ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಪಾದನಾ ಘಟಕಗಳ ಪೈಕಿ ಬಾಷ್ ಸಂಬಳವೇ ಅಧಿಕ!

By Mahesh
|
Google Oneindia Kannada News

ಬೆಂಗಳೂರು, ಡಿ.11: ಬಾಷ್ ಲಿಮಿಟೆಡ್ ಬೆಂಗಳೂರು ಘಟಕವು ಕಾರ್ಮಿಕ ಸಂಘವಾದ ಮೈಕೊ ಎಂಪ್ಲಾಯೀಸ್ ಅಸೋಸಿಯೇಶನ್ (ಎಂ.ಇ.ಎ) ಜೊತೆ ಕೊನೆಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದಿದೆ. ಹೀಗಾಗಿ ಈ ವಾರದಿಂದ ಬಾಷ್ ನಲ್ಲಿ ಉತ್ಪಾದನೆ ಹೆಚ್ಚಳ, ಹೆಚ್ಚಿನ ಕಾರ್ಯಕ್ಷಮತೆ, ಉದ್ಯೋಗಿಗಳಲ್ಲಿ ಸಂತಸ ಎದ್ದು ಕಾಣುತ್ತಿದೆ.

2013-2016ರ ಅವಧಿಗೆ ಅನ್ವಯವಾಗುವ ವೇತನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕಾರ್ಮಿಕ ಸಂಘವು ಸೆಪ್ಟೆಂಬರ್ 16, 2014ರಿಂದ ಆರಂಭಿಸಿದ ದೀರ್ಘ ಕಾಲದ ಅನಧಿಕೃತ ಮುಷ್ಕರವು ಅಂತಿಮಗೊಂಡಿದೆ.

ಬಾಷ್ ಕಾರ್ಮಿಕರಲ್ಲಿ ಸಂತಸ : ಕಾರ್ಮಿಕರ ಸಂಘವು ಕೊನೆಯದಾಗಿ ಕಂಪನಿಯು ನೀಡಿದ ವೇತನದ ಮತ್ತು ಇತರ ಸೌಲಭ್ಯಗಳ ಪ್ರಸ್ತಾವವನ್ನು ಸ್ವೀಕರಿಸಲು ಒಪ್ಪಿದೆ ಮತ್ತು ಒಬ್ಬ ಸಾಮಾನ್ಯ ಕಾರ್ಮಿಕನಿಗೆ ನಿಯೋಜಿತ ಸರಾಸರಿ ಮಾಸಿಕ ಲಾಭವು (ಸಿ.ಟಿ.ಸಿ.) ರೂ. 64,000ರಿಂದ ರೂ. 86,000ಕ್ಕೆ ಹೆಚ್ಚಳವಾಗಲಿದೆ. ಇದಕ್ಕೆ ಅವರು ಐ.ಇ. ಸ್ಟಾಂಡರ್ಡ್ ನಂತೆ ದಿನಕ್ಕೆ ಎಂಟು ಗಂಟೆಗಳ ಅವಧಿಯ ಪಾಳಿಯಲ್ಲಿ 7.5 ಗಂಟೆಗಳ ಕಾಲ ಕೆಲಸವನ್ನು ಮಾಡಬೇಕು.

'ನಮ್ಮ ಎಲ್ಲಾ ಕಾರ್ಮಿಕರು ಪುನಃ ಕೆಲಸಕ್ಕೆ ಹಾಜರಾಗುತ್ತಿರುವುದನ್ನು ನೋಡಲು ನಾನು ಸಂತೋಷಪಡುತ್ತೇನೆ. ಮುಷ್ಕರದಿಂದ ಪ್ರತಿಕೂಲ ಪರಿಣಾಮಗಳು ಉಂಟಾದರೂ ಕೂಡಾ ಕಂಪನಿಯು ಕಾರ್ಮಿಕರಿಗೆ ಧಾರಾಳವಾಗಿ ಕೊಡುಗೆಯನ್ನು ನೀಡುತ್ತಿದೆ ಮತ್ತು ಅವರು ಹೊಸದಾಗಿ ಪರಿಚಯಿಸಿದ ಉತ್ಪಾದನಾ ಪ್ರಮಾಣವನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ' ಎಂದು ಬಾಷ್ ಲಿಮಿಟೆಟ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಸ್ಟಿಫನ್ ಬರ್ನ್ಸ್ ಹೇಳಿದ್ದಾರೆ.

Indefinite Strike at Bosch Ends After Wage Settlement

ಉತ್ತಮ ಸೌಲಭ್ಯಗಳು: ಸವಾಲಿನ ವ್ಯಾವಹಾರಿಕ ಪರಿಸ್ಥಿತಿ ಇದ್ದರೂ ಕಂಪನಿಯ ತನ್ನ ಕಾರ್ಮಿಕರಿಗೆ ಉತ್ತಮವಾದ ಮತ್ತು ಧಾರಾಳದ ವೇತನ ಬುಟ್ಟಿಯನ್ನು ನೀಡಿದ್ದು, ಅದು ಬರೀ ಹಣಕ್ಕೆ ಸಂಬಂಧಿಸಿದ್ದಾಗಿರದೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕೂಡಾ ನೀಡುತ್ತಿದೆ. ಪರಸ್ಪರ ಅನ್ಯೋನ್ಯದ ಈ ಬೇಡಿಕೆ ಒಪ್ಪಂದದೊಂದಿಗೆ ಬಾಷ್ ಬೆಂಗಳೂರು ಘಟಕವು ಆ ಪ್ರಕಾರದ ಇತರ ಸ್ಪರ್ಧಾತ್ಮಕ ಉತ್ಪಾದನಾ ಘಟಕಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರತಿಫಲ ನೀಡುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿ ಮುಂದುವರಿಯುತ್ತಿದೆ.

ಅದು ಮಾತ್ರವಲ್ಲದೇ ಕಂಪನಿಯು 370 ತಾತ್ಕಾಲಿಕ ಕಾರ್ಮಿಕರಲ್ಲಿ 100 ಕಾರ್ಮಿಕರನ್ನು ಖಾಯಂಗೊಳಿಸಲು ಒಪ್ಪಿದೆ. ಸುಮಾರು 2575 ಶಾಶ್ವತ ಕಾರ್ಮಿಕರನ್ನು ಹೊಂದಿದೆ. ಅವರ ವೇತನವೂ ಮಧ್ಯಂತರವಾದ ಶ್ರೇಣಿಯಲ್ಲಿದ್ದು, ಸ್ಪರ್ಧಾತ್ಮಕ ಕೈಗಾರಿಕೆಗಳಿಗಿಂತ ಅಧಿಕವಾಗಿದೆ. ಭವಿಷ್ಯದಲ್ಲಿ ಕಾರ್ಮಿಕರ ಸಂಖ್ಯೆಯು ಉತ್ಪಾದನಾ ವಿಧಾನವು ಸ್ವಯಂಗೊಳಿಸುವ ಮತ್ತು ಆಧುನಿಕ ಯಂತ್ರಗಳು ಮತ್ತು ಪ್ರದೂಷಣ ನಿಯಮಾವಳಿಗಳ ವಿಧಾನದಿಂದ ಬದಲಾಗುವ ಸಾಧ್ಯತೆ ಇದೆ.

ಗ್ರಾಹಕರಿಗೆ ನಮ್ಮ ಬದ್ಧತೆಯು ಎಂದಿಗೂ ಪ್ರಮುಖವಾದುದು ಮತ್ತು ನಾವು ಮುಷ್ಕರದ ಸಮಯದಲ್ಲಿ ಕೂಡಾ ಅದನ್ನು ಪೂರೈಕೆಯ ಸರಪಳಿಯಲ್ಲಿ ಹೆಚ್ಚು ಪರಿಣಾಮಗಳಾಗದಂತೆ ನೋಡಿಕೊಂಡಿದ್ದೇವೆ. ಇಂದಿನ ಒಪ್ಪಂದವು ಕಂಪನಿಯು ಭವಿಷ್ಯಕ್ಕಾಗಿ ಮತ್ತು ಭಾರತದ ಅಟೊಮೊಟಿವ್ ಕೈಗಾರಿಕೆಗಳಿಗೆ ಸಮರ್ಥ ನೆರವು ನೀಡಲು ಸಿದ್ಧವಾಗುವಂತೆ ಸೂಕ್ತ ವಿಧಾನಗಳನ್ನು ಅನುಸರಿವುದರ ಮೂಲಕ ಮಾಡಿದೆ ಎಂದು ಬರ್ನ್ಸ್ ಹೇಳಿದರು.

ಬಾಷ್ ಕಂಪನಿ ಷೇರುಗಳು ಬಿಎಸ್ ಇನಲ್ಲಿ ಗುರುವಾರ ಮಧ್ಯಾಹ್ನ 12.40ರ ಸುಮಾರಿಗೆ 19527.15 ರು ನಂತೆ ಮಾರಾಟವಾಗುತ್ತಿದ್ದರೆ, ಎನ್ ಎಸ್ ಇನಲ್ಲಿ 19526 ರು ನಂತೆ ವಹಿವಾಟು ನಡೆಸುತ್ತಿದೆ.

English summary
Bosch Ltd in Bengaluru said that an indefinite strike by its employees here since September 16 ended after conclusion of a wage settlement for 2013-16 with the union.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X