ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ ಹೇಳು ಹೇಗಿರುವೆ? ದರ ಏರಿಕೆ ಹಾದಿಯಲ್ಲಿರುವೆ

|
Google Oneindia Kannada News

ನವದೆಹಲಿ, ಫೆಬ್ರವರಿ, 11: ಇತ್ತ ಷೇರು ಮಾರುಕಟ್ಟೆ ಪಾತಾಳದತ್ತ ಮುಖ ಮಾಡಿದ್ದರೆ ಚಿನ್ನ ತನ್ನಬೆಲೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡಿದೆ. ದಿನೇ ದಿನೇ ದರದಲ್ಲಿ ಏರಿಕೆಯಾಗುತ್ತಿದ್ದು 28 ಸಾವಿರ ರು. ಗಡಿಗೆ ಬಂದು ನಿಂತಿದೆ.

ಜಾಗತಿಕ ಮಾರುಕಟ್ಟೆಯ ಬದಲಾವಣೆಮತ್ತು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಗೆ ಹೆಚ್ಚಿದ ಉತ್ಸಾಹ ದರ ಏರಿಕೆಗೆ ಮೂಲ ಕಾರಣ. ಕಳೆದ 1 ವರ್ಷದ ಅವಧಿಯಲ್ಲಿ ಒಂದೇ ದಿನದಲ್ಲಿ ಚಿನ್ನ ಅತಿಹೆಚ್ಚು ದರ ದಾಖಲಿಸಿದೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ಚಿನ್ನಾಭರಣ ಖರೀದಿ ಸಂದರ್ಭದಲ್ಲಿ 2ಲಕ್ಷಕ್ಕೂ ಹೆಚ್ಚು ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ಕೇಂದ್ರ ಸರ್ಕಾರದ ನಿಯಮವನ್ನು ವಿರೋಧಿಸಿ ಆಭರಣದ ಅಂಗಡಿ ಮಾಲೀಕರು ಒಂದು ದಿನದ ಪ್ರತಿಭಟನೆಯನ್ನು ನಡೆಸಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಯಾಗಿದ್ದು, ಕಳೆದ ಜೂನ್ ನಂತರ ಇದೇ ಮೊದಲ ಬಾರಿಗೆ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ 1200 ಡಾಲರ್ ಗೆ ತಲುಪಿದೆ.[ಚಿನ್ನದ ಮೇಲೆ ಹೂಡಿಕೆಗೆ ಇದು ಸಕಾಲವೇ?]

ಇಂದಿನ ವಿವಿಧ ನಗರಗಳ ಚಿನ್ನದ ದರ

ಭಾರತದಲ್ಲಿ ಮದುವೆ ಮತ್ತು ಹಬ್ಬಗಳ ಕಾಲ ಆರಂಭವಾಗಿರುವುದು. ಹೂಡಿಕೆದಾರರು ಷೇರು ಮಾರುಕಟ್ಟೆ ತೊರೆದು ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡಿರುವುದು ದರ ಏರಿಕೆಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗಿದೆ. ಆರ್ಥಿಕ ತಜ್ಞರು ಜನವರಿ ಅಥವಾ ಫೆಬ್ರವರಿ ವೇಳೆಗೆ ಚಿನ್ನದ ದರ ಏರಿಕೆಯಾಗಲಿದೆ ಎಂದು ಹೇಳಿದ್ದರು.

ಬೆಂಗಳೂರಲ್ಲಿ ಎಷ್ಟಿದೆ?
ಬೆಂಗಳೂರಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 26,320 ರು. ಮತ್ತು 24 ಕ್ಯಾರಟ್ ಚಿನ್ನಕ್ಕೆ 28,160 ರು. ನಲ್ಲಿ ವಹಿವಾಟು ನಡೆಯುತ್ತಿದೆ. ಮುಂಬೈ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ದರ ದಾಖಲಾಗಿದೆ.

English summary
Gold prices traded at a one-and-a-half-year high in Mumbai's spot market following a sharp recovery in global markets. However, buyers were absent in the market and prices were to be quoted at a huge discount to the cost of imports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X