ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HTC ಹಾರ್ಡ್ ವೇರ್ ಘಟಕಗಳನ್ನು GOOGLE ಕೊಂಡಿದ್ದೇಕೆ?

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 21: ಅಂತರ್ಜಾಲ ಸರ್ಚ್ ಇಂಜಿನ್ ಸಂಸ್ಥೆಯಾದ ಗೂಗಲ್ ಕಂಪನಿಯು, ತೈವಾನ್ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಯಾದ ಎಚ್ ಟಿಸಿಯ ಕೆಲವು ಹಾರ್ಡ್ ವೇರ್ ತಯಾರಿಕಾ ಘಟಕಗಳನ್ನು ಸುಮಾರು 1 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿ ಮಾಡಿರುವುದಾಗಿ ಪ್ರಕಟಿಸಿದೆ ಎಂದು 'ದ ಗಾರ್ಡಿಯನ್' ವರದಿ ಮಾಡಿದೆ.

ಆದರೆ, ಈ ಖರೀದಿಯು ಎಚ್ ಟಿಸಿ ಕಂಪನಿಯ ಮೂಲ ಷೇರುಗಳ ಖರೀದಿಯಲ್ಲ ಎಂದು ಸ್ಪಷ್ಟಪಡಿಸಿರುವ ಗೂಗಲ್, ಎಚ್ ಟಿಸಿ ಕಂಪನಿ ಒಡೆತನದಲ್ಲಿರುವ ಕೆಲವು ಮೊಬೈಲ್ ಬಿಡಿಭಾಗಗಳ ತಯಾರಿಕಾ ಘಟಕಗಳನ್ನು ಮಾತ್ರ ತಾನು ಖರೀದಿಸುತ್ತಿರುವುದಾಗಿ ತಿಳಿಸಿದೆ.

ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

ವರದಿಯ ಪ್ರಕಾರ, ಗೂಗಲ್ ಹಾಗೂ ಎಚ್ ಟಿಸಿ ಕಂಪನಿಗಳ ಕೆಲವಾರು ವರ್ಷಗಳ ವಾಣಿಜ್ಯ ಅನುಬಂಧ ಹೊಂದಿವೆ. ಗೂಗಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪಿಕ್ಸೆಲ್ ಮೊಬೈಲ್ ಫೋನ್ ಗಳಿಗೆ ಬೇಕಾದ ಕೆಲವಾರು ಬಿಡಿಭಾಗಗಳನ್ನು ಎಚ್ ಟಿಸಿಯೇ ತಯಾರಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಷ್ಟಕ್ಕೂ ಗೂಗಲ್ ಸಂಸ್ಥೆಗೆ ಈ ಎಚ್ ಟಿಸಿಯ ಹಾರ್ಡ್ ವೇರ್ ಬಿಡಿಭಾಗಗಳ ತಯಾರಿಕಾ ಘಟಕಗಳನ್ನು ಕೊಳ್ಳುವ ಅಗತ್ಯವಿತ್ತಾ? ಈ ಖರೀದಿಯ ಹಿಂದೆ ಇರುವ ದೂರದೃಷ್ಟಿ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ...

ತನ್ನದೇ ಹಾರ್ಡ್ ವೇರ್ ವಿಭಾಗ ಸ್ಥಾಪನೆಗೆ ಸಜ್ಜು

ತನ್ನದೇ ಹಾರ್ಡ್ ವೇರ್ ವಿಭಾಗ ಸ್ಥಾಪನೆಗೆ ಸಜ್ಜು

ಇದೀಗ, ಗೂಗಲ್ ಸಂಸ್ಥೆಯು ತನ್ನ ಹಾರ್ಡ್ ವೇರ್ ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ಹಾಗೂ ತನ್ನದೇ ಆದ ಹಾರ್ಡ್ ವೇರ್ ತಯಾರಿಕಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.

ಹಾರ್ಡ್ ವೇರ್ ಸ್ವಾವಲಂಬನೆಗಾಗಿಯೇ ಕಸರತ್ತು

ಹಾರ್ಡ್ ವೇರ್ ಸ್ವಾವಲಂಬನೆಗಾಗಿಯೇ ಕಸರತ್ತು

ಹೀಗೆ ಹಾರ್ಡ್ ವೇರ್ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಲು ನಿರ್ಧರಿಸಿದ ಬೆನ್ನಲ್ಲೇ ಗೂಗಲ್, ಕಳೆದ ವರ್ಷ ಮೊಟರೋಲಾ ಕಂಪನಿಯ ಹಾರ್ಡ್ ವೇರ್ ವಿಭಾಗದ ಮುಖ್ಯಸ್ಥರಾಗಿದ್ದ ರಿಕ್ ಒಸ್ಟೆರ್ಲೊ ಅವರನ್ನು ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿತ್ತು.

ಎಚ್ ಟಿಸಿಗೂ ಬೇಕಿತ್ತು ಒಂದು ಆರ್ಥಿಕ ವರದಾನ

ಎಚ್ ಟಿಸಿಗೂ ಬೇಕಿತ್ತು ಒಂದು ಆರ್ಥಿಕ ವರದಾನ

ಈ ಬೆಳವಣಿಗೆಯ ಮುಂದಿನ ಹೆಜ್ಜೆಯಾಗಿಯೇ ಈಗ ಎಚ್ ಟಿಸಿ ಕಂಪನಿಯ ಕೆಲವಾರು ಹಾರ್ಡ್ ವೇರ್ ತಯಾರಿಕಾ ಘಟಕಗಳನ್ನು ಕೊಂಡುಕೊಳ್ಳುವ ಆಫರ್ ನತ್ತ ಗೂಗಲ್ ಮನಸ್ಸು ಹರಿಸಿತ್ತು. ಅತ್ತ, ಎಚ್ ಟಿಸಿ ಕಂಪನಿಗೂ ಆದಾಯ ಇಳಿಮುಖವಾಗಿರುವುದರಿಂದ ಕೆಲವಾರು ಘಟಕಗಳನ್ನು ಪರಭಾರೆ ಮಾಡುವ ಮನಸ್ಸು ಬಂದಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಗೂಗಲ್ ಸಂಸ್ಥೆ ಆ ಸಂಸ್ಥೆಯಿಂದ ಕೆಲವಾರು ಹಾರ್ಡ್ ವೇರ್ ತಯಾರಿಕಾ ಘಟಕಗಳನ್ನು ಪಡೆದಿದೆ.

ಒಎಸ್ ಬಳಿಕ ಹಾರ್ಡ್ ವೇರ್ ನಲ್ಲೂ ಸಾರ್ವಭೌಮತ್ವಕ್ಕೆ ಯೋಜನೆ

ಒಎಸ್ ಬಳಿಕ ಹಾರ್ಡ್ ವೇರ್ ನಲ್ಲೂ ಸಾರ್ವಭೌಮತ್ವಕ್ಕೆ ಯೋಜನೆ

ಈಗಾಗಲೇ, ಸಾಕಷ್ಟು ಮೊಬೈಲ್ ಕಂಪನಿಗಳಿಗೆ ತಾನೇ ರಚಿಸಿರುವ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಲೈಸನ್ಸ್ ಅನ್ನು ಉಚಿತವಾಗಿ ಕೊಡುವ ಮೂಲಕ ಗೂಗಲ್ ಸರ್ಚ್ ಹಾಗೂ ಮ್ಯಾಪ್ ಗಳ ಆ್ಯಪ್ ಗಳ ಮೂಲಕ ಜಗತ್ತಿನ ಮೊಬೈಲ್ ಫೋನ್ ಒ.ಎಸ್ ಗಳ ಮಾರುಕಟ್ಟಿಯಲ್ಲಿ ಶೇ. 89ರಷ್ಟು ಸಾರ್ವಭೌಮತ್ವವನ್ನ ಗೂಗಲ್ ಸ್ಥಾಪಿಸಿದೆ.

ಭಾರೀ ಮುಂದಾಲೋಚನೆ ಮಾಡಿರುವ ಗೂಗಲ್

ಭಾರೀ ಮುಂದಾಲೋಚನೆ ಮಾಡಿರುವ ಗೂಗಲ್

ಮುಂದೊಂದು ದಿನ ವಿವಿಧ ಫೋನ್ ಗಳ ಹಾರ್ಡ್ ವೇರ್ ಗಳು ತನ್ನ ಆ್ಯಂಡ್ರಾಯ್ಡ್ ಓಎಸ್ ಗೆ ವ್ಯತಿರಿಕ್ತವಾಗಿ ಸ್ಪಂದಿಸಲು ಶುರುವಾದರೆ ತನ್ನ ಆ್ಯಂಡ್ರಾಯ್ಡ್ ಮಾರುಕಟ್ಟೆ ಕುಸಿಯಲಿದೆ ಎಂದು ಆಲೋಚಿಸಿರುವ ಕಂಪನಿ, ಇದೀಗ, ತನ್ನ ಆ್ಯಂಡ್ರಾಯ್ಡ್ ಓಎಸ್ ಗಳಿಗೆ ಸರಿಹೊಂದುವಂಥ ಹಾರ್ಡ್ ವೇರ್ ಗಳನ್ನು ತಾನೇ ತಯಾರಿಸಲು ಗೂಗಲ್ ನಿರ್ಧರಿಸಿದೆ.

English summary
Google has announced a deal to acquire part of Taiwanese firm HTC Corporation's smartphone operations for about $1bn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X