ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಬಲ್ ಟಿವಿ ನೋಡಲು ಹೆಚ್ಚು ಹಣ ಪಾವತಿಸಬೇಕು

|
Google Oneindia Kannada News

ಬೆಂಗಳೂರು, ನ.18 : ಯಾಕೋ ಸ್ಟಾರ್ ಟಿವಿ ಚಾನೆಲ್‌ಗಳು ಬರುತ್ತಿಲ್ಲ ಎಂದು ಬೆಂಗಳೂರಿನ ಜನರು ಎರಡು ದಿನಗಳಿಂದ ದೂರುತ್ತಿದ್ದಾರೆ. ನಗರದ ಬಹುತೇಕ ಭಾಗದಲ್ಲಿ ಸ್ಟಾರ್ ಸ್ಪೋರ್ಟ್ಸ್ ಮತ್ತಿತರ ಚಾನೆಲ್‌ಗಳ ಪ್ರಸಾರ ಸ್ಥಗಿತಗೊಂಡಿದ್ದು, ಈ ಚಾನೆಲ್‌ಗಳನ್ನು ನೋಡಬೇಕಾದರೆ ನೀವು ಹೆಚ್ಚಿನ ಹಣ ಪಾವತಿ ಮಾಡಬೇಕಾಗಿದೆ.

ಹೆಚ್ಚು ಮನರಂಜನಾ ಚಾನೆಲ್‌ಗಳನ್ನು ಹೊಂದಿರುವ ಮತ್ತು ಕ್ರಿಕೆಟ್ ಸೇರಿದಂತೆ ಪ್ರಮುಖ ಕ್ರೀಡೆಗಳನ್ನು ಪ್ರಸಾರ ಮಾಡುವ ಸ್ಟಾರ್ ಗ್ರೂಪ್, ಅ ಲಾ ಕಾರ್ಟೆ ಪದ್ಧತಿ ಜಾರಿಗೊಳಿಸಿರುವುದರಿಂದ ಬೆಂಗಳೂರಿನ ಹಲವು ಭಾಗದಲ್ಲಿ ಸ್ಟಾರ್ ಸ್ಪೋರ್ಟ್ಸ್ ಮುಂತಾದ ಚಾನೆಲ್‌ ಪ್ರಸಾರ ಸ್ಥಗಿತಗೊಂಡಿದೆ.

cable tv

ಇಷ್ಟು ದಿನ ಸ್ಟಾರ್ ಗ್ರೂಪ್ ಕೇಬಲ್ ಆಪರೇಟರ್‌ಗಳಿಗೆ ಚಾನೆಲ್‌ಗಳನ್ನು ನೀಡುತ್ತಿತ್ತು. ಅದನ್ನು ಅವರು ಗ್ರಾಹಕರಿಗೆ ನೀಡಿ ಹಣ ಪಡೆಯುತ್ತಿದ್ದರು. ಸದ್ಯ ಗ್ರೂಪ್ ನೇರವಾಗಿ ಚಾನೆಲ್‌ಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಆದ್ದರಿಂದ ನೀವು ಸ್ಟಾರ್‌ ಗ್ರೂಪ್‌ನ ಯಾವುದೇ ಚಾನೆಲ್ ಪಡೆಯಬೇಕು ಎಂದರೆ ಹೆಚ್ಚಿನ ಹಣ ಪಾವತಿ ಮಾಡಬೇಕು.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಭವಿಷ್ಯದಲ್ಲಿ ಎಲ್ಲಾ ಚಾನೆಲ್‌ಗಳನ್ನು ಅ ಲಾ ಕಾರ್ಟೆ ಮಾದರಿಯಲ್ಲಿಯೇ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದರ ಅನ್ವಯ ಗ್ರಾಹಕರು ತಮಗೆ ಬೇಕಾದ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿ ಮಾಡಬಹುದಾಗಿದೆ. [ಕೇಬಲ್ ನಲ್ಲಿ 21 ಡಿಡಿ ಚಾನೆಲ್ ಪ್ರಸಾರ ಕಡ್ಡಾಯ]

ಅತ್ತ ಸ್ಟಾರ್ ಗ್ರೂಪ್‌ ಅ ಲಾ ಕಾರ್ಟೆ ಜಾರಿಗೆ ತರಲು ಹೊರಟಿರುವುದರಿಂದ ದರ ಪಟ್ಟಿ ಅಂತಿಮಗೊಳಿಸುವ ಬಗ್ಗೆಯೂ ಮಲ್ಟಿ ಸಿಸ್ಟಂ ಆಪರೇಟರ್ (ಎಂಎಸ್‌ಒ) ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಮಾತುಕತೆ ಆರಂಭವಾಗಿದೆ. ಜನವರಿಯಲ್ಲಿ ನೂತನ ದರಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದ್ದು, ದರ ಹೆಚ್ಚು ಕಡಿಮೆಯಾಗಬಹುದಾಗಿದೆ.

ಏನಿದು ಅ ಲಾ ಕಾರ್ಟೆ : ಆಯ್ದ ಚಾನೆಲ್‌ಗಳ ಸೇವೆಯನ್ನು ಗ್ರಾಹಕರಿಗೆ ನೀಡುವ ವ್ಯವಸ್ಥೆಯನ್ನು ಅ ಲಾ ಕಾರ್ಟೆ ಎನ್ನುತ್ತಾರೆ. ಇದರ ಅನ್ವಯ ಒಬ್ಬ ಬ್ರಾಡ್‌ಕಾಸ್ಟರ್ ತನ್ನ ಬಳಿ ಇರುವ ಚಾನೆಲ್‌ಗಳನ್ನು ಒಂದು ಗುಚ್ಛವನ್ನಾಗಿ ಅಥವಾ ಒಂದೊಂದೇ ಚಾನೆಲ್‌ಗಳನ್ನು ಬಿಡಿ ಬಿಡಿಯಾಗಿ ಗ್ರಾಹಕರಿಗೆ ಒದಗಿಸಲು ಸಾಧ್ಯವಿದೆ.

English summary
Watching your favorite TV shows could cost you more, as channels are moving to à la crate mode and will charge on the basis of the number of channels you would want to watch. Star India Pvt. Ltd. introduced this mode on November 6 in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X