ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ಗವಾಗಲಿದೆ ಮೊಬೈಲ್, ಸ್ಥಿರ ದೂರವಾಣಿ ದರ

|
Google Oneindia Kannada News

ನವದೆಹಲಿ, ಫೆ. 24 : ಮೊಬೈಲ್ ಮತ್ತು ಸ್ಥಿರ ದೂರವಾಣಿ ಬಳಕೆದಾರರಿಗೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಶುಭ ಸುದ್ದಿಯೊಂದನ್ನು ನೀಡಿದೆ.

ದೂರ ಸಂಪರ್ಕ ಸೇವಾ ಸಂಸ್ಥೆಗಳು ಸ್ಥಿರ ದೂರವಾಣಿ ಕರೆಗಳ ವಿನಿಮಯ ಮತ್ತು ಇತರೆ ದೂರವಾಣಿ ಸಂಸ್ಥೆಗೆ ನೀಡ ಬೇಕಿದ್ದ ಶುಲ್ಕವನ್ನು ರದ್ದು ಮಾಡಲಾಗಿದೆ. ಹಾಗಾಗಿ ಮೊಬೈಲ್ ಮತ್ತು ಸ್ಥಿರ ದೂರವಾಣಿ ಕರೆಗಳು ಮತ್ತಷ್ಟು ಅಗ್ಗವಾಗಲಿವೆ.[ದೇಶದ 2,500 ನಗರದಲ್ಲಿ ವೈ ಫೈ, ಮೈಸೂರಿಗೂ ಸಿಗುತ್ತೆ]

phone

ಸ್ಥಿರ ದೂರವಾಣಿ ಸಂಪರ್ಕ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಿಸಲು ಟ್ರಾಯ್‌ ಈ ಕ್ರಮ ಕೈಗೊಂಡಿದೆ. ಸ್ಥಿರ ದೂರವಾಣಿಯ ಬಳಕೆದಾರರು ಇನ್ನೊಂದು ಸಂಸ್ಥೆಯ ಸ್ಥಿರ ದೂರವಾಣಿ ಅಥವಾ ಮೊಬೈಲ್‌ ಗೆ ಕರೆ ಮಾಡಿದರೆ, ಕರೆಯ ವಿನಿಮಯಕ್ಕೆ 20 ಪೈಸೆ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಇದೀಗ ಅದನ್ನು ರದ್ದುಪಡಿಸಲಾಗಿದೆ.

ಮೊಬೈಲ್‌ ಫೋನ್‌ ನಿಂದ ಬೇರೊಂದು ಸೇವಾ ಸಂಸ್ಥೆಯ ಚಂದಾದಾರಿಗೆ ಕರೆ ಮಾಡಿದಾಗ ಇಂಟರ್‌ಕನೆಕ್ಷನ್‌ ಯೂಸೇಜ್‌ ಚಾರ್ಜ್‌ (ಅಂತರಸಂಪರ್ಕ ಸೇವೆ ಬಳಕೆ ಶುಲ್ಕ) ಎಂದು 20 ಪೈಸೆ ಸಂಗ್ರಹಿಸಲಾಗುತ್ತಿತ್ತು. ಇಲ್ಲಿಯೂ ಶೇ. 30ರಷ್ಟು ಕಡಿತ ಪ್ರಕಟಿಸಿರುವ ಟ್ರಾಯ್‌, ಶುಲ್ಕವನ್ನು 6 ಪೈಸೆ ಇಳಿಕೆ ಮಾಡಿದೆ.[ತರಂಗಾಂತರ ಹರಾಜಿಂದ 1 ಲಕ್ಷ ಕೋಟಿ ಆದಾಯ ನಿರೀಕ್ಷೆ]

ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಮತ್ತು ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ ನೀಡಲು ಆಗುವಂತೆ ಮಾಡಬೇಕಿದೆ. ಹೂಡಿಕೆದಾರರನ್ನು ಉತ್ತೇಜಿಸುವ ಸಲುವಾಗಿಯೇ ಕರೆ ವಿನಿಮಯ ಶುಲ್ಕ ರದ್ದು ಮತ್ತು ಸಂಪರ್ಕ ಸೇವೆ ಬಳಕೆ ಶುಲ್ಕ ಇಳಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಾಯ್‌ ವಿವರಿಸಿದೆ.

ಶುಲ್ಕ ಕಡಿತ ಬಿಎಸ್ ಎನ್ ಎಲ್ ಮತ್ತು ಎಂಟಿ ಎನ್ ಎಲ್ ಗ್ರಾಹಕರಿಗೆ ವಿಶೇಷ ಲಾಭ ತಂದುಕೊಡಲಿದೆ. ಅಲ್ಲದೇ ಇಷ್ಟು ದಿನ ನೀಡುತ್ತಿದ್ದ ಬಿಲ್ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಟ್ರಾಯ್ ವಕ್ತಾರ ಅರವಿಂದ್ ಕುಮಾರ್ ತಿಳಿಸಿದ್ದಾರೆ.

English summary
In a move which could reduce call rates of mobile and landline, the Telecom Regulatory Authority of India (TRAI) on Monday slashed various interconnection charges that one operator pays to the other for using their network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X