ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ದರ ಪರಿಷ್ಕರಣೆ ಚೆಕ್ ಮಾಡುವುದು ಹೇಗೆ? ಎಲ್ಲಿ?

By Mahesh
|
Google Oneindia Kannada News

ಬೆಂಗಳೂರು, ಜುಲೈ 06: ದೈನಂದಿನ ಇಂಧನ ದರ ಪರಿಷ್ಕರಣೆ ಜಾರಿಗೆ ಬಂದಿದೆ. ಕಳೆದ 15 ವರ್ಷಗಳಿಂದ ಇದ್ದ ವ್ಯವಸ್ಥೆಯಲ್ಲಿ
ತಿಂಗಳ ಮೊದಲ ದಿನ, 16ನೇ ದಿನ ದರ ಪರಿಷ್ಕರಣೆಗೊಳ್ಳುತ್ತಿತ್ತು. ಈಗ ಈ ವ್ಯವಸ್ಥೆಯನ್ನು ಬದಿಗೊತ್ತಿ ಪ್ರತಿದಿನ ದರ ಪರಿಷ್ಕರಣೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇತ್ತೀಚೆಗೆ ನಿರ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ದಿನ ಬೆಳಗ್ಗೆ 6ಗಂಟೆಗೆ ವ್ಯತ್ಯಾಸ ಕಾಣಲಿದೆ. ಮೇ 1ರಿಂದ ಪುದುಚೇರಿ, ಚಂಡೀಗಢ, ಜೆಮ್ಷೆಡ್ ಪುರ, ಉದಯ್ ಪುರ ಹಾಗೂ ವಿಶಾಖಪಟ್ಟಣಂನಲ್ಲಿ ಈ ಹೊಸ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದು ಯಶಸ್ವಿಯಾಗಿದ್ದು ಜೂ. 16ರಿಂದ ದೇಶಾದ್ಯಂತ ಜಾರಿಗೊಳಿಸಲಾಗಿದೆ.

ಈ ಹಿಂದೆ ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ಕಚ್ಚಾತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರಕ್ಕನುಗುಣವಾಗಿ ಪೆಟ್ರೋಲ್, ಡೀಸೆಲ್ ದರಗಳನ್ನು ಪರಿಷ್ಕರಿಸಲಾಗುತ್ತಿತ್ತು. ಗುರುವಾರ ಬೆಳಿಗ್ಗೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 12 ಪೈಸೆ ಮತ್ತು ಡೀಸೆಲ್ ದರ 16-18 ಪೈಸೆಗಳಷ್ಟು ಏರಿಕೆಯಾಗಿದೆ.

ಪೆಟ್ರೋಲ್ ಬಂಕ್ ಗಳಿಗೆ ತೆರಳಿದ ವೇಳೆ ಆಯಾ ದಿನದ ಬೆಲೆ ಗ್ರಾಹಕರಿಗೆ ತಿಳಿಯುತ್ತದೆ. ಆದರೆ ಕೆಲ ಅನುಕೂಲ ದಾರಿಗಳಿವೆ, ಆ ಮೂಲಕ ಕೂಡ ಪರಿಷ್ಲೃತ ಬೆಲೆಯನ್ನು ತಿಳಿದುಕೊಳ್ಳಬಹುದು. ಎಸ್ಸೆಮ್ಮೆಸ್ ಹಾಗೂ ಐಒಸಿಎಲ್ ನ ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡ ದರವನ್ನು ತಿಳಿದುಕೊಳ್ಳಬಹುದು.

ಡೀಲರ್ ಕೋಡ್

ಡೀಲರ್ ಕೋಡ್

ದೈನಂದಿನ ಇಂಧನ ಬೆಲೆ ಪರಿಷ್ಕರಣೆ ಹಾಗೂ ದರ ಪಟ್ಟಿಯನ್ನು ತಿಳಿಯುವುದಕ್ಕೂ ಮುನ್ನ ಪೆಟ್ರೋಲ್/ಡೀಸೆಲ್ ಡೀಲರ್ ಗಳ ಕೋಡ್ ಗಳನ್ನು ತಿಳಿದುಕೊಳ್ಳಬೇಕು.

ಪ್ರತಿಯೊಂದು ಪೆಟ್ರೋಲ್ ಪಂಪ್‌ ನ ಡೀಲರ್ ಕೋಡ್‌ ನ್ನು ಪಂಪ್ ಆವರಣದಲ್ಲಿ ಪ್ರದರ್ಶಿಸಲಾಗಿರುತ್ತದೆ. ಗ್ರಾಹಕರು ಐಒಸಿ/ಬಿಪಿ/ಎಚ್ಪಿಸಿಎಲ್ ವೆಬ್‌ಸೈಟ್‌ನಿಂದಲೂ ಡೀಲರ್ ಕೋಡ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲವೆ ಬಂಕ್ ಮಾಲೀಕರನ್ನು ಸಂಪರ್ಕಿಸಿ, ಡೀಲರ್ ಕೋಡ್ ಕೇಳಿ ಪಡೆಯಿರಿ.

ಇಂಡಿಯನ್ ಆಯಿಲ್(ಐಒಸಿ)

ಇಂಡಿಯನ್ ಆಯಿಲ್(ಐಒಸಿ)

SMS ಮೂಲಕ : RSP DEALER CODE to 9224992249
ವೆಬ್ ಸೈಟ್ : iocl.com (ಐಒಸಿಎಲ್.ಕಾಂ) ವೆಬ್ ಸೈಟಿನಲ್ಲಿ pump locator ನಲ್ಲಿ ಬೆಲೆ ಮಾಹಿತಿ ಸಿಗುತ್ತದೆ.

ಮೊಬೈಲ್ ಅಪ್ಲಿಕೇಷನ್ : Fuel@IOC ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ

ಭಾರತ್ ಪೆಟ್ರೋಲಿಯಂ ಬೆಲೆ

ಭಾರತ್ ಪೆಟ್ರೋಲಿಯಂ ಬೆಲೆ

SMS ಮೂಲಕ : RSP DEALER CODE to 9223112222
ವೆಬ್ ಸೈಟ್ : bharatpetroleum.in (ಭಾರತ್ ಪೆಟ್ರೋಲಿಯಂ.ಇನ್) ವೆಬ್ ಸೈಟಿನಲ್ಲಿ pump locator ನಲ್ಲಿ ಬೆಲೆ ಮಾಹಿತಿ ಸಿಗುತ್ತದೆ.
ಮೊಬೈಲ್ ಅಪ್ಲಿಕೇಷನ್ : SmartDrive ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿ.

SMS ಮೂಲಕ : HPPRICE DEALER CODE to 9222201122
ವೆಬ್ ಸೈಟ್ : hindustanpetroleum.com (ಹಿಂದೂಸ್ತಾನ್ ಪೆಟ್ರೋಲಿಯಂ.ಕಾಂ) ವೆಬ್ ಸೈಟಿನಲ್ಲಿ pump locator ನಲ್ಲಿ ಬೆಲೆ ಮಾಹಿತಿ ಸಿಗುತ್ತದೆ.
ಮೊಬೈಲ್ ಅಪ್ಲಿಕೇಷನ್ : My HPCL ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ

English summary
On June 16,2017 three state-run oil retailers - Indian Oil Corporation, Bharat Petroleum Corporation and Hindustan Petroleum - switched to a new system of price revisions on daily basis. Customers can find the revised petrol and diesel prices daily via sms, website and IOCL, HP, BP's mobile app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X