ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರದ ಬೆಲೆ ಐದು ವರ್ಷಗಳ ಹಿಂದಿನ ದರಕ್ಕೆ ಕುಸಿತ?

By Mahesh
|
Google Oneindia Kannada News

ಮುಂಬೈ, ಜುಲೈ 31: ಚಿನ್ನದ ಖರೀದಿದಾರರಿಗೆ ಶುಭ ಕಾಲ ಇನ್ನೇನು ಬರಲಿದೆ. ಕಳೆದ ಐದು ವರ್ಷಗಳ ಹಿಂದೆ ಇದ್ದ ದರಕ್ಕೆ ಚಿನ್ನ ಕುಸಿಯಲಿದೆ ಎಂದು ಮಾರುಕಟ್ಟೆ ತಜ್ಞರಾದ ಇಂಡಿಯಾ ರೇಟಿಂಗ್ ಅಂಡ್ ರಿಸರ್ಚ್ (Ind-Ra) ಹೇಳಿದ್ದಾರೆ.

ಮೂರ್ನಾಲ್ಕು ದಿನಗಳ ಹಿಂದೆ ಪ್ರತಿ 10 ಗ್ರಾಂ ಚಿನ್ನ 23 ಸಾವಿರ ರು. ಗೆ ತಲುಪುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರೆ, ಈಗ ಪ್ರತಿ 10 ಗ್ರಾಂ ಚಿನ್ನದ ಬೆಲೆ 20,500 ರುಗೆ ಕುಸಿಯಲಿದೆ ಎಂದಿದ್ದಾರೆ.

ಚಿನ್ನಾಭರಣ ವ್ಯಾಪಾರಿಗಳಿಂದ ತಗ್ಗಿದ ಬೇಡಿಕೆಯ ನಡುವೆ ದುರ್ಬಲ ಜಾಗತಿಕ ಪ್ರವೃತ್ತಿಯಿಂದಾಗಿ ಸತತ ಮೂರನೇ ದಿನವೂ ಚಿನ್ನದ ಬೆಲೆಗಳು ಕುಸಿದಿವೆ. ಅಮೆರಿಕದ ಫೆಡರಲ್‌ ಬ್ಯಾಂಕ್ ನ ಬಡ್ಡಿದರದ ನಿರ್ಧಾರ ಚಿನ್ನದ ದರ ಇಳಿಕೆ ಮೇಲೆ ಗಣನೀಯ ಪರಿಣಾಮ ಬೀರಲಿದೆ. [ಭಾರತದಲ್ಲಿ ಚಿನ್ನಾಭರಣ ಖರೀದಿಗೆ 8 ಸೂತ್ರ]

ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡಿದರೆ ಚಿನ್ನದ ದರ ಪ್ರತಿ 10 ಗ್ರಾಂಗೆ 20,500 ರು ರಿಂದ 24,000 ರು ಗೆ ಇಳಿಯುವ ಸಾಧ್ಯತೆಯಿದೆ. ಜಾಗತಿಕವಾಗಿ ಪ್ರತಿ ಔನ್ಸ್ ಗೆ 900 ರಿಂದ 1,050 ಡಾಲರ್ ನಂತೆ ಕುಸಿಯುವ ನಿರೀಕ್ಷೆಯಿದೆ. ಇಡೀ ವಿಶ್ವದ ಚಿನ್ನದ ಬೇಡಿಕೆಗೆ ಹೋಲಿಸಿದರೆ ಚೀನಾ ಹಾಗೂ ಭಾರತವೇ ಅರ್ಧದಷ್ಟು ಚಿನ್ನದ ಬಳಕೆ, ಬೇಡಿಕೆ ಹೊಂದಿದೆ.

Gold

ದೆಹಲಿಯಲ್ಲಿ ಚಿನ್ನಬೆಳ್ಳಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಪ್ರತೀ 10 ಗ್ರಾಮ್‌ಗೆ ಇನ್ನೂ 200 ರು ನಷ್ಟು.ಇಳಿಕೆ ಕಂಡಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಕಡಿಮೆ ಖರೀದಿ ಹೆಚ್ಚಾಗುತಿಲ್ಲ. ಬೆಳ್ಳಿಯ ಬೆಲೆ ಪ್ರತೀ ಕೆಜಿಗೆ 150ರೂ.ಇಳಿದು 34,050 ರು.ನಷ್ಟಿದೆ. [ನಿಮ್ಮ ನಗರದ ಚಿನ್ನದ ದರ ಒಂದೇ ಕ್ಲಿಕ್ ನಲ್ಲಿ]

ಅಮೆರಿಕದ ಫೆಡರಲ್ ರಿಸರ್ವ್ 2006ರಿಂದೀಚಿಗೆ ಇದೇ ಮೊದಲ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಲು ಸಜ್ಜಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಕಳೆದೆರಡು ವರ್ಷಗಳಲ್ಲಿನ ಅತೀ ದೊಡ್ಡ ಮಾಸಿಕ ಕುಸಿತದತ್ತ ಧಾವಿಸುತ್ತಿದೆ, ಹೀಗಾಗಿ ಇಲ್ಲಿ ಹಳದಿ ಲೋಹದ ಬೆಲೆಗಳ ಮೇಲೆ ಒತ್ತಡಕ್ಕೆ ಕಾರಣವಾಗಿದೆ.(ಪಿಟಿಐ)

English summary
Gold prices in the country may even dip to Rs 20,500 per ten grams, a level last seen about 5 years ago, in case of a rate hike by US Federal Reserve later this year, according to India Ratings and Research (Ind-Ra).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X