ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಸಾಲ ಪಡೆಯುವರಿಗೆ ತೆರಿಗೆ ವಿನಾಯ್ತಿ ನೀಡಲು ಕೇಂದ್ರದ ಚಿಂತನೆ

ಅಪನಗದೀಕರಣದಿಂದಾಗಿ ಕುಸಿದಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಗೃಹ ಸಾಲ ಪಡೆಯುವವರಿಗೆ ಕೆಲವಾರು ತೆರಿಗೆ ವಿನಾಯ್ತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

|
Google Oneindia Kannada News

ನವದೆಹಲಿ, ಜನವರಿ 15: ಅಪನಗದೀಕರಣದಿಂದಾಗಿ ಕುಸಿದಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಗೃಹ ಸಾಲ ಪಡೆಯುವವರಿಗೆ ಕೆಲವಾರು ತೆರಿಗೆ ವಿನಾಯ್ತಿ ನೀಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ಗೃಹ ಸಾಲದ ಮೇಲೆ ವಾರ್ಷಿಕವಾಗಿ 2 ಲಕ್ಷ ರು.ಗಳಿಗಿಂತ ಅಧಿಕ ಬಡ್ಡಿಯನ್ನು ಕಟ್ಟುತ್ತಿರುವವರಿಗೆ ಕೆಲವಾರು ತೆರಿಗೆ ವಿನಾಯ್ತಿಗಳನ್ನು ಘೋಷಿಸಲು ಈಗಾಗಲೇ ಕೇಂದ್ರ ವಿತ್ತ ಸಚಿವಾಲಯವು ಚರ್ಚೆ ನಡೆಸಿದೆ. ಶೀಘ್ರದಲ್ಲೇ ಮಂಡಿಸಲಾಗುವ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

Higher tax breaks on home loans likely in Budget

ಅಪನಗದೀಕರಣದ ನಂತರ, ಬ್ಯಾಂಕುಗಳಿಗೆ ಅಪಾರ ಹಣ ಹರಿದುಬಂದ ಹಿನ್ನೆಲೆಯಲ್ಲಿ, ಬ್ಯಾಂಕ್ ಗಳ ಬಡ್ಡಿ ದರವನ್ನು ಇಳಿಸುವಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳುವತ್ತ ಕೇಂದ್ರ ಸರ್ಕಾರ ಕಾಲಿಟ್ಟಿದೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರವು ಇಂಥ ತೆರಿಗೆ ವಿನಾಯ್ತಿ ನಿಯಮಗಳನ್ನು ಘೋಷಿಸಿದ್ದೇ ಆದಲ್ಲಿ, ಮಧ್ಯಮ ವರ್ಗಕ್ಕೆ ಅದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಆರ್ಥಿಕ ತಜ್ಞರು ಲೆಕ್ಕ ಹಾಕಿದ್ದಾರೆ.

English summary
The government is looking to provide higher tax incentives on home loans to boost demand and prop up the faltering realty sector that has been further hit by demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X