ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ನೌಕರ ವರ್ಗ ಬಯಸುವುದು ಏನು ಗೊತ್ತೇ?

By Kiran B Hegde
|
Google Oneindia Kannada News

ಮುಂಬೈ, ಫೆ. 12: ಜಗತ್ತಿನಲ್ಲಿಯೇ ಭಾರತ ಹಾಗೂ ಚೀನಾದಲ್ಲಿ ನೌಕರರು ಅತಿ ದೊಡ್ಡ ಸಂಖ್ಯೆಯಲ್ಲಿ ಲಭ್ಯವಾಗುತ್ತಿದ್ದಾರೆ. ಭಾರತ ತನ್ನ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿನ ಭಾಗ ಯುವಸಂಪತ್ತನ್ನು ಹೊಂದಿದೆ. ಹಲವು ಪಾಶ್ಚಿಮಾತ್ಯ ರಾಷ್ಟ್ರಗಳ ಕಂಪನಿಗಳು ಭಾರತದಿಂದ ಸಾಫ್ಟ್‌ವೇರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊರಗುತ್ತಿಗೆ ಸೇವೆ ಪಡೆಯುತ್ತಿವೆ.

ಹಾಗಿದ್ದರೆ ಭಾರತದಲ್ಲಿರುವ ಭಾರೀ ಸಂಖ್ಯೆಯ ನೌಕರ ವರ್ಗ ಪ್ರಮುಖವಾಗಿ ಬಯಸುವುದು ಏನನ್ನು ಗೊತ್ತೇ? ಕೆಲಸದ ಭದ್ರತೆ. ಟಾವರ್ಸ್ ವ್ಯಾಟ್ಸನ್ ಎಂಬ ಅಮೆರಿಕ ಮೂಲಕ ಕಂಪನಿಯೊಂದು ನಡೆಸಿದ 'ಗ್ಲೋಬಲ್ ವರ್ಕ್‌ಫೋರ್ಸ್ ಸ್ಟಡಿ 2014' ಅಧ್ಯಯನ ವರದಿಯಲ್ಲಿ ಈ ವಿಷಯ ಬಯಲಾಗಿದೆ. ಭಾರತೀಯರು ಮುಖ್ಯವಾಗಿ ಕೆಲಸದ ಭದ್ರತೆ, ಸಂಬಳ ಹಾಗೂ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಅವಕಾಶಕ್ಕೆ ಆದ್ಯತೆ ನೀಡುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. [ಫೆ. 20ರಿಂದ ಸೇನಾ ನೇಮಕಾತಿ]

job

ಭಾರತೀಯರು ಉದ್ಯೋಗ ಅರಸುವಾಗ ಮತ್ತು ಒಂದು ಕಂಪನಿ ಸೇರುವಾಗ ಮೇಲೆ ಹೇಳಿದ ಮೂರು ಅಂಶಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಅದರಲ್ಲಿಯೂ ಕೆಲಸದ ಭದ್ರತೆಗೆ ಮೊದಲ ಸ್ಥಾನ ನೀಡುತ್ತಾರೆ. ಸಂಬಳ ಎರಡನೇ ಸ್ಥಾನದಲ್ಲಿ ಹಾಗೂ ಭವಿಷ್ಯ ಕಟ್ಟಿಕೊಳ್ಳಲು ಇರುವ ಅವಕಾಶ ಮೂರನೇ ಸ್ಥಾನದಲ್ಲಿದೆ. [150 ಉಪನ್ಯಾಸಕರ ನೇಮಕಕ್ಕೆ ಒಪ್ಪಿಗೆ]

ಭಾರತೀಯ ನೌಕರರು ಉದ್ವೇಗಗೊಳ್ಳಲು ಪ್ರಮುಖ ಕಾರಣ ಅತಿಯಾದ ಕೆಲಸ. ಕೆಲಸಕ್ಕೆ ಪೂರಕ ವಾತಾವರಣ ಇಲ್ಲದಿರುವುದು ಮತ್ತೊಂದು ಕಾರಣ.

English summary
A survey conducted by Towers Watson company says, job security is the top most reason for Indian employees. Then comes salary and career development to join and stay in an organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X