ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಲ್ಕ, ದಂಡ ನಿಯಮ ಮರುಪರಿಶೀಲಿಸಿ: ಬ್ಯಾಂಕುಗಳಿಗೆ ಕೇಂದ್ರದ ಮನವಿ

ನಿರ್ದಿಷ್ಟ ನಗದು ವ್ಯವಹಾರಗಳಿಗೆ ಶುಲ್ಕ ಹಾಗೂ ಖಾತೆಗಳಲ್ಲಿ ಕನಿಷ್ಟ ಬ್ಯಾಂಕ್ ಬ್ಯಾಲೆನ್ಸ್ ಇಟ್ಟುಕೊಳ್ಳದ ಗ್ರಾಹಕರ ಮೇಲೆ ಶುಲ್ಕ ಅಥವಾ ದಂಡ ವಿಧಿಸಲು ಮುಂದಾಗಿರುವ ಬ್ಯಾಂಕುಗಳು.

|
Google Oneindia Kannada News

ನವದೆಹಲಿ, ಮಾರ್ಚ್ 6: ತಮ್ಮಲ್ಲಿನ ನಗದು ವ್ಯವಹಾರಗಳಿಗೆ ನಿಗದಿತ ಶುಲ್ಕ ವಿಧಿಸುವ ವಿಚಾರವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಸೇರಿದಂತೆ, ಎಚ್ ಡಿಎಫ್ ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್ ಬ್ಯಾಂಕುಗಳಿಗೆ ಮನವಿ ಮಾಡಿದೆ.

ಇತ್ತೀಚೆಗೆ, ತಮ್ಮಲ್ಲಿನ ನಗದು ವ್ಯವಹಾರಗಳಿಗೆ ನಿರ್ದಿಷ್ಟ ಶುಲ್ಕ ವಿಧಿಸುವ ನಿರ್ಧಾರವನ್ನು ಎಚ್ ಡಿಎಫ್ ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್ ಬ್ಯಾಂಕುಗಳು ಕೈಗೊಂಡಿದ್ದವು. ಸೋಮವಾರ (ಮಾರ್ಚ್ 6) ಎಸ್ ಬಿಐ ಕೂಡಾ ಇದೇ ನಿರ್ಧಾರವನ್ನು ಕೈಗೊಂಡಿದೆ.[ಎಸ್ ಬಿಐನಲ್ಲೂ ಇನ್ನು ಮುಂದೆ ಹಣ ವ್ಯವಹಾರಕ್ಕೆ ಕಟ್ಟಬೇಕು ಶುಲ್ಕ]

Government Asks Banks To Reconsider Decision To Hike Cash Transaction Fee

ಇದಲ್ಲದೆ, ಇತ್ತೀಚೆಗೆ ಮತ್ತೊಂದು ಹೊಸ ನಿಯಮವನ್ನು ಅಳವಡಿಸಿಕೊಂಡಿದ್ದ ಎಸ್ ಬಿಐ, ಸೇವಿಂಗ್ಸ್ ಹಾಗೂ ವೇತನ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರದ ಗ್ರಾಹಕರ ಮೇಲೆ ದಂಡ ವಿಧಿಸುವುದಾಗಿ ಹೇಳಿತ್ತು. ಈ ನಿಯಮವನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ.[ಇನ್ನು ಬ್ಯಾಂಕಿಗೆ ಹಣ ಕಟ್ಟಿದರೂ ಶುಲ್ಕ, ಹಣ ತೆಗೆದರೂ ಶುಲ್ಕ!]

English summary
Centre asks Banks to reconsider their decision to impose fee on their customers for financial transactions by them. Even, the centre asks SBI to roll back its decision to impose to allot fine for those who doesn't maintain minimum balance in their accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X