ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಬಳಕೆ ಹೇಗೆ?

ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮಂಗಳವಾರ(ನವೆಂಬರ್ 15) ದಿಂದ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡಿದೆ. ಆಂಡ್ರಾಯ್ಡ್, ಐಓಎಸ್ ಹಾಗೂ ವಿಂಡೋಸ್ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದಾಗಿದೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 16: ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮಂಗಳವಾರ(ನವೆಂಬರ್ 15) ದಿಂದ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡಿದೆ. ಆಂಡ್ರಾಯ್ಡ್, ಐಓಎಸ್ ಹಾಗೂ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದಾಗಿದೆ.

ಮೆಸೇಜಿಂಗ್ ಹಾಗೂ ಗ್ರೂಪ್ ಚಾಟ್ ನಂತರ ವಾಯ್ಸ್ ಹಾಗೂ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ವಾಟ್ಸಾಪ್ ನೀಡುತ್ತಿದೆ. ಸುಮಾರು 1 ಬಿಲಿಯನ್ ಗೂ ಅಧಿಕ ಗ್ರಾಹಕರನ್ನು ಹೊಂದುವ ಗುರಿ ಹೊಂದಲಾಗಿದೆ ಎಂದು ತನ್ನ ಬ್ಲಾಗಿನಲ್ಲಿ ವಾಟ್ಸಾಪ್ ಬರೆದುಕೊಂಡಿದೆ.[ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಹೇಗೆ?]

ಅಪ್ಲಿಕೇಷನ್ ಅಪ್ಡೇಟ್ ಮಾಡಿಕೊಳ್ಳಿ: ನೀವು ಈಗಾಗಲೇ ವಾಟ್ಸಾಪ್ ಬಳಸುತ್ತಿದ್ದರೆ, ಆಟೋಮೆಟಿಕ್ ಅಪ್ಡೇಟ್ ಆಗುತ್ತದೆ. ಇಲ್ಲದಿದ್ದರೆ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಪ್ಡೇಟ್ ಕೊಡಿ, ವಿಡಿಯೋ ಕಾಲಿಂಗ್ ಆಯ್ಕೆ ನಿಮಗೆ ಸಿಗುತ್ತದೆ.[ಸ್ಕೈಪ್ ಗೆ ಸೆಡ್ಡು ಹೊಡೆಯಲು ಗೂಗಲ್ ಡುವೋ]

ಚಾಟ್ ವಿಂಡೋಸ್ ನಲ್ಲಿ ಮೇಲ್ಭಾಗದ ಬಲ ತುದಿಯಲ್ಲಿರುವ ಕಾಲಿಂಗ್ ಬಟನ್ ಪ್ರೆಸ್ ಮಾಡಿ ವಾಯ್ಸ್ ಅಥವಾ ವಿಡಿಯೋ ಆಯ್ಕೆ ಮಾಡಿಕೊಂಡು ನಿಮ್ಮ ಕರೆ ಮುಂದುವರೆಸಬಹುದು. ಕರೆಯನ್ನು ಮ್ಯೂಟ್ ಕೂಡಾ ಮಾಡಬಹುದು. ಫ್ರಂಟ್ ಹಾಗೂ ಹಿಂಬದಿ ಕೆಮರಾ ಎರಡನ್ನು ಬಳಸಬಹುದು. [ವಾಟ್ಸಪ್: ಬ್ಲಾಕ್ ಮಾಡಿದ್ರೆ UnBlock ಮಾಡ್ಕೊಳ್ಳೊದು ಹೇಗೆ?]

ಏನಿದೆ ಇದರಲ್ಲಿ ವಿಶೇಷತೆ

ಏನಿದೆ ಇದರಲ್ಲಿ ವಿಶೇಷತೆ

ಕರೆಯನ್ನು ಮ್ಯೂಟ್ ಮಾಡಲು ಕೂಡ ಆಪ್ಷನ್ ಇದೆ. ಫ್ರಂಟ್ ಕ್ಯಾಮರಾದಿಂದ ಹಿಂದಿನ ಕ್ಯಾಮರಾಗೆ ಕೂಡ ಬದಲಾಯಿಸಿಕೊಳ್ಳಬಹುದು. ಮಿಸ್ ಕಾಲ್ ನೋಟಿಫಿಕೇಶನ್ ಕೂಡ ಬಳಕೆದಾರರಿಗೆ ಲಭ್ಯವಿದೆ. ಜಸ್ಟ್ ಒಂದು ಟ್ಯಾಪ್ ಮೂಲಕ ಕಾಲ್ ಬ್ಯಾಕ್ ಮಾಡಬಹುದು. ಆದರೆ, ಬಳಕೆ ಮಟ್ಟಿಗೆ ಸುಲಭವಾದರೂ, ಎರಡು ಬದಿ ವಾಟ್ಸಾಪ್ ಬಳಕೆದಾರರು ಅಪ್ಲಿಕೇಷನ್ ಅಪ್ಗ್ರೇಡ್ ಮಾಡಿಕೊಂಡಿಕೊಂಡಿರಬೇಕು. ಇಲ್ಲದಿದ್ದರೆ ಕರೆ ಸಾಧ್ಯವಾಗುವುದಿಲ್ಲ.

ವಿಡಿಯೋ ಕರೆ ಹೇಗೆ ಮಾಡಬಹುದು

ವಿಡಿಯೋ ಕರೆ ಹೇಗೆ ಮಾಡಬಹುದು

* ನಿಮ್ಮ ಮೊಬೈಲ್ ನಲ್ಲಿ ವಾಟ್ಸಾಪ್ ಓಪನ್ ಮಾಡಿ
* Contacts ಗೆ ಹೋಗಿ
* ನಿಮ್ಮ ಆಯ್ಕೆಯ Conatact ಮೇಲೆ ಒತ್ತಿ, ವಿಡಿಯೋ ಕಾಲ್ ಆರಂಭವಾಗುತ್ತದೆ.
* ಅಥವಾ ವಾಟ್ಸಾಪ್ ನ Calls ಟ್ಯಾಬ್ ಒತ್ತಿದರೆ ಮೇಲ್ಭಾಗದಲ್ಲಿ ಕಾಣುವ ಫೋನ್ ಚಿನ್ಹೆಯನ್ನು ಕ್ಲಿಕ್ ಮಾಡಿ ವಿಡಿಯೋ ಕಾಲ್ ಆಯ್ಕೆ ಮಾಡಿಕೊಳ್ಳಿ

ವಾಟ್ಸಾಪ್ ಗೆ ಸ್ಪರ್ಧಿಗಳು ಯಾರು

ವಾಟ್ಸಾಪ್ ಗೆ ಸ್ಪರ್ಧಿಗಳು ಯಾರು

ಸ್ಕೈಪ್, ಫೇಸ್ ಟೈಮ್, ವೈಬರ್, ಲೈನ್, ಗೂಗಲ್ ಡ್ಯು ಮತ್ತು ಫೇಸ್ ಬುಕ್ ಮೆಸೆಂಜರ್ ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ವಾಟ್ಸಾಪ್ ಕೊನೆಗೂ ವಿಡಿಯೋ ಕಾಲಿಂಗ್ ಫೀಚರ್ ಅನ್ನು ತನ್ನ ಗ್ರಾಹಕರಿಗೆ ನೀಡಿದೆ. ಆದರೆ, ಗುಣಮಟ್ಟ ಕಾಯ್ದುಕೊಂಡರೆ ಮಾತ್ರ ಜನಪ್ರಿಯತೆ ಗಳಿಸಲು ಸಾಧ್ಯವಿದೆ.

ವಿಡಿಯೋ ಕಾಲಿಂಗ್ ಸಿಗುತ್ತಿಲ್ಲ

ವಿಡಿಯೋ ಕಾಲಿಂಗ್ ಸಿಗುತ್ತಿಲ್ಲ

ಅಪ್ಡೇಟ್ ಮಾಡಿಕೊಂಡರೂ ವಿಡಿಯೋ ಕಾಲಿಂಗ್ ಸಿಗುತ್ತಿಲ್ಲ ಎನ್ನುವವರು ವಾಟ್ಸಾಪ್ ಬೀಟಾ ಟೆಸ್ಟರ್ ಆಗಿ ವಾಟ್ಸಾಪ್ ಎಪಿಕೆ ಪಡೆಯಬಹುದು. ಇದು ಎಪಿಕೆ ಮಿರರ್. ಕಾಂ ಅಥವಾ APK Pure.ಕಾಂ ನಲ್ಲಿ ಲಭ್ಯವಿರುತ್ತದೆ. ಗೂಗಲ್ ಪ್ಲೇ ಲಿಸ್ಟಿಂಗ್ ನಲ್ಲಿ Become a beta tester ಎಂಬ ಆಯ್ಕೆಯನ್ನು ಬಳಸಿಕೊಂಡು ಯಾವುದೇ ಅಪ್ಲಿಕೇಷನ್ ನ ಪೂರ್ಣ ಪ್ರಮಾಣ ಬಿಡುಗಡೆಗೂ ಮುನ್ನವೇ ಟೆಸ್ಟ್ ಮಾಡಬಹುದು.

ವಿಡಿಯೋ ಕಾಲ್ ಬಳಕೆ ಹೇಗೆ?

ವಾಟ್ಸಾಪ್ ಬಳಸಿ ವಿಡಿಯೋ ಕಾಲ್ ಬಳಕೆ ಹೇಗೆ? ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ

English summary
WhatsApp officially launched video calling on Tuesday, and the feature is now being rolled out to Android, iPhone, and Windows users. Here are steps How to Get video Calling working.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X