ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊಬೈಲ್ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಎಷ್ಟು?

|
Google Oneindia Kannada News

ನವದೆಹಲಿ, ಜು. 20: ಭಾರತದಲ್ಲಿ ಇರುವ ಮೊಬೈಲ್ ಅಂತರ್ಜಾಲ ಬಳಕೆದಾರರ ಸಂಖ್ಯೆ ಎಷ್ಟಿರಬಹುದು? ಹೀಗೊಂದು ಪ್ರಶ್ನೆ ನಿಮ್ಮ ತಲೆಯಲ್ಲಿ ಯಾವಾಗಲಾದರೂ ಬಂದಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

2016 ಕ್ಕೆ ಅಂತ್ಯಕ್ಕೆ ಭಾರತದಲ್ಲಿ ಒಟ್ಟು 236 ಮಿಲಿಯನ್ ಮೊಬೈಲ್ ಇಂಟರ್ನೆಟ್ ಬಳಕೆದಾರರಿರುತ್ತಾರಂತೆ. ಇಂಟರ್ನೆಟ್ ಆಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(ಐಎಎಂಎಐ)ಇಂಥದ್ದೊಂದು ವರದಿಯನ್ನು ನೀಡಿದೆ. 2017 ರ ಅಂತ್ಯಕ್ಕೆ ಇದು 314 ಮಿಲಿಯನ್ ಗೆ ತಲುಪಲಿದೆ ಎಂದು ಇಂಡಿಯಾ ಆನ್ ದಿ ಗೊ ಮೊಬೈಲ್ 2015 ವರದಿ ಹೇಳಿದೆ.[ನೆಟ್ ನ್ಯೂಟ್ರಾಲಿಟಿ ಎಂದರೇನು? ನಾವೇನು ಮಾಡ್ಬೇಕು?]

mobile

2017 ಕ್ಕೆ ಭಾರತದಲ್ಲಿ 500 ಮಿಲಿಯನ್ ಅಂತರರ್ಜಾಲ ಬಳಕೆದಾರಿರುತ್ತಾರೆ. ಸದ್ಯ 350 ಮಿಲಿಯನ್ ಬಳಕೆದಾರರಿದ್ದಾರೆ. ನೇರ ಅಂತರ್ಜಾಲ ಬಳಕೆಯಿಂದ ಮೊಬೈಲ್ ಅಂತರ್ಜಾಲ ಬಳಕೆಯತ್ತ ಜನ ಒಲವು ತೋರುತ್ತಿರುವುದು ಇದರಿಂದ ವ್ಯಕ್ತವಾಗುತ್ತಿದೆ.

3ಜಿ ಸಂಪರ್ಕಕ್ಕೆ ವಿಶೇಷ ಬೇಡಿಕೆಯಿದ್ದು 2013 ರಿಂದ ಪ್ರತಿವರ್ಷ ಶೇ. 61 ರಷ್ಟು ಬೆಳವಣಿಗೆ ಸಾಧಿಸುತ್ತಿದೆ. ನಾಗರಿಕರ ನಡುವಿನ ಸಂಪರ್ಕ ಸಾಧನವಾಗಿ, ಸೌಲಭ್ಯಗಳ ಬಳಕೆಯ ಸಾಧನವಾಗಿ ಮೊಬೈಲ್ ಇಂಟರ್ನೆಟ್ ಕೆಲಸ ಮಾಡಲಿದೆ.[ಮೇಕ್ ಇನ್ ಇಂಡಿಯಾ: ಉತ್ಪಾದನೆ ಆರಂಭಿಸಿದ ತೈವಾನ್ ಕಂಪನಿ ]

ಗ್ರಾಮೀಣ ಭಾಗಗಳಿಗೂ ಮೊಬೈಲ್ ಇಂಟರ್ನೆಟ್ ವೇಗವಾಗಿ ವ್ಯಾಪಿಸುತ್ತಿದೆ. ಜನರಿಗೆ ಕ್ಷಣ ಮಾತ್ರದಲ್ಲಿ ಮಾಹಿತಿ ನೀಡಲು ಇದರಿಂದ ಸಾಧ್ಯವಾಗುತ್ತದೆ. ಅಲ್ಲದೇ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದು ಐಎಎಂಎಐ ಅಧ್ಯಕ್ಷ ಡಾ. ಸುಭೋ ರಾಯ್ ತಿಳಿಸಿದ್ದಾರೆ.

ಹೆಚ್ಚಿನ ಮಾಃಇತಿಗೆ
ನೀಲೋತ್ ಪಾಲ್ ಚಕ್ರವರ್ತಿ,
[email protected] /+91-98106-72906
ದೀಪಿಕಾ
[email protected] / +91 98990 79870
[email protected] / +91 98117 88350 ಸಂಪರ್ಕಿಸಬಹುದು.

English summary
India is projected to have 236 million mobile internet users by 2016, with the figure reaching 314 million by 2017, a report said on Monday. The country will have over 500 million internet users by 2017 as compared with over 350 million as of June 2015, 'India On The Go - Mobile Internet Vision Report 2015' pointed out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X