ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ ಹಿಂದಿಕ್ಕಿದ ಅಮೆಜಾನ್‌ ಇದೀಗ ನಂಬರ್ ಒನ್!

|
Google Oneindia Kannada News

ಬೆಂಗಳೂರು, ಆಗಸ್ಟ್, 24: ಇ ಕಾಮರ್ಸ್ ವಿಭಾಗದಲ್ಲಿ ಹೊಂದಿದ್ದ ಮೊದಲ ಸ್ಥಾನವನ್ನು ಫ್ಲಿಪ್ ಕಾರ್ಟ್ ನಿಂದ ಅಮೆಜಾನ್ ಕಸಿದುಕೊಂಡಿದೆ. ನಂಬರ್ ಒನ್ ಸ್ಥಾನವನ್ನು ಅಲಂಕರಿಸಿರುವ ಅಮೆಜಾನ್ ಫ್ಲಿಪ್ ಕಾರ್ಟ್ ವಹಿವಾಟಿಗೇ ಸರಿಯಾದ ಹೊಡೆತವನ್ನು ನೀಡಿದೆ.

ಜುಲೈನಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟವಾದ ಒಟ್ಟು ಸಾಮಗ್ರಿಗಳ ಮೌಲ್ಯ 2000 ಕೋಟಿ ರೂ. ಆಗಿದ್ದರೆ, ಅಮೇಜಾನ್ 2000 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಸಾಮಗ್ರಿಗಳ ಮಾರಾಟ ಮಾಡಿದೆ. ಈ ಮೂಲಕ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಆದರೆ ಫ್ಲಿಪ್​ಕಾರ್ಟ್​ನ ಅಂಗಸಂಸ್ಥೆಗಳಾದ ಮಿಂಟ್ರಾ ಮತ್ತು ಜಬಾಂಗ್​ನ ವಹಿವಾಟಿನ ಮೊತ್ತವನ್ನು ಇಲ್ಲಿ ಸೇರಿಸಲಾಗಿಲ್ಲ.['ಕನ್ನಡಕ್ಕೆ ಐದು ಪೈಸೆ ಕಿಮ್ಮತ್ತು ನೀಡದ ಅಮೆಜಾನ್‌ಗೆ ಧಿಕ್ಕಾರ'!]

 Has Flipkart lost No 1 place to Amazon, In India

ಇನ್ನುಳಿದ ಪ್ರಮುಖ ಇ ಕಾಮರ್ಸ್ ತಾಣಗಳ ವಹಿವಾಟಿನಲ್ಲೂ ಏರು ಪೇರಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರಡೆ ಸ್ನಾಪ್​ಡೀಲ್ ವಹಿವಾಟು ಶೇ.50ರಷ್ಟು ಕುಸಿದಿದೆ. 600 ಕೋಟಿ ರೂ. ಮೌಲ್ಯದ ಸಾಮಗ್ರಿಗಳ ಮಾರಾಟ ಮಾಡಿದೆ ಎನ್ನಲಾಗಿದೆ.[ಲಾಭ ಗಳಿಸಬೇಕು ಅಂದ್ರೆ ರಿಸ್ಕ್ ತಗೋಬೇಕು!]

2007ರಿಂದ ಭಾರತದಲ್ಲಿ ವಹಿವಾಟು ಆರಂಭಿಸಿದ ಫ್ಲಿಪ್​ಕಾರ್ಟ್ ವಹಿವಾಟಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡೆ ಬಂದಿದೆ.ಆದರೆ ಇದೀಗ ಏಕಾಏಕಿ ಅಮೆಜಾನ್ ರೇಸ್ ನಲ್ಲಿ ಪ್ರಥಮ ಸ್ಥಾನ ಗಳಿಸಿದೆ.

English summary
Flipkart seems poised to lose its cherished status as India's largest e-commerce firm to arch-rival and role model Amazon.com. Indian unit after losing its lead in July-a potential watershed moment in the country's fledgling Internet business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X