ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಗೆ ಆರ್ ಬಿಐನಿಂದ ಹೋಳಿ ಹಬ್ಬಕ್ಕೆ ಉಡುಗೊರೆ

ಅರ್ ಬಿಐನಿಂದ ಗ್ರಾಹಕರಿಗೆ ಹೋಳಿ ಹಬ್ಬದ ಗಿಫ್ಟ್ ಸಿಕ್ಕಿದೆ. ಉಳಿತಾಯ ಖಾತೆ (ಎಸ್ ಬಿ) ಗಳಿಂದ ಹಣ ವಿಥ್ ಡ್ರಾ ಮಿತಿಯನ್ನು ತೆಗೆದು ಹಾಕಲಾಗಿದೆ. ಸೋಮವಾರ(ಮಾರ್ಚ್ 13, 2017) ದಿಂದ ಈ ಸೌಲಭ್ಯ ಜಾರಿಗೆ ಬರಲಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 13: ಅರ್ ಬಿಐನಿಂದ ಗ್ರಾಹಕರಿಗೆ ಹೋಳಿ ಹಬ್ಬದ ಗಿಫ್ಟ್ ಸಿಕ್ಕಿದೆ. ಉಳಿತಾಯ ಖಾತೆ (ಎಸ್ ಬಿ) ಗಳಿಂದ ಹಣ ವಿಥ್ ಡ್ರಾ ಮಿತಿಯನ್ನು ತೆಗೆದು ಹಾಕಲಾಗಿದೆ. ಸೋಮವಾರ(ಮಾರ್ಚ್ 13, 2017) ದಿಂದ ಈ ಸೌಲಭ್ಯ ಜಾರಿಗೆ ಬರಲಿದೆ. ಈ ಮುಂಚೆ ವಾರಕ್ಕೆ 50,000 ರುಪಾಯಿ ಮಾತ್ರ ಉಳಿತಾಯ ಖಾತೆಯಿಂದ ವಿಥ್ ಡ್ರಾ ಮಾಡಬಹುದಾಗಿತ್ತು.

ನವೆಂಬರ್ 8,2016ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಅಪನಗದೀಕರಣ ಯೋಜನೆ ಜಾರಿಗೊಳಿಸಿದ್ದರು.

Holi Gift from RBI : No Limits On Cash Withdrawal From Savings Accounts From March 13

ಇದಾದ ಬಳಿಕ ದೇಶದ ಎಲ್ಲ ಬ್ಯಾಂಕ್ ಗಳಲ್ಲಿ ನಗದು ಕೊರತೆ ಎದುರಾಗಿತ್ತು. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ನಗದು ಪೂರೈಸಲು ಆರ್ ಬಿಐಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ನಗದು ವಿಥ್ ಡ್ರಾ ಮಿತಿ ಹೇರಲಾಗಿತ್ತು.

ಉಳಿತಾಯ ಖಾತೆಯಿಂದ ನಗದು ವಿಥ್ ಡ್ರಾ ವಿಧಿಸಲಾಗಿರುವ ಮಿತಿಯನ್ನು ಆರ್‌ಬಿಐ ಎರಡು ಹಂತದಲ್ಲಿ ಕಡಿಮೆ ಮಾಡಿತ್ತು. ಮೊದಲ ಹಂತದಲ್ಲಿ ಫೆಬ್ರವರಿ 20 ರಂದು ಉಳಿತಾಯ ಖಾತೆಗಳಿಂದ ಪ್ರತಿವಾರ ನಗದು ಹಿಂಪಡೆಯುವ ಮಿತಿಯನ್ನು 24,000 ರಿಂದ 50,000ಕ್ಕೂ ಹೆಚ್ಚಿಸಲಾಯಿತು. ಈಗ ಉಳಿತಾಯ ಖಾತೆಯಿಂದ ಹಣ ಪಡೆಯಲು ಎಲ್ಲ ಮಿತಿಯನ್ನು ತೆಗೆದುಹಾಕಲಾಗಿದೆ ಎಂದು ಆರ್‌ಬಿಐ ಉಪ ಗವರ್ನರ್ ಆರ್. ಗಾಂಧಿ ಪ್ರಕಟಿಸಿದ್ದಾರೆ.

ಫೆಬ್ರವರಿ 01ರಂದು ರಂದು ಚಾಲ್ತಿ ಖಾತೆಗಳು, ಕ್ಯಾಶ್ ಕ್ರೆಡಿಟ್ ಖಾತೆಗಳು ಹಾಗೂ ಎಟಿಎಂನಿಂದ ಹಣ ಹಿಂಪಡೆಯುವ ಮಿತಿಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಆದರೆ, ಉಳಿತಾಯ ಖಾತೆಯಿಂದ ಹಣ ಹಿಂಪಡೆಯುವ ಮಿತಿಯನ್ನು ವಾರಕ್ಕೆ 24,000ಕ್ಕೆ ನಿಗದಿಪಡಿಸಲಾಗಿತ್ತು. ಈಗ ಎಲ್ಲಾ ಮಿತಿಗಳನ್ನು ಮೀರಿ ನಿಮ್ಮ ಖಾತೆಯಿಂದ ಹಣ್ನ ವಿಥ್ ಡ್ರಾ ಮಾಡಬಹುದಾಗಿದೆ.

English summary
Holi Gift from RBI : No Limits On Cash Withdrawal From Savings Accounts From TodayThe limit on cash withdrawals from savings bank account has been lifted from Monday. Till March 13, there was a cash withdrawal limit of up to Rs 50,000 per week on savings accounts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X