರಿಂಗ್ ಕ್ಲಬ್.ಕಾಂ ಎಂಬ ನೇಮಕಾತಿ ಸಂಸ್ಥೆ ನಡೆಸಿದ ಐಟಿ ಸ್ಯಾಲರಿ 2015 ಸಮೀಕ್ಷೆಯಲ್ಲಿ ಕಡಿಮೆ ಸಂಬಳ ಪಡೆಯುವ ಐಟಿ ಉದ್ಯೋಗಿ(ಮ್ಯಾನೇಜರ್ ಮಟ್ಟ)ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನ ಪಡೆದುಕೊಂಡಿದೆ.ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕೆಳಕ್ಕೆ ಕುಸಿದಿದೆ.

ಭಾರತದಲ್ಲಿ ಮಧ್ಯಮ ಶ್ರೇಣಿಯ ಐಟಿ ಮ್ಯಾನೇಜರ್ ವಾರ್ಷಿಕ 41,213 ಯುಎಸ್ ಡಾಲರ್ ಸಂಬಳ ಪಡೆಯುತ್ತಿದ್ದರೆ, ಕನಿಷ್ಠ ಸ್ಥಾನದಲ್ಲಿರುವ ಬಲ್ಗೇರಿಯಾದಲ್ಲಿ 25,680 ಡಾಲರ್ ನೀಡಲಾಗುತ್ತಿದೆ. ವಿಯೇಟ್ನಾಂ (30,938 ಡಾಲರ್) ಮತ್ತು ಥೈಲಂಡ್ (34,423 ಡಾಲರ್) ಅದಕ್ಕಿಂತ ಕೊಂಚ ಉತ್ತಮ ಸ್ಥಿತಿಯಲ್ಲಿರುವ ರಾಷ್ಟ್ರಗಳಾಗಿವೆ.

Indian IT companies among world's worst paymasters: Report

ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯ (34,780 ಡಾಲರ್), ಫಿಲಿಪ್ಪೀನ್ಸ್(37,534 ಡಾಲರ್), ಚೀನಾ(42,689 ಡಾಲರ್), ಝೆಕ್ ರಿಪಬ್ಲಿಕ್ (43,219 ಡಾಲರ್) ಮತ್ತು ಅರ್ಜೆಂಟಿನಾ (51,380 ಡಾ.) ಇವೆ. ಇವುಗಳ ನಡುವೆ ಭಾರತ ಏಳನೆಯ ಸ್ಥಾನದಲ್ಲಿದೆ.

ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುವ ರಾಷ್ಟ್ರಗಳಲ್ಲಿ ಸ್ವಿಝರ್‌ಲೆಂಡ್ ಅಗ್ರ ಸ್ಥಾನದಲ್ಲಿದೆ. ಅಲ್ಲಿ ಸರಾಸರಿ ವಾರ್ಷಿಕ 1,71,465 ಡಾ.ವೇತನ ಲಭಿಸುತ್ತಿದ್ದರೆ, 1,52,430 ಡಾಲರ್ ವೇತನದೊಂದಿಗೆ ಬೆಲ್ಜಿಯಂ ಎರಡನೆ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್(1,38,920 ಡಾ.), ಅಮೆರಿಕ(1,32,877 ಡಾ.) ಮತ್ತು ಬ್ರಿಟನ್(1,29,324 ಡಾ.)ಗಳಿವೆ.

ಕಡಿಮೆ ವೇತನಕ್ಕೆ ಸೇವೆ ಲಭ್ಯವೆಂಬ ಕಾರಣಕ್ಕಾಗಿ ಭಾರತ ಅತ್ಯಂತ ಮೆಚ್ಚುಗೆಯ ಹೊರಗುತ್ತಿಗೆ ತಾಣವಾಗಿದೆ, ಆದರೆ ಭವಿಷ್ಯದಲ್ಲಿ ಈ ಚಿತ್ರಣ ಸಂಪೂರ್ಣ ವಿರುದ್ಧವಾಗಬಹುದು ಎಂದು ಸಮೀಕ್ಷೆಯು ಹೇಳಿದೆ.,ಆಗಸ್ಟ್.1-31, 2015ರ ಅವಧಿಯಲ್ಲಿ 40 ರಾಷ್ಟ್ರಗಳಲ್ಲಿನ ಒಟ್ಟೂ 9,413 ಐಟಿ ಕಂಪೆನಿಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. (ಪಿಟಿಐ)

English summary
Indian IT companies are among the 10 worst paymasters in the world, says a survey -- a mid-level IT manager draws an average salary of $41,213 while his Swiss counterpart gets over four times more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X