ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ಹೇಗಿರಲಿದೆ?

|
Google Oneindia Kannada News

ಇನ್ನೇನು ನಾಲ್ಕು ದಿನ ಕಳೆದು ಬೆಳಗಾಗುವುದರೊಳಗೆ ಜಿಎಸ್ ಟಿ ಜಾರಿ ಆಗುತ್ತದೆ. ಇ ಕಾಮರ್ಸ್ ಕಂಪೆನಿಗಳು ತಮ್ಮ ದಾಸ್ತಾನಿನಲ್ಲಿರುವ ವಸ್ತುಗಳ ಮಾರಾಟಕ್ಕೆ ಭಾರೀ ಪ್ರಯತ್ನ ಮಾಡುತ್ತಿವೆ. ಗ್ರಾಹಕರಿಗೆ ಶೇ ಇಪ್ಪತ್ತೈದರಿಂದ ತೊಂಬತ್ತರಷ್ಟು ರಿಯಾಯಿತಿ ಕೊಡುವ ಆಮಿಷ ಒಡ್ಡುತ್ತಿವೆ.

ಆದರೆ, ಜುಲೈ ಒಂದರಿಂದ ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ದುಬಾರಿ ಆಗಲಿದೆ. ಸದ್ಯಕ್ಕೆ ಇ ಕಾಮರ್ಸ್ ವೆಬ್ ಸೈಟ್ ಗಳು ಯಾವುದೇ ರೂಪದಲ್ಲಿ ತೆರಿಗೆ ಹಾಕುತ್ತಿಲ್ಲ. ಜಿಎಸ್ ಟಿ ಜಾರಿಯಾದ ಮೇಲೆ ಶೇ ಒಂದರಷ್ಟು ತೆರಿಗೆ ಸಂಗ್ರಹಿಸಿ, ಆ ವೆಬ್ ಸೈಟ್ ನಲ್ಲಿ ಹಾಕಿದ ಪಟ್ಟಿಯಲ್ಲಿರುವ ಮಾರಾಟಗಾರರಿಗೆ ಕೊಡ್ತಾರೆ.

ಜೂನ್ 30ರ ರಾತ್ರಿ ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್ ಟಿಗೆ ಚಾಲನೆಜೂನ್ 30ರ ರಾತ್ರಿ ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್ ಟಿಗೆ ಚಾಲನೆ

ಈ ಕಾರಣಕ್ಕೆ ಬೆಲೆಯ ಮೇಲೆ ಪರಿಣಾಮ ಬೀರಿ, ನಿಮ್ಮ ಆನ್ ಲೈನ್ ಷಾಪಿಂಗ್ ದುಬಾರಿ ಆಗಲಿದೆ. ಸದ್ಯಕ್ಕೇನೋ ಈ ನಿರ್ಧಾರ ಮುಂದೂಡಲಾಗಿದೆ. ಆದರೆ ಮುಂಬರುವ ದಿನಗಳಲ್ಲಂತೂ ಜಾರಿಗೂ ಬರುವ ಸಾಧ್ಯತೆಗಳಿದ್ದು, ದುಬಾರಿ ಆಗಲಿದೆ. ಆದರೆ ಜಿಎಸ್ ಟಿ ಜಾರಿ ಆದ ಮೇಲೆ ವಸ್ತುಗಳು ನಿಮ್ಮನ್ನು ತಲುಪವ ವೇಗ ಹೆಚ್ಚಾಗಲಿದೆ.

ಏಕೆಂದರೆ ತುಂಬ ಪೇಪರ್ ವರ್ಕ್ ಗಳಿಲ್ಲ. ಅಂದರೆ ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿಯ ತೆರಿಗೆ ಅಂತಿಲ್ಲ. ನೀವು ಬೆಂಗಳೂರಿನಲ್ಲಿದ್ದು, ನಿಮಗೆ ಮಾರಾಟ ಮಾಡುವ ವ್ಯಕ್ತಿ ದೆಹಲಿಯಲ್ಲಿದ್ದರೆ ಪ್ರತ್ಯೇಕ ಬಿಲ್, ಒಂದಿಷ್ಟು ಕಾಗದ-ಪತ್ರಗಳನ್ನು ತಯಾರು ಮಾಡಬೇಕಾಗ್ತಿತ್ತು. ಆದರೆ ಇನ್ನು ಅಂಥ ಕೆಲಸಗಳು ಇರಲ್ಲವಾದ್ದರಿಂದ ವಸ್ತುಗಳು ಬೇಗ ಗ್ರಾಹಕರನ್ನು ತಲುಪುತ್ತವೆ.

ಇನ್ನು ಮುಂದೆ ಪುಕ್ಕಟೆ, ರಿಯಾಯಿತಿಗಳು ಇರಲ್ಲ

ಇನ್ನು ಮುಂದೆ ಪುಕ್ಕಟೆ, ರಿಯಾಯಿತಿಗಳು ಇರಲ್ಲ

ಭಯಂಕರ ರಿಯಾಯಿತಿಗಳು ಮತ್ತು ಪುಕ್ಕಟೆ ಆಫರ್ ಗಳಿಗಾಗಿ ನೀವು ಕಾಯುತ್ತಿದ್ದಿರಿ ಅನ್ನೋದಾದರೆ ಇನ್ನು ಮುಂದೆ ಅಂಥ ಅವಕಾಶಗಳು ಸಿಗೋದು ಕಷ್ಟ. ಏಕೆಂದರೆ ಅವುಗಳಿಗೆ ಹೆಚ್ಚುವರಿ ತೆರಿಗೆಗಳು ಬೀಳುತ್ತವೆ. ಇ ಕಾಮರ್ಸ್ ಕಂಪೆನಿಗಳು ಸರಬರಾಜುದಾರರಿಂದ ಖರೀದಿಸುವ ವಸ್ತುಗಳ ಮೇಲೆ ತೆರಿಗೆ ಪಾವತಿಸಬೇಕು ಆದ್ದರಿಂದ ಹಲವು ಸಂದರ್ಭದಲ್ಲಿ ರಿಯಾಯಿತಿ ಕೊಡುವುದು ಸಾಧ್ಯವಾಗಲಿಕ್ಕಿಲ್ಲ.

ಅಂಥ ಪೋರ್ಟಲ್ ಗಳಿಗೆ ಯಾವ ನಿಯಮ

ಅಂಥ ಪೋರ್ಟಲ್ ಗಳಿಗೆ ಯಾವ ನಿಯಮ

ನೀವು ಅಮೆಜಾನ್, ಇ ಬೇ ಅಂಥ ಪೋರ್ಟಲ್ ಗಳಿಂದ ವಸ್ತು ಖರೀದಿಸಿದರೆ ಅವರು ವಿದೇಶಿ ನೋಟು ಬಳಸಿ ವ್ಯವಹಾರ ಮಾಡುತ್ತಾರೆ. ಅಂಥ ವ್ಯವಹಾರದವರಿಗೆ ಸರಕಾರದ ನಿಯಮಗಳು ಯಾವ ರೀತಿ ಇರುತ್ತವೆ ಎಂಬುದು ಗೊತ್ತಾಗಬೇಕಿದೆ.

ಜಿಎಸ್ಟಿ ಬಳಿಕ ಚಿನ್ನದ ಬೆಲೆ ಗಗನ ಚುಂಬನಜಿಎಸ್ಟಿ ಬಳಿಕ ಚಿನ್ನದ ಬೆಲೆ ಗಗನ ಚುಂಬನ

ವಾಪಸ್ ಅಥವಾ ರದ್ದು ಕಷ್ಟ

ವಾಪಸ್ ಅಥವಾ ರದ್ದು ಕಷ್ಟ

ಖರೀದಿ ಮಾಡಿದ ವಸ್ತುಗಳನ್ನು ವಾಪಸ್ ಮಾಡುವುದಾಗಲೀ ಅಥವಾ ರದ್ದು ಮಾಡುವುದಾಗಲಿ ತುಂಬ ಸವಾಲಿನ ಕೆಲಸ ಆಗುತ್ತದೆ.

ಜಿಎಸ್ ಟಿಗೆ ಮುನ್ನ ಸ್ಟಾಕ್ ಕ್ಲಿಯರೆನ್ಸ್, ಸಿಕ್ಕಾಪಟ್ಟೆ ಡಿಸ್ಕೌಂಟ್ಜಿಎಸ್ ಟಿಗೆ ಮುನ್ನ ಸ್ಟಾಕ್ ಕ್ಲಿಯರೆನ್ಸ್, ಸಿಕ್ಕಾಪಟ್ಟೆ ಡಿಸ್ಕೌಂಟ್

ಮೊದಲಿಗೆ ತೆರಿಗೆ ಪಾವತಿಸಬೇಕು

ಮೊದಲಿಗೆ ತೆರಿಗೆ ಪಾವತಿಸಬೇಕು

ಇ ಕಾಮರ್ಸ್ ಕಂಪೆನಿಗಳಿಗೆ ಶೇ ಹದಿನೆಂಟರಷ್ಟು ವಸ್ತುಗಳ ವಾಪಸಾತಿ ಅಥವಾ ಆರ್ಡರ್ ರದ್ದು ಮಾಡುವುದು ಇರುತ್ತದೆ. ಈಗ ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ (ಟಿಡಿಎಸ್) ಅಂತ ಆಗಿಬಿಟ್ಟರೆ ಇ ಕಾಮರ್ಸ್ ಕಂಪೆನಿಗಳು ಮೊದಲಿಗೆ ತೆರಿಗೆ ಹಣವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಆರ್ಡರ್ ರದ್ದಾದರೆ ಅಥವಾ ವಾಪಸ್ ಆದರೆ ಆ ನಂತರ ಸರಕಾರ ತೆರಿಗೆ ಹಣ ರೀಫಂಡ್ ಮಾಡುತ್ತದೆ. ಈ ಕಾರಣಕ್ಕೆ ಕಂಪೆನಿಗಳಿಗೆ ಹಣಕಾಸು ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಸವಾಲಾಗುತ್ತದೆ.

ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...

English summary
With less than a week left for the rollout of GST, e-commerce retailers are trying their best to finish their pending stock. They are luring in customers by giving discount offers ranging from 25 per cent to 90 per cent. But that's going to change after July 1 when the GST comes into force. Most of your online shopping will get expensive after the GST. Here's how?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X