ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕ್ ಇನ್ ಇಂಡಿಯಾ ಐ ಫೋನ್: 25ರಂದು ಮಹತ್ವದ ಮಾತುಕತೆ

|
Google Oneindia Kannada News

ನವದೆಹಲಿ, ಜ. 8: ಭಾರತದಲ್ಲಿ ಐ ಫೋನ್ ತಯಾರಿಸುವ ಆ್ಯಪಲ್ ಸ್ಮಾರ್ಟ್ ಫೋನ್ ಕಂಪನಿಯ ಆಶಯವು ಇದೇ ತಿಂಗಳ 25ರಂದು ನಡೆಯಲಿರುವ ಕಂಪನಿಯ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವಿನ ಮಾತುಕತೆಯಲ್ಲಿ ಸ್ಪಷ್ಟ ರೂಪ ತಳೆಯಲಿದೆ.

ಸಭೆಯಲ್ಲಿ ಕೇಂದ್ರ ಸರ್ಕಾರದ ಹಣಕಾಸು, ಔದ್ಯೋಗಿಕ ನೀತಿ ಹಾಗೂ ಪ್ರವರ್ತನ (ಡಿಐಪಿಪಿ), ಕಂದಾಯ, ಪರಿಸರ ಹಾಗೂ ಅರಣ್ಯ, ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಮಾತುಕತೆ ವೇಳೆ, ಅಮೆರಿಕ ಮೂಲದ ಆ್ಯಪಲ್ ಕಂಪನಿಯು ಕೆಲವಾರು ಸೌಕರ್ಯಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದೆ ಎಂದು ಹೇಳಲಾಗಿದೆ. ಪ್ರಮುಖವಾಗಿ ತೆರಿಗೆ ವಿನಾಯ್ತಿ, ದೀರ್ಘಾವಧಿ ಸೇವಾ ನಿಯಮಗಳಿಂದ ವಿನಾಯ್ತಿ ಸೇರಿದಂತೆ ಕೆಲವಾರು ಬೇಡಿಕೆಗಳನ್ನು ಕಂಪನಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿರುವ ಕೇಂದ್ರದ ಅಧಿಕಾರಿಗಳ ಮುಂದಿಡಲಿದ್ದಾರೆ.

Imortant meeting between Apple Company and Central Government on 25th Jan

ಆದರೆ, ನಿಯಮಗಳ ಪ್ರಕಾರ, ಆ್ಯಪಲ್ ಸಂಸ್ಥೆಯು ಯಾವುದೇ ಹೆಚ್ಚುವರಿ ಸವಲತ್ತುಗಳನ್ನು ಕೇಳದೇ ಮೊದಲು ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಬೇಕಿದೆ. ಇದನ್ನು ಸಭೆಯಲ್ಲಿ, ಆ್ಯಪಲ್ ಕಂಪನಿಯ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲು ಅಧಿಕಾರಿಗಳು ಯತ್ನಿಸಲಿದ್ದಾರೆಂದು ಮೂಲಗಳು ಹೇಳಿವೆ.

ಈಗಾಗಲೇ, ಚೀನಾದ ದೈತ್ಯ ಕಂಪನಿಗಳಾದ ಹುವೈ, ಕ್ಸಿಯೋಮಿ ಸೇರಿದಂತೆ ವಿದೇಶಿ ಮೂಲದ ಒಟ್ಟು 42 ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಬ್ರಾಂಡ್ ಗಳ ಫೋನ್ ಗಳನ್ನು ಭಾರತದಲ್ಲಿಯೇ ತಯಾರಿಸುತ್ತಿವೆ. ಈ ಕಂಪನಿಗಳೂ ಹೆಚ್ಚುವರಿ ಸೌಲಭ್ಯಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿವೆ.

ಸದ್ಯಕ್ಕೀಗ ಆ ಎಲ್ಲಾ ಕಂಪನಿಗಳೂ ಮಾಡಿಫೈಡ್ ಸ್ಪೆಷಲ್ ಇನ್ಸೆಟಿವ್ ಪ್ಯಾಕೇಜ್ ಯೋಜನೆಯಡಿ (ಎಂಎಸ್ಐಎಸ್) ಕಾರ್ಯ ನಿರ್ವಹಿಸುತ್ತಿದ್ದು ಅದೇ ಯೋಜನೆಯಲ್ಲೇ ಕಂಪನಿಗಳು ಮುಂದುವರಿಯಬೇಕೆಂಬುದು ಕೇಂದ್ರ ಸರ್ಕಾರದ ಬಿಗಿ ನಿಲುವಾಗಿದೆ ಎಂದು ಹೇಳಲಾಗಿದೆ.

English summary
'Made in India' iPhones dream may come true on Jan 25th as representatives of Apple company will meet Central Govt. representatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X