ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು ನಿಲ್ಲಿಸಿದ ಜಾಗ ಮರೆಯುವವರಿಗಾಗಿ ಗೂಗಲ್ ನಿಂದ ಹೊಸ ಆಯ್ಕೆ

ಕಾರನ್ನು ಪಾರ್ಕ್ ಮಾಡಿ ನಿಲ್ಲಿಸಿದ ಜಾಗ ಮರೆಯುವವರಿಗಾಗಿ ಗೂಗಲ್ ಮ್ಯಾಪ್ಸ್ ಹೊಸ ಆಯ್ಕೆಯೊಂದನ್ನು ಬಿಡುಗಡೆ ಮಾಡಿದೆ. ಕಾರು ಪಾರ್ಕ್ ಮಾಡಿದ ಸ್ಥಳ ಪತ್ತೆ ಹಚ್ಚಲು ಇದು ಸಹಾಯಕವಾಗಲಿದೆ.

By ಏಜೆನ್ಸಿ
|
Google Oneindia Kannada News

ನ್ಯೂಯಾರ್ಕ್, ಏಪ್ರಿಲ್ 26: ಕಾರನ್ನು ಪಾರ್ಕ್ ಮಾಡಿ ನಿಲ್ಲಿಸಿದ ಜಾಗ ಮರೆಯುವ ಅಭ್ಯಾಸ ನಿಮಗೇನಾದರು ಇದೆಯಾ? ಇದ್ದರೆ ನಿಮಗಾಗಿಯೇ ಗೂಗಲ್ ಮ್ಯಾಪ್ಸ್ ಹೊಸ ಆಯ್ಕೆಯೊಂದನ್ನು ಬಿಡುಗಡೆ ಮಾಡಿದೆ. ಕಾರು ಪಾರ್ಕ್ ಮಾಡಿದ ಸ್ಥಳ ಪತ್ತೆ ಹಚ್ಚಲು ಇದು ಸಹಾಯಕವಾಗಲಿದೆ.

ಮಾಡಬೇಕಾಗಿದ್ದೇನು?

ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಮ್ಯಾಪ್ಸ್ ನಲ್ಲಿ ಗೂಗಲ್ ಲೊಕೇಶನ್ ತೋರಿಸುವ ನೀಲಿ ಬಟನ್ ಒತ್ತಬೇಕು. ನಂತರ ಸೇವ್ ಯುವರ್ ಪಾರ್ಕಿಂಗ್ ಆಯ್ಕೆನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಮ್ಯಾಪ್ ಗೆ ಪಾರ್ಕಿಂಗ್ ಲೊಕೇಶನ್ ಸೇರ್ಪಡೆಯಾಗುತ್ತದೆ.[ಕನ್ನಡ ಭಾಷೆಯಲ್ಲೇ ಸಂದೇಶ ಕಳಿಸಲು ಜಿಬೋರ್ಡ್ ಬಳಸಿ]

Google Maps will now help locate your parked car

ಇದಾದ ನಂತರ ಮ್ಯಾಪ್ ಮೇಲೊಂದು ಲೇಬಲ್ ಕಾಣಿಸಿಕೊಳ್ಳುತ್ತದೆ. ಇದು ಕಾರು ಎಲ್ಲಿ ಪಾರ್ಕ್ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.

ಕಾರು ಪಾರ್ಕ್ ಮಾಡಿದ ಸ್ಥಳದ ಬಗ್ಗೆ ಹೆಚ್ಚಿನ ವಿವರಗಳು ಬೇಕಾದಲ್ಲಿ ಇದೇ ಲೇಬಲ್ ಓಪನ್ ಮಾಡಿಕೊಂಡು ಅಲ್ಲಿ ವಿವರಗಳನ್ನೂ ಬರೆಯಬಹುದಾಗಿದೆ. ಇನ್ನು ಪಾರ್ಕಿಂಗ್ ಸ್ಥಳದ ಮ್ಯಾಪ್ ನ ಚಿತ್ರ ತೆಗೆದು ಅದನ್ನು ಗೆಳೆಯರು, ನಿಮಗೆ ಬೇಕಾದವರಿಗೆ ಕಳುಹಿಸಬಹುದು ಎಂದು ಗೂಗಲ್ ಹೇಳಿದೆ.[ಬರಲಿದೆ ಬ್ರಾಡ್ ಬ್ಯಾಂಡ್ ಸೌಕರ್ಯವುಳ್ಳ ಜಿಯೊ ಡಿಟಿಎಚ್ ಬಾಕ್ಸ್]

ಇನ್ನು ಐಒಎಸ್ ಬಳಕೆದಾರರು ಇದೇ ರೀತಿಯಲ್ಲಿ ಲೊಕೇಶನ್ ಸೇವ್ ಮಾಡಿಕೊಳ್ಳಬಹುದು. ಆದರೆ ನೀಲಿ ಡಾಟ್ ಮುಟ್ಟಿದ ನಂತರ ನೇರವಾಗಿ 'ಸೆಟ್ ಆಸ್ ಪಾರ್ಕಿಂಗ್ ಲೊಕೇಶನ್' ಆಯ್ಕೆ ಮಾಡಿಕೊಳ್ಳಬೇಕು ಅಷ್ಟೆ.

ಇದಲ್ಲದೆ ಅಟೋಮ್ಯಾಟಿಕ್ ಆಗಿಯೂ ಪಾರ್ಕಿಂಗ್ ಲೊಕೇಶನ್ ಸೇವ್ ಮಾಡಬಹುದು. ಕಾರಿಗೆ ಯುಎಸ್'ಬಿ ಆಡಿಯೋ ಅಥವಾ ಬ್ಲೂಟೂತ್ ಮೂಲಕ ಮೊಬೈಲ್ ಸಂಪರ್ಕಿಸಿ ನಂತರ ತೆಗೆದು ಕಾರಿನಿಂದ ಇಳಿದು ಹೊರಟರೆ ತನ್ನಿಂತಾನೇ ಕಾರಿನ ಲೊಕೇಶನ್ ಅಟೋಮ್ಯಾಟಿಕ್ ಆಗಿ ಮ್ಯಾಪಿನಲ್ಲಿ ಸೇವ್ ಆಗಲಿದೆ ಎಂದು ಗೂಗಲ್ ತನ್ನು ಬ್ಲಾಗಿನಲ್ಲಿ ಹೇಳಿದೆ.

English summary
Google Maps has introduced a new feature that will help you remember where you parked your car in case you forgot. It will show the location of the car to the driver through map
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X