ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ನಿಂದ ವಿಡಿಯೋ ಡೌನ್ ಲೋಡ್ ಮಾಡುವುದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಏನು ಸಿಗಲ್ಲ ಹೇಳಿ? ಕೆಲವರಿಗೆ ಫೇಸ್ ಬುಕ್ ತುಂಬಾ ಕಸ, ಬೇಡದ ಚರ್ಚೆಗಳ ಅಡ್ಡಾದಂತೆ ತೋರಿದರೆ, ಮತ್ತೆ ಕೆಲವರಿಗೆ ದಿನನಿತ್ಯದ ತಾಜಾತನದ ವೇದಿಕೆಯಾಗಿ ರೂಪುಗೊಂಡಿದೆ. ಇಂಥ ತಾಣದಲ್ಲಿ ಫೋಟೋಗಳ ಜೊತೆಗೆ ನೆನಪಿನ ವಿಡಿಯೋಗಳು ಬೇಕಾದಷ್ಟು ಹರಿದಾಡುತ್ತಿರುತ್ತವೆ.

ಅಪರೂಪದ ವಿಡಿಯೋಗಳು, ಕಾಪಿರೈಟ್ ಇಲ್ಲದ ಕೆಲ ವಿಡಿಯೋಗಳನ್ನು ನೋಡಿ.. 'ಅಯ್ಯೋ ಇದನ್ನು ಡೌನ್ ಲೋಡ್ ಮಾಡುವುದು ಹೇಗೆ?' ಎಂದು ಚಿಂತಿಸುತ್ತಿದ್ದರೆ, ಅದಕ್ಕೆ ಇಲ್ಲಿದೆ ಪರಿಹಾರ. ಸರಳ ವಿಧಾನ ಬಳಸಿ ಫೇಸ್ ಬುಕ್ ವಿಡಿಯೋ ಡೌನ್ ಲೋಡ್ ಮಾಡಬಹುದು. ಇದಕ್ಕಾಗಿ ಯಾವುದೇ ತಂತ್ರಾಂಶದ ಅಗತ್ಯವಿಲ್ಲ.[ಬೆಂಗಳೂರಿನ ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?]

* ಫೇಸ್ ಬುಕ್ ಗೆ ಲಾಗ್ ಇನ್ ಆಗಿ
* ವಿಡಿಯೋ ಇರುವ ಲಿಂಕ್ ಗೆ ಹೋಗಿ, ಹೊಸದೊಂದು ಟ್ಯಾಬ್ ನಲ್ಲಿ ಓಪನ್ ಮಾಡಿ
* ಬ್ರೌಸರ್ ನಲ್ಲಿ URL ಬಳಸಿ ಕರ್ಸರ್ ತೆಗೆದುಕೊಂಡು ಹೋಗಿ [ಫೇಸ್ಬುಕ್, ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?]
ಉದಾಹರಣೆ: [https://www.facebook.com/oneindiatamil/videos/vl.1414332835541244/10152934951583579/?type=1]

ಮೇಲಿರುವ URL ನಲ್ಲಿ www ಬದಲಿಗೆ m ಎಂದು ಹಾಕಿರಿ.

[https://m.facebook.com/oneindiatamil/videos/vl.1414332835541244/10152934951583579/?type=1]

ಎಂದು ಬದಲಾದ ಮೇಲೆ ವಿಡಿಯೋ ಪ್ಲೇ ಮಾಡಿ, ಮೌಸ್ ನಿಂದ ಕರ್ಸರ್ ಚಲಿಸಿ ವಿಡಿಯೋ ಮೇಲೆ ತಂದು ರೈಟ್ ಕ್ಲಿಕ್ ಮಾಡಿ Save Video as ಆಯ್ಕೆ ಮಾಡಿ ಹೊಸ ಫೈಲ್ ನೇಮ್ ಕೊಟ್ಟು ಸೇವ್ ಮಾಡಿ

How to Download Facebook Videos without using any software

ಸೂಚನೆ: ಕಾಪಿರೈಟ್ ಇರುವ ವಿಡಿಯೋಗಳನ್ನು ಬಳಸುವಾಗ ಎಚ್ಚರಿಕೆ, [ಮೊಬೈಲ್ ಗೇಮ್ ಕ್ಯಾಂಡಿ ಕ್ರಶ್ ದಾಖಲೆ ಮೊತ್ತಕ್ಕೆ ಸೇಲ್ ]

* ಕೆಲವು ವಿಡಿಯೋಗಳನ್ನು ಕೃಪೆ ನೀಡಿ ಪುನರ್ಬಳಕೆ ಮಾಡಬಹುದು.

* HD ಗುಣಮಟ್ಟದ ವಿಡಿಯೋ ಇದ್ದರೆ ಆಯ್ಕೆ ಮಾಡಿಕೊಳ್ಳಿ.[ಗೂಢಲಿಪಿ ಕಾಯ್ದೆಯಿಂದ ವಾಟ್ಸಪ್, ಟ್ವಿಟ್ಟರ್ ಗೆ ರಿಯಾಯಿತಿ]

* ಈ ವಿಧಾನವನ್ನು ಇನ್ಸ್ಟಾಗ್ರಾಮ್ ವಿಡಿಯೋ ಡೌನ್ ಲೋಡ್ ಗೂ ಬಳಸಬಹುದು.

* ಈ ವಿಧಾನ ಈ ಮೊದಲು ಮ್ಯಾಕ್ ಹಾಗೂ ಲಿನಾಕ್ಸ್ ನಲ್ಲಿ ಲಭ್ಯವಿರಲಿಲ್ಲ. ಕ್ರೋಮ್ ಬ್ರೌಸರ್ ನಲ್ಲಿ ಮಾತ್ರ ಲಭ್ಯವಿತ್ತು.

* ಆದರೆ, ಈಗ ಎಲ್ಲಾ ಬ್ರೌಸರ್ ಗಳಲ್ಲಿ ಸುಲಭವಾಗಿ ವಿಡಿಯೋ ಡೌನ್ ಲೋಡ್ ಮಾಡಬಹುದು.[ಫೇಸ್ ಬುಕ್ ನಲ್ಲಿ ವೈರಸ್ ವಿಡಿಯೋ ಕಿರಿಕ್]

* ಈ ವಿಧಾನ ಪಬ್ಲಿಕ್ ಮೋಡ್ ನಲ್ಲಿರುವ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಮಾತ್ರ.[ಹವ್ಯಾಸಿ ಕೃಷಿಕರಿಗಾಗಿ ಫೇಸ್ ಬುಕ್ ವೇದಿಕೆಯಿಂದ ಕರೆ]

* ಫೇಸ್ ಬುಕ್ ನ ಖಾಸಗಿ ವಿಡಿಯೋ ಡೌನ್ ಲೋಡ್ ಮಾಡಲು ಕ್ರೋಮ್ ವೆಬ್ ಡೆವಲಪರ್ ಟೂಲ್ ಬಳಸಬೇಕಾಗುತ್ತದೆ.

* ಕ್ರೋಮ್ ಮೆನುನಲ್ಲಿ Developer tools ಗೆ ಹೋಗಿ Undock ಮಾಡಿ, Network ಟ್ಯಾಬ್ ಗೆ ಹೋಗಿ ವಿಡಿಯೋ ಹೊಸ ಟ್ಯಾಬ್ ನಲ್ಲಿ ಓಪನ್ ಆಗುವಂತೆ ಮಾಡಿ ನಂತರ ಮೇಲ್ಕಂಡ ವಿಧಾನದಲ್ಲಿ ಸುಲಭವಾಗಿ ಸೇವ್ ಮಾಡಬಹುದು.

ವಿಡಿಯೋ ನೋಡಿ:

English summary
How to Download Facebook Videos without using any software: Open Facebook in mobile browser and follow the instruction given in this article. Note, All the videos share in public domain are not free, some may be copyrighted. Think before you download.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X