ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ಭರವಸೆ ಹುಸಿ, ಜಿಎಸ್ಟಿ ನಂತರ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ

By Mahesh
|
Google Oneindia Kannada News

ನವದೆಹಲಿ, ಜುಲೈ 03: 'ಒಂದು ದೇಶ, ಒಂದು ತೆರಿಗೆ, ಒಂದೇ ಮಾರುಕಟ್ಟೆ' - ಎಂಬ ಸೂತ್ರದಡಿಯಲ್ಲಿ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜನ ಸಾಮಾನ್ಯರ ದೈನಂದಿನ ಬದುಕಿನಲ್ಲಿ ನಿಧಾನಗತಿಯಲ್ಲಿ ತನ್ನ ಪ್ರಭಾವ ಬೀರುತ್ತಿದೆ. ಈ ನಡುವೆ ಜಿಎಸ್ ಟಿ ಜಾರಿ ನಂತರ ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆಯಾಗಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ನೀಡಿದ್ದ ಭರವಸೆ ಹುಸಿಯಾಗಿದೆ.

ಜಿಎಸ್ ಟಿ ಹಾಗೂ ಸಬ್ಸಿಡಿ ಇಳಿಕೆಯ ಪರಿಣಾಮ, ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬೆಲೆ 32 ರೂ. ಹೆಚ್ಚಳವಾಗಲಿದೆ. ಇಂಧನಕ್ಕೆ ಕರ ವಿಧಿಸದ ರಾಜ್ಯಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 12 ರಿಂದ 15 ರೂ.ಹೆಚ್ಚಳವಾಗುವ ಸಾಧ್ಯತೆಯಿದೆ. ಎಲ್‌ಪಿಜಿ ಜಿಎಸ್ ಟಿಯ 5 ಶೇ. ಸ್ಲಾಬ್ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ದಿಲ್ಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಸಿರು ಇಂಧನಕ್ಕೆ ತೆರಿಗೆ ವಿಧಿಸುತ್ತಿರಲಿಲ್ಲ.2 ರಿಂದ 4 ಶೇ. ವ್ಯಾಟ್ ಮಾತ್ರ ವಿಧಿಸಲಾಗುತ್ತಿತ್ತು.

GST, subsidy cut impact: Your domestic LPG bill just went up by up to Rs 32 from 1 July

ಸಬ್ಸಿಡಿ ಕಡಿತ : ಉದಾಹರಣೆಗೆ ಅರ್ಹ ಗ್ರಾಹಕರಿಗೆ ಸದ್ಯದ ವ್ಯವಸ್ಥೆಯಲ್ಲಿ 119.85 ರೂ. ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಹೊಸ ಅಧಿಸೂಚನೆಯ ಪ್ರಕಾರ ಬ್ಯಾಂಕ್ ಖಾತೆಗೆ 107 ರೂ. ಸಬ್ಸಿಡಿ ಮೊತ್ತ ಜಮೆಯಾಗಲಿದೆ. ಜಿಎಸ್ ಟಿ ಹಾಗು ಸಬ್ಸಿಡಿ ಕಡಿತದಿಂದ ಪ್ರತಿ ಸಿಲಿಂಡರ್ ಬೆಲೆ 32 ರೂ. ಹೆಚ್ಚಾಗಲಿದೆ.

ಜಿಎಸ್ ಟಿ ಜಾರಿಯ ಬಳಿಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದರ 69 ರೂ. ಕಡಿತಗೊಂಡಿದೆ. ಆಟೋ ಎಲ್ ಪಿಜಿ ಮೇಲೆ ಶೇ 12 ರಿಂದ 15ರ ತನಕದ ತೆರಿಗೆ ಇತ್ತು ಜಿಎಸ್ ಟಿ ನಂತರ ಈ ದರ ಶೇ 5ಕ್ಕೆ ಇಳಿದಿದೆ. ಈ ಹಿಂದೆ ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್‌ಪಿಜಿಗೆ 22.5 ಶೇ. ತೆರಿಗೆ ಇರುತ್ತಿತ್ತು. ಜಿಎಸ್ ಟಿಯ ಬಳಿಕ ಕೇವಲ 18 ಶೇ. ತೆರಿಗೆ ವಿಧಿಸಲಾಗುತ್ತಿದೆ. ಈ ಹಿಂದೆ ಕಮರ್ಶಿಯಲ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,121 ರೂ.ಇತ್ತು. ಇದೀಗ 1,052ರೂ.ಗೆ ಕುಸಿದಿದೆ.

English summary
With the introduction of GST and the the other is a reduction in subsidyLPG cylinder may have shot up by up to Rs 32 from 1 July depending on the state you reside in, according to a report in The Times of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X