ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿ ಆಗಸ್ಟ್ 31 ರ ತನಕ ವಿಸ್ತರಣೆ

By Mahesh
|
Google Oneindia Kannada News

ನವದೆಹಲಿ, ಜೂ.1: ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ 'ಐಟಿ- ರಿಟರ್ನ್ಸ್' ಪ್ರಕ್ರಿಯೆಯನ್ನು ವಿತ್ತ ಸಚಿವಾಲಯ ಇನ್ನಷ್ಟು ಸರಳಗೊಳಿಸಿದೆ. ನೂತನ ಆದಾಯ ತೆರಿಗೆ ರಿಟರ್ನ್ ಫಾರಂಗಳನ್ನು ಪ್ರಕಟಿಸಲಾಗಿದೆ.ಐಟಿಆರ್ ಅರ್ಜಿಗಳನ್ನು ಮೂರು ಪುಟಕ್ಕೆ ಇಳಿಸಲಾಗಿದ್ದು, ಅರ್ಜಿ ಪಾವತಿ ಕೊನೆ ದಿನಾಂಕವನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ.

ಹೊಸ ಐ.ಟಿ ರಿಟರ್ನ್ಸ್ ಫಾರಂಗಳಲ್ಲಿ ವಿವಾದಿತ ವಿದೇಶಿ ಪ್ರವಾಸ ವಿವರ, ಸುಪ್ತ ಬ್ಯಾಂಕ್(dormant bank) ಖಾತೆಗಳ ವಿವರಗಳನ್ನು ಬಹಿರಂಗ ಪಡಿಸಬೇಕಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ. [ಆನ್ ಲೈನ್ ನಲ್ಲಿ ತೆರಿಗೆ ಕಟ್ಟುವುದು ಹೇಗೆ?]

Income tax forms simplified, date for filing returns extended to Aug 31

ಐಟಿಆರ್ 2 ಹಾಗೂ ಐಟಿಆರ್ 2 ಎಗಳಲ್ಲಿ ಇನ್ಮುಂದೆ ಮೂರು ಪುಟಗಳಿರುತ್ತವೆ. ವಿವಾದಿತ ವಿದೇಶಿ ಪ್ರವಾಸದ ವಿವರಗಳನ್ನು ಅರ್ಜಿಯಿಂದ ಹೊರಹಾಕಲಾಗಿದ್ದು, ಅರ್ಜಿದಾರರು ತಮ್ಮ ಪಾಸ್ ಪೋರ್ಟ್ ಸಂಖ್ಯೆ ನಮೂದಿಸಿದರೆ ಸಾಕು. [ಸರಳವಾಗಿ ತೆರಿಗೆ ಪಾವತಿ ಮಾಡುವುದು ಹೇಗೆ?]

ಬ್ಯಾಂಕ್ ಖಾತೆ ವಿವರಗಳ ಪೈಕಿ ಐಎಫ್ ಎಸ್ ಕೋಡ್, ಅಕೌಂಟ್ ನಂಬರ್ (ಕರೆಂಟ್ ಅಥವಾ ಉಳಿತಾಯ ಖಾತೆ) ನೀಡಿದರೆ ಸಾಕು. ನಿಮ್ಮ ಅಕೌಂಟ್ ನಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ಹೇಳಿಕೊಳ್ಳಬೇಕಾಗಿಲ್ಲ.

ಸಂಬಳದಾರರು, ಬಿಸಿನೆಸ್ ಹಾಗೂ ವೃತ್ತಿಪರ ಆದಾಯ ಇಲ್ಲದ ವ್ಯಕ್ತಿಗಳು ಐಟಿಆರ್ 1 ಅಥವಾ ಐಟಿಆರ್ 2 ಬಳಸಿಕೊಂಡು ಪ್ರತಿ ವರ್ಷ ಜು.31 ರೊಳಗೆ ಆದಾಯ ತೆರಿಗೆ ಪಾವತಿ ಸಲ್ಲಿಸಬೇಕಾಗುತ್ತದೆ.

ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಸಹ ಹೆಚ್ಚಿದೆ.

English summary
The finance ministry on Sunday(May.31) came out with new three-page income tax return (ITR) forms, dropping the controversial provision for mandatory disclosure of foreign trips and dormant bank accounts, while it also extended the last date of filing to August 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X