ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ಬಾಟ್ಲಿ ಕೇಸ್, ಮಲ್ಯಗೆ ಸ್ವಲ್ಪ ರಿಲೀಫ್

By Mahesh
|
Google Oneindia Kannada News

ಬೆಂಗಳೂರು, ಅ.15: ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಅತಿ ಹೆಚ್ಚು ಸಾಲ ಪಡೆದಿರುವ ಟಾಪ್ 50 ಕಂಪನಿಗಳ ಪೈಕಿ ವಿಜಯ್ ಮಲ್ಯ ಕಂಪನಿ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ವ್ಹಿಸ್ಕಿ ಬಾಟ್ಲಿನ ಮೇಲಿನ ದರ ಹೆಚ್ಚು ಕಮ್ಮಿ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಮಲ್ಯಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.

ವಿಸ್ಕಿ ಬಾಟಲಿಯ ಮೇಲೆ ದರ ಸ್ಟಿಕ್ಕರ್ ಅಂಟಿಸುವುದರಲ್ಲಿ ಮಲ್ಯ ಒಡೆತನ ಯುನೈಟೆಡ್ ಸ್ಪಿರೀಟ್ಸ್ ಲಿ ಸಂಸ್ಥೆ ಕಾನೂನು ಉಲ್ಲಂಘನೆ ಮಾಡಿದೆ ಎಂಬ ಆರೋಪದ ವಿಚಾರಣೆ ಹೈಕೋರ್ಟಿನಲ್ಲಿ ನಡೆದಿದೆ. ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಮಲ್ಯ ಅವರು ಕೋರಿದ್ದ ಅರ್ಜಿಯನ್ನು ಜಸ್ಟೀಸ್ ಕೆ ಫಣೀಂದ್ರ ಅವರು ಮಂಗಳವಾರ ಪುರಸ್ಕರಿಸಿದ್ದಾರೆ.[ಮಲ್ಯರಿಂದ ಸಾಲ ವಸೂಲಿ ಕಷ್ಟ ಕಷ್ಟ]

ದರ ನಿಗದಿ ಬಗ್ಗೆ ಇರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಹೊರಡಿಸಿ ಮಲ್ಯ ಅವರ ವಿರುದ್ಧದ ವಿಚಾರಣೆ ತಡೆಯಾಜ್ಞೆ ನೀಡಿದ್ದಾರೆ.

HC stays proceedings against Vijay Mallya USL case

* UB groupನ ಮಾರುಕಟ್ಟೆ ಮೌಲ್ಯ 3,261 ಕೋಟಿ ರು (17.35 % ಮಲ್ಯ ಪಾಲುದಾರಿಕೆ)
* ಯುನೈಟೆಡ್ ಸ್ಪಿರೀಟ್ಸ್ ಮೌಲ್ಯ: 413 ಕೋಟಿ ರು (1.20 %)

ಡಿಸೆಂಬರ್ 2013ರಲ್ಲಿ ಮಲ್ಯ ಅವರ ಯುನೈಟೆಡ್ ಸ್ಪೀರಿಟ್ಸ್ ಕಂಪನಿಗೆ ಸೇರಿದ ಬ್ಲಾಕ್ ಡಾಗ್ ಸ್ಕಾಚ್ ವಿಸ್ಕಿ ಮೂರು ಪ್ಯಾಕೇಜ್ಡ್ ಬಾಕ್ಸ್ ಗಳನ್ನು ಮೆಟ್ರೋಲಾಜಿ ವಿಭಾಗದ ಇನ್ಸ್ ಪೆಕ್ಟರ್ ರೊಬ್ಬರು ಜಪ್ತಿ ಮಾಡಿದ್ದರು. ಬಾಟಲಿಗಳ ಮೇಲೆ ನಿಗದಿತ ಬೆಲೆ ಸ್ಟಿಕ್ಕರ್ ಜೊತೆಗೆ ಹೆಚ್ಚುವರಿ ಸ್ಟಿಕ್ಕರ್ ಅಂಟಿಸಲಾಗಿತ್ತು. ಅದರೆ, ಅಬಕಾರಿ ಇಲಾಖೆ ನಿಯಮ ಬದಲಾದ ಕಾರಣ ದರ ಸ್ಟಿಕ್ಕರ್ ಬದಲಾಯಿಸಬೇಕಾಯಿತು ಎಂದು ಯುಎಸ್ ಎಲ್ ಹೇಳಿತ್ತು. [ಮದ್ಯದಂಗಡಿ ಮುಚ್ಚಳಕ್ಕೆ ಆದೇಶ]

ಅದರೆ, ಈ ಬಗ್ಗೆ ಮಂಗಳೂರು ಕೋರ್ಟಿನಲ್ಲಿ ಮಲ್ಯ ಸೇರಿದಂತೆ ಯುಎಸ್ ಎಲ್ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಮಲ್ಯ ವಿರುದ್ಧ ಜೂ 24, 2014ರಂದು ಸಮನ್ಸ್ ಜಾರಿ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಯುಎಸ್ ಎಲ್ ಹೈಕೋರ್ಟಿನಲ್ಲಿ ಅರ್ಜಿ ಹಾಕಿತ್ತು. ಇದರ ವಿಚಾರಣೆ ನಡೆದು ನ್ಯಾ. ಫಣೀಂದ್ರ ಅವರು ಮಲ್ಯ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದಾರೆ.

English summary
The High Court of Karnataka on Tuesday stayed for four weeks the criminal proceedings initiated against United Spirits Ltd. and its heads, including Vijay Mallya, in a complaint related to alleged violation of law in affixation of price sticker on whisky bottles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X