ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾವಿರ ವಿದ್ಯುತ್ ಕಾರುಗಳ ಉತ್ಪಾದನೆಗೆ ಕೇಂದ್ರದ ನಿರ್ಧಾರ

10 ಸಾವಿರ ವಿದ್ಯುತ್ ಚಾಲಿತ ಕಾರು ತಯಾರಿಕೆಗೆ ಗ್ಲೋಬಲ್ ಟೆಂಡರ್ ಕರೆದ ಕೇಂದ್ರ. ಕೇಂದ್ರದ ವಿದ್ಯುತ್ ಸಚಿವ ಪಿಯೂಷ್ ಗೋಯೆಲ್ ಅವರ ಆಣತಿ ಮೇಲೆಗೆ ಟೆಂಡರ್. 2030ರ ಹೊತ್ತಿಗೆ ಭಾರತವನ್ನು ಸಂಪೂರ್ಣ ವಿದ್ಯುತ್ ಕಾರುಗಳ ತಾಣವನ್ನಾಗಿಸುವ ಗುರಿ.

|
Google Oneindia Kannada News

ನವದೆಹಲಿ, ಆಗಸ್ಟ್ 17: 2030ರ ಹೊತ್ತಿಗೆ ಭಾರತವನ್ನು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಕಾರುಗಳ ತಾಣವನ್ನಾಗಿಸುವ ಕನಸು ಹೊತ್ತಿರುವ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಅವರು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನಿಟ್ಟಿದ್ದಾರೆ.

ಇದೇ ಗೋಯೆಲ್ ಅವರ ಆಣತಿಯಂತೆ, ಸರ್ಕಾರಿ ಸ್ವಾಮ್ಯದ ಕಂಪನಿಯಾದ ಎನರ್ಜಿ ಎಫಿಶಿಯನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್), ಇದೀಗ ಸೆಡಾನ್ ಮಾದರಿಯ 10 ಸಾವಿರ ಕಾರುಗಳನ್ನು ತಯಾರು ಮಾಡಿಕೊಡುವಂತೆ ಜಾಗತಿಕ ಟೆಂಡರ್ ಕರೆದಿದೆ.

Government invites global bids for 10,000 electric cars

ಒಂದು ಬಾರಿ ಚಾರ್ಚ್ ಮಾಡಿದರೆ, ನೂರೈವತ್ತು ಕಿ.ಮೀ. ಓಡಬಲ್ಲ ಕಾರುಗಳನ್ನು ತಯಾರಿಸಿಕೊಂಡಬೇಕೆಂದು ಟೆಂಡರ್ ನಲ್ಲಿ ಕೇಳಲಾಗಿದೆ. ಈ ಟೆಂಡರ್ ನ ಅಡಿಯಲ್ಲಿ ತಯಾರಾಗುವ ಕಾರುಗಳನ್ನು ಕೇಂದ್ರ ಸರ್ಕಾರದ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಉಪಯೋಗಿಸಲಿ, ಇದರ ಮೌಲ್ಯ ಮಾಪನ ಮಾಡಲಿದ್ದಾರೆ.

ದೇಶದಲ್ಲಿ ವಿದ್ಯುತ್ ಚಾಲಿತ ಕಾರುಗಳಿಗೆ ಉತ್ತೇಜನ ನೀಡಲು ಈ ಹೆಜ್ಜೆ ಇಡಲಾಗಿದೆ.

English summary
State-owned Energy Efficiency Services Ltd (EESL) has invited global bids for 10,000 electric sedans that will run up to 150 km on a single charge, for use by government departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X