ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯರನ್ನು ಯುಕೆಯಿಂದ ಗಡಿಪಾರು ಮಾಡಿ: ಭಾರತ

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 28: ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಸಾಲ ಪಡೆದು ಯುಕೆಗೆ ಪರಾರಿಯಾಗಿರುವ ವಿಜಯ್ ಮಲ್ಯ ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಉದ್ಯಮಿ ಮಲ್ಯರನ್ನು ಗಡಿಪಾರು ಮಾಡುವಂತೆ ಯುಕೆ ರಾಯಭಾರಿ ಕಚೇರಿಗೆ ವಿದೇಶಾಂಗ ಸಚಿವಾಲಯ ಪತ್ರ ರವಾನಿಸಿದೆ.

ಮಲ್ಯ ಅವರು ಮಾರ್ಚ್ 2ರಂದು ಲಂಡನ್​ಗೆ ಹಾರಿದ್ದು, ಮನಿಲಾಂಡ್ರಿಂಗ್, ಬ್ಯಾಂಕ್ ಸಾಲ ಸೇರಿದಂತೆ ಅನೇಕ ಆರ್ಥಿಕ ಅವ್ಯವಹಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆಗಾಗಿ ಕೋರ್ಟ್ ಕಳಿಸಿದ ಸಮನ್ಸ್, ನೋಟಿಸ್ ಹಾಗೂ ರೆಡ್ ಕಾರ್ನರ್ ನೋಟಿಸ್ ಗಳಿಗೆ ಮಲ್ಯ ಅವರು ಸರಿಯಾಗಿ ಉತ್ತರಿಸಿಲ್ಲ. [ಮಲ್ಯ ಮುಂದಿರುವ ನಾಲ್ಕು ಆಯ್ಕೆಗಳು?]

India writes to UK, seeks Vijay Mallya's deportation

9 ಸಾವಿರ ಕೋಟಿ ರು ಗೂ ಅಧಿಕ ಸಾಲದ ಹೊರೆ ಹೊತ್ತಿರುವ ಮಲ್ಯ ಅವರು ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲದ ಕಾರಣ ಕ್ರಮ ಸಂಸತ್ ಶಿಸ್ತು ಸಮಿತಿ ಕಠಿಣ ಕ್ರಮ ಜರುಗಿಸಲು ಮುಂದಾಗಿದ್ದು, ರಾಜ್ಯಸಭಾ ಸದಸ್ಯತ್ವದಿಂದ ಹೊರಹಾಕುವಂತೆ ಶಿಫಾರಸು ಮಾಡಲು ಮುಂದಾಗಿರುವ ಸುದ್ದಿ ತಿಳಿದಿರಬಹುದು. [100 ಕೋಟಿ ರು ಮೌಲ್ಯದ ಬಂಗಲೆಯಲ್ಲಿ ಮಲ್ಯ ನೆಲೆ]

ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಜಾರಿ ನಿರ್ದೇಶನಾಲಯ ಏಪ್ರಿಲ್ 15ರಂದು ಮನವಿ ಸಲ್ಲಿಸಿತ್ತು.ಅದರಂತೆ ಮಲ್ಯ ಅವರ ಪಾಸ್ ಪೋರ್ಟ್ ರದ್ದಾಗಿತ್ತು.

English summary
India on Thursday initiated a move to seek deportation of liquor baron Vijay Mallya. The Ministry of External Affairs has written to United Kingdom High Commission seeking Mallya's deportation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X