ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಚಿನ್ನಾಭರಣಗಳಿಗೂ ಹಾಲ್ ಮಾರ್ಕ್ ಕಡ್ಡಾಯ

By Madhusoodhan
|
Google Oneindia Kannada News

ನವದೆಹಲಿ, ಬೆಂಗಳೂರು, ಜೂನ್. 14: ಇನ್ನು ಮುಂದೆ ಚಿನ್ನದ ಶುದ್ಧತೆ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ಎಲ್ಲ ಚಿನ್ನಾಭರಣಗಳ ಮೇಲೂ ಹಾಲ್ ಮಾರ್ಕ್ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಗ್ರಾಹಕರ ಹಿತ ರಕ್ಷಿಸಲು ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸಬೇಕು ಎಂದು ಭಾರತದ ಮಹಾಲೇಖಪಾಲಕರು(CAG) ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಪುರಸ್ಕಾರ ಸಿಕ್ಕಿದೆ. [ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

gold

ಒಮ್ಮೆ ಹಾಲ್ ಮಾರ್ಕ್ ಕಡ್ಡಾಯ ಮಾಡಿದ ನಂತರ ದೇಶದ ಎಲ್ಲ ಆಭರಣ ಮಳಿಗೆಗಳು ಅನುಸರಿಸಬೇಕಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಚಿನ್ನಾಭರಣದ ಗುಣಮಟ್ಟ ಕಾಯ್ದುಕೊಳ್ಳುವುದರೊಂದಿಗೆ ಗ್ರಾಹಕರ ಹಿತ ಕಾಯುವುದು ಇದರ ಮುಖ್ಯ ಉದ್ದೇಶ. ನನ್ನ ತಾಯಿಗೆ ಆಭರಣ ಖರೀದಿ ಮಾಡಲು ಹೋದಾಗ ನಾನೇ ದಾರಿ ತಪ್ಪಿದ್ದೆ ಎಂದು ಕೇಂದ್ರ ಸಚಿವ ಪಾಸ್ವಾನ್ ಅನುಭವ ಹಂಚಿಕೊಂಡಿದ್ದಾರೆ.[ಚಿನ್ನದ ಮೇಲಿನ ಹೂಡಿಕೆ: ಬಜೆಟ್ ಪರಿಣಾಮ]

ಸ್ಟಾಂಡರ್ಸ್ ಅಥಾರಿಟಿ ಹೇಳುವಂತೆ ಭಾರತದಲ್ಲಿ ಸುಮಾರು 13 ಸಾವಿರ ಅನುಮತಿ ಪಡೆದ ಆಭರಣ ತಯಾರಿಕಾ ಸಂಸ್ಥೆಗಳಿವೆ. ಇವುಗಳಲ್ಲಿ ಯಾರೇ ಹಾಲ್ ಮಾರ್ಕ್ ನಿಯಮ ಮುರಿದರೆ ದಂಡ ವಿಧಿಸಲಾಗುತ್ತದೆ ಎಂದು ಪಾಸ್ವಾನ್ ತಿಳಿಸಿದ್ದಾರೆ.[ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]

ಅಧಿಕಾರಿಗಳ ತಂಡ ರಚನೆ ಮಾಡಿ ಹಾಲ್ ಮಾರ್ಕ್ ಪರಿಶೀಲನೆಯನ್ನು ನಿರಂತರವಾಗಿ ನಡೆಸಲಾಗುತ್ತದೆ. ಅನುಮಾನಗಳು ಕಂಡುಬಂದರೆ ದಾಳಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ನಿಮ್ಮ ನಗರದಲ್ಲಿ ಚಿನ್ನದ ದರ ಎಷ್ಟಿದೆ

ದೇಶದಲ್ಲಿ ಕೇವಲ 400 ಕೇಂದ್ರಗಳು ಹಾಲ್ ಮಾರ್ಕ್ ನೀಡಿಕೆ ಕೆಲಸ ಮಾಡುತ್ತಿವೆ. ಈ ಸಂಖ್ಯೆಯನ್ನು ಹೆಚ್ಚು ಮಾಡಬೇಕಾದ ಅಗತ್ಯ ಇದೆ ಎಂದು ಪಾಸ್ವಾನ್ ತಿಳಿಸಿದ್ದಾರೆ.

ಗ್ರಾಹಕ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿರುವ ಭಾರತೀಯ ಗುಣಮಟ್ಟ ದಳ (ಬಿಐಎಸ್)ಗೆ ಹಾಲ್‌ಮಾರ್ಕ ಅಧಿಕೃತವಾಗಿ ಹಾಲ್‌ಮಾರ್ಕ್ ನೀಡುವ ಅಧಿಕಾರವಿದೆ.

English summary
The Central government is in the process of making the purity stamp, popularly known as hallmarking, must for all the jewellery shops in the country. Union Consumer Affairs Minister Ram Vilas Paswan said that once it becomes mandatory, jewellers will be made accountable and jewellery shops will have to sell hallmarked, certified gold jewellery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X