ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಜೊತೆ 5 ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರದ ಹಸಿರು ನಿಶಾನೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಫೆಬ್ರವರಿ 15: ಜಾಗತಿಕ ಪ್ರಮಾಣದ ಬ್ಯಾಂಕ್ ರೂಪಿಸಬೇಕು ಎಂಬ ಕಾರಣಕ್ಕೆ ಕೇಂದ್ರ ಸಚಿವ ಸಂಪುಟ ಎಸ್ ಬಿಐ ಹಾಗೂ ಅದರ ಇತರ ಐದು ಸಹವರ್ತಿ ಬ್ಯಾಂಕ್ ಗಳ ವಿಲೀನಕ್ಕೆ ಮುಂದುವರಿಯುವಂತೆ ಸೂಚನೆ ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಆದರೆ, ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಎಸ್ ಬಿಐ ಜತೆಗೆ ವಿಲೀನಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಐದು ಬ್ಯಾಂಕ್ ಗಳನ್ನು ಸ್ಟೇಟ್ ಬ್ಯಾಂಕ್ ಇಂಡಿಯಾದೊಳಗೆ ವಿಲೀನ ಮಾಡುವುದರಿಂದ ಮೊದಲ ವರ್ಷವೇ ಒಂದು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಉಳಿತಾಯ ಆಗುವ ಅಂದಾಜು ಮಾಡಲಾಗಿದೆ.[ಎಸ್ ಬಿಐನಲ್ಲಿ 2313 ಪ್ರೊಬೆಷನರಿ ಅಧಿಕಾರಿ ಹುದ್ದೆ, ಮಾ.6 ಕೊನೆ ದಿನ]

State bank of India

"ಸಂಪುಟ ಸಭೆಯು ಈ ಹಿಂದೆ ತಾತ್ವಿಕವಾಗಿ ವಿಲೀನ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿತ್ತು. ವಿವಿಧ ಬ್ಯಾಂಕ್ ಗಳ ಒಪ್ಪಿಗೆಗಾಗಿ ಕಾಯಲಾಗುತ್ತಿತ್ತು. ಬೋರ್ಡ್ ಗಳ ಶಿಫಾರಸನ್ನು ಬುಧವಾರ ಒಪ್ಪಲಾಗಿದೆ ಮತ್ತು ಸಂಪುಟವು ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ" ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಪುಟ ಸಭೆಯ ವಿವರಗಳ ಮಾಹಿತಿ ನೀಡುತ್ತಾ ತಿಳಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಈ ಐದು ಬ್ಯಾಂಕ್ ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗಲಿದೆ.[ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!]

"ಈ ವಿಲೀನ ಪ್ರಕ್ರಿಯೆಯಿಂದ ಎಸ್ ಬಿಐ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಲಿದೆ. ಬರೀ ದೇಶೀಯವಾಗಿ ಮಾತ್ರ ಅಲ್ಲ, ಜಾಗತಿಕ ಮಟ್ಟದಲ್ಲೂ ದೊಡ್ಡ ಪ್ರಮಾಣದ ಬ್ಯಾಂಕ್ ಆಗಲಿದೆ" ಎಂದು ಸಂಪುಟ ಸಭೆಯ ನಂತರ ವಿತ್ತ ಸಚಿವರು ಹೇಳಿದ್ದಾರೆ.

English summary
Cabinet Wednesday gave the go-ahead to the merger plan of SBI and its five associates, a step aimed at strengthening the banking sector through consolidation of public banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X