ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಸಾಲ, ವಾಹನ ಸಾಲ, ಆಸಾಲ ಈಸಾಲದ ಬಡ್ಡಿ ಇಳಿಕೆ?

By Mahesh
|
Google Oneindia Kannada News

ಮುಂಬೈ, ಮಾ.3: ಹೊಸ ಹಣಕಾಸು ನೀತಿ ಪ್ರಕಟಿಸುವುದಕ್ಕೂ ಮುನ್ನವೇ ಆರ್ ಬಿಐನಿಂದ ಸಾಲ ಪಡೆಯುವವರಿಗೆ ಗಿಫ್ಟ್ ಸಿಕ್ಕಿದೆ. ಆರ್ ಬಿಐ ಬಡ್ಡಿದರ 25 ಅಂಶಗಳಷ್ಟು ಇಳಿಕೆ ಮಾಡಿದೆ. ಬ್ಯಾಂಕಿನಿಂದ ಗೃಹ, ವಾಹನ ಲೋನ್ ಪಡೆಯುವವರು ಬ್ಯಾಂಕಿನತ್ತ ಮುಖ ಮಾಡಬಹುದಾಗಿದೆ.

ಫೆ.3ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಣಕಾಸು ನೀತಿ ಪ್ರಕಟಿಸುವುದಕ್ಕೂ ಮುನ್ನವೇ ರೆಪೋ ದರ ಇಳಿಕೆ ಮಾಡಿದ್ದ ಆರ್ ಬಿಐ ಮತ್ತೊಮ್ಮೆ ಸಾರ್ವಜನಿಕರಿಗೆ ಹಿತಕರ ಸುದ್ದಿ ನೀಡಿದೆ. ಹೀಗಾಗಿ ಬ್ಯಾಂಕುಗಳ ಗೃಹ ಹಾಗೂ ಕಾರು ಸಾಲ ಕೈಗುಟುಕುವಂತಾಗಲಿದೆ.[ರೆಪೋ ದರ ಇಳಿಕೆ: ಸಾಲ ಮಾಡಿ ತುಪ್ಪ ತಿನ್ನಲಡ್ಡಿಯಿಲ್ಲ]

ಯುನೈಟೆಡ್ ಬ್ಯಾಂಕ್ ಈಗಾಗಲೇ 25 ಮುಲಾಂಶ ಕಡಿತ ಘೋಷಿಸಿದೆ. ಇತರೆ ಬ್ಯಾಂಕುಗಳು ಇದೇ ಹಾದಿ ಹಿಡಿದರೆ ಗ್ರಾಹಕರು ಸಾಲದ ಬಡ್ಡಿದರ ಇಳಿಕೆ ನಿರೀಕ್ಷಿಸಬಹುದು.ರೆಪೋ ದರ 25 ಮೂಲಾಂಶ(bps) ಶೇ 7.75ಕ್ಕೆ ಇಳಿಕೆ ಮಾಡಲಾಗಿದೆ. ಶೇ 8ರಷ್ಟಿದ್ದ ರೆಪೋ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಳಿಸಲಾಗಿದೆ. ರೆಪೋದರ ಆಧಾರಿಸಿ ಬ್ಯಾಂಕುಗಳು ಈಗ ಶೇ 8.75ರಂತೆ ಆರ್ ಬಿಅನಿಂದ ಹಣ ಪಡೆದುಕೊಳ್ಳಲಿವೆ.

Home Loans, Auto Loans, Personal Loans May get Cheaper With RBI Interest Rate Cut

ಆದರೆ, ಆರ್ ಬಿಐ ರೆಪೋ ದರ ಬಡ್ಡಿದರ ಇಳಿಕೆ ಮಾಡಿದ ಕೂಡಲೇ ಬ್ಯಾಂಕ್ ಗಳು ವಿವಿಧ ಸಾಲಕ್ಕೆ ನೀಡಿದ ಬಡ್ಡಿದರ ಇಳಿಕೆ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಅದರೆ, ಈಗಿನ ಪರಿಸ್ಥಿತಿ ಗಮನಿಸಿದರೆ ಸಾಲ ನೀಡಿಕೆ ದರ (credit off take) ಅಷ್ಟು ಪ್ರಬಲವಾಗಿಲ್ಲ. ಹೀಗಾಗಿ ಬ್ಯಾಂಕುಗಳ ಬಡ್ಡಿ ದರ ಇಳಿಕೆ ಮಾಡಿ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚು. [ವಿಡಿಯೋ :ಆರ್ ಬಿಐನಿಂದ ಬಡ್ಡಿದರ ಇಳಿಕೆ]

ನಗದು ಮೀಸಲು ಅನುಪಾತ(ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಸದ್ಯಕ್ಕಿಲ್ಲ.ಗಾಹ್ರಕ ದರ ಸ್ಯೂಚಂಕ (ಸಿಪಿಐ) ಶೇ 5ಕ್ಕೆ ಕುಸಿದಿದೆ. ಜನವರಿ 2016ರ ತನಕ ಹಣದುಬ್ಬರ ಶೇ 6ರಂತೆ ಉಳಿಯುವ ನಿರೀಕ್ಷೆಯಿದೆ ಇದೆಲ್ಲವನ್ನು ಗಮನಿಸಿ ಬ್ಯಾಂಕುಗಳ ಮುಂದಿನವಾರ ಬಡ್ಡಿ ದರ ಇಳಿಕೆ ಬಗ್ಗೆ ಚರ್ಚೆ ನಡೆಸಲಿದ್ದು, ಮುಂದಿನ ವಾರ ಶುಭ ಸುದ್ದಿ ನಿರೀಕ್ಷಿಸಬಹುದು.

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ.

ಒನ್ ಇಂಡಿಯಾ ಸುದ್ದಿ

English summary
The Reserve Bank of India's (RBI) surprise decision to cut interest rates outside of the Monetary policy for the second time in a row could make home, auto and personal loans cheaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X