ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿಗೆ ಸ್ಮಾರ್ಟ್ ಅಪ್ಲಿಕೇಷನ್

By Mahesh
|
Google Oneindia Kannada News

ಬೆಂಗಳೂರು, ನ.15: ಆದಾಯ ತೆರಿಗೆ ಪಾವತಿಯನ್ನು ಮತ್ತಷ್ಟು ಸರಳಗೊಳಿಸಲು ಇಲಾಖೆ ಹೊಸ ಮೊಬೈಲ್ ಅಪ್ಲಿಕೇಷನ್ ನಿರ್ಮಾಣಕ್ಕೆ ಮುಂದಾಗಿದೆ.

ದೇಶದಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಾಗಿರುವುದರಿಂದ ತ್ವರಿತ ಗತಿಯಿಂದ ಎಲ್ಲಿಂದ ಬೇಕಾದರೂ ತೆರಿಗೆ ಪಾವತಿಸಲು ಅನುಕೂಲವಾಗುವಂಥ ವ್ಯವಸ್ಥೆ ರೂಪಿಸಲು ಆದಾಯ ತೆರಿಗೆ ಇಲಾಖೆ ಚಿಂತಿಸಿದೆ. [ಸರಳವಾಗಿ ತೆರಿಗೆ ಪಾವತಿ ಮಾಡುವುದು ಹೇಗೆ?]

ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಆದರೆ, ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಯಾವಾಗ ಇದು ಜಾರಿಗೆ ಬರುತ್ತದೆ ಎಂದು ತಿಳಿಸಲು ಸಾಧ್ಯವಿಲ್ಲ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್‌ನ ಅಧ್ಯಕ್ಷೆ ಅನಿತಾ ಕಪೂರ್ ತಿಳಿಸಿದ್ದಾರೆ. ಈ ಹೊಸ ಯೋಜನೆಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ["ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ, ತೆರಿಗೆ ಉಳಿಸಿ"]

Income Tax department developing mobile app for filing returns

ಇತ್ತೀಚಿನ ವರ್ಷಗಳಲ್ಲಿ ಆನ್ ಲೈನ್ ಮೂಲಕ ಆದಾಯ ತೆರಿಗೆ ಪಾವತಿ ವ್ಯವಸ್ಥೆ ಹೆಚ್ಚಾಗುತ್ತಿದೆ. ಈಗ ಇದನ್ನು ಇನ್ನಷ್ಟು ವಿಸ್ತರಿಸಿ ಮೊಬೈಲ್ ಮೂಲಕ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ಸಾಮಾನ್ಯವಾಗಿ ಸಂಬಳದಾರರು, ಬಿಸಿನೆಸ್ ಹಾಗೂ ವೃತ್ತಿಪರ ಆದಾಯ ಇಲ್ಲದ ವ್ಯಕ್ತಿಗಳು ಐಟಿಆರ್ 1 ಅಥವಾ ಐಟಿಆರ್ 2 ಬಳಸಿಕೊಂಡು ಪ್ರತಿ ವರ್ಷ ಜು.31 ರೊಳಗೆ ಆದಾಯ ತೆರಿಗೆ ಪಾವತಿ ಸಲ್ಲಿಸಬೇಕಾಗುತ್ತದೆ.

ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಸಹ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಗದು ಬಳಕೆಗಿಂತ ಕಾರ್ಡ್ ಬಳಕೆ ಹೆಚ್ಚಿಸಿದರೆ ಆದಾಯ ತೆರಿಗೆ ರಿಲೀಫ್ ಸಿಗಲಿದೆ. ಪ್ರಸ್ತುತ ಸಾಲಿನಲ್ಲಿ 7.98ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. (ಒನ್ ಇಂಡಿಯಾ ಸುದ್ದಿ)

English summary
The Income Tax Department is developing a mobile app which can be used by users for filing their tax returns, according to a top Finance Ministry official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X