ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ವೇಳೆಗೆ ಚಿನ್ನದ ದರ ಇನ್ನಷ್ಟು ಕುಸಿತ!

By Mahesh
|
Google Oneindia Kannada News

ಮುಂಬೈ, ನ.3: ಭಾರತೀಯ ರುಪಾಯಿಯ ಬಲ ಸಿಕ್ಕರೆ ಚಿನ್ನದ ದರದಲ್ಲಿ ಇನ್ನಷ್ಟು ಇಳಿಕೆಯಾಗಲಿದೆ. ಡಿಸೆಂಬರ್ ತಿಂಗಳ ಆರಂಭದಲ್ಲೇ ಪ್ರತಿ 10ಗ್ರಾಂಗೆ 24,500 ರು ಗೆ ಇಳಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಚಿನಿವಾರ ಪೇಟೆ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಪೂರಕವಾಗಿ ಸೋಮವಾರ ಕೂಡಾ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ.

ಜಾಗತಿಕ ಮಾರುಕಟ್ಟೆಯಲಿ ಸ್ಪಾಟ್ ಗೋಲ್ಡ್ ಶೇ 0.7ರಷ್ಟು ಇಳಿಕೆಯಾಗಿ ಪ್ರತಿ ಔನ್ಸಿಗೆ 1,165.20 ಡಾಲರ್ ಗೆ ಇಳಿದಿದೆ. ಸತತ ನಾಲ್ಕನೇ ಸೆಷನ್ ನಲ್ಲಿ ಇಳಿಕೆ ಕಂಡು ಬಂದಿದ್ದು, ಜುಲೈ 2010ರ ನಂತರ ಇದೇ ಅತ್ಯಂತ ಇಳಿಕೆ ಪ್ರಮಾಣ ಎನ್ನಲಾಗಿದೆ.

ರುಪಾಯಿ ಬಲಗೊಳ್ಳುತ್ತಿದ್ದಂತೆ ಚಿನ್ನದ ದರದಲ್ಲಿ ಏರಿಳಿತ ಕಂಡುಬರಲಿದೆ ಆದರೆ, ಡಿಸೆಂಬರ್ ಅಂತ್ಯದೊಳಗೆ ಪ್ರತಿ 10 ಗ್ರಾಂಗೆ 24,500 ರು ಗೆ ಕುಸಿಯಲಿದೆ ಎಂದು ಮೋತಿಲಾಲ್ ಓಸ್ವಾಲ್ ಅಸೋಸಿಯೇಟ್ಸ್ ಉಪಾಧ್ಯಕ್ಷ ಕಿಶೋರ್ ನಾರ್ನೆ ಹೇಳಿದ್ದಾರೆ. [ತಿಮ್ಮಪ್ಪ 5 ಸಾವಿರ ಕೆಜಿ ಚಿನ್ನದೊಡೆಯ]

'Gold may decline to Rs 24,500 by December if rupee stays constant'

ಶನಿವಾರದಂದು ಎಂಸಿಎಕ್ಸ್ ನಲ್ಲಿ 10 ಗ್ರಾಂ ಚಿನ್ನದ ಬಲೆ 26,143 ರು ನಷ್ಟಿತ್ತು, ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸಿಗೆ 1,173.30 ಯುಎಸ್ ಡಾಲರ್ ನಷ್ಟಿತ್ತು. ಯುಎಸ್ ಆರ್ಥಿಕ ಪರಿಸ್ಥಿತಿ ಸುಧಾರಣೆಯೂ ಇದಕ್ಕೆ ಕಾರಣ ಎನ್ನಬಹುದು. ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ 24,750 ರು(22 karat) ಹಾಗೂ 26,490 ರು(24 karat) ನಷ್ಟಿದೆ.[ಚಿನ್ನದ ಅಂಗಿ ತೊಟ್ಟ ಉದ್ಯಮಿ ಪಂಕಜ]

ವರ್ಷಾಂತ್ಯಕ್ಕೆ ಜಾಗತಿಕವಾಗಿ ಪ್ರತಿ ಔನ್ಸಿಗೆ 1,080-1120 ಯುಎಸ್ ಡಾಲರ್ ಗೆ ಇಳಿಯಲಿದೆ. ಡಾಲರ್ ಎದುರು ರುಪಾಯಿ ಮೌಲ್ಯ 60-61 ರುನಂತೆ ಮುಂದುವರೆದರೆ ಪ್ರತಿ 10 ಗ್ರಾಂ ಚಿನ್ನದ ದರ 24,500 ರು ನಿಂದ 25,500 ರು ಆಗಲಿದೆ ಎಂದು ಮಾರುಕಟ್ಟೆ ತಜ್ಞ ಜ್ಞಾನಶೇಖರ್ ತ್ಯಾಗರಾಜನ್ ಹೇಳಿದ್ದಾರೆ.(ಪಿಟಿಐ)

English summary
Gold prices are likely to decline further to around Rs 24,500 per 10 grams by Dec 2014 if the rupee continues to rule at the current level, according to analysts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X