ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಎನ್ನೆಲ್ ಗ್ರಾಹಕರಿಗೆ ಉಚಿತ ರೋಮಿಂಗ್ ಕೊಡುಗೆ

By Mahesh
|
Google Oneindia Kannada News

ನವದೆಹಲಿ, ಜೂ.2 : ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ (ಬಿಎಸ್‌ಎನ್‌ಎಲ್) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಜೂನ್ 15 ರಿಂದ ಅಂತಾರಾಜ್ಯ ಕರೆ ಸೇವೆಗಳ ಶುಲ್ಕವನ್ನು (ರೋಮಿಂಗ್‌ಫ್ರೀ) ತೆಗೆದು ಹಾಕಲಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ಹೇಳಿದ್ದಾರೆ.

ಜೂನ್ 15 ರಿಂದ ದೇಶಾದ್ಯಂತ ಯಾವುದೇ ಮೂಲೆಗೆ ಕರೆ ಮಾಡಿದರೂ ಅದಕ್ಕೆ ರೋಮಿಂಗ್ ಚಾರ್ಜ್ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಬಿಎಸ್‌ಎನ್‌ಎಲ್‌ನ ಎಲ್ಲಾ ಸ್ಥಿರ ದೂರವಾಣಿ (ಲ್ಯಾಂಡ್‌ಲೈನ್) ಕರೆಗಳನ್ನು ರಾತ್ರಿ ವೇಳೆ ಉಚಿತವಾಗಿ ಮಾಡಬಹುದಾದ ಹೊಸ ಕೊಡುಗೆ ಯೊಂದನ್ನು ಕಳೆದ ತಿಂಗಳು ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ನೀಡಿತ್ತು.

From June 15, national roaming is free in BSNL

ಲ್ಯಾಂಡ್‌ಲೈನ್ ದೂರವಾಣಿ ಯಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಯಾವುದೇ ಮೊಬೈಲ್, ಸ್ಥಿರ ದೂರವಾಣಿ ಅಥವಾ ಇಂಟರ್‌ನೆಟ್ ಬಳಕೆಗೆ ಯಾವುದೇ ರೀತಿಯ ಶುಲ್ಕ ರಹಿತ ಸೇವೆ ನೀಡುವ ಯೋಜನೆಯನ್ನು ಬಿಎಸ್‌ಎನ್‌ಎಲ್ ಮೇ ತಿಂಗಳಲ್ಲಿ ಗ್ರಾಹಕರಿಗೆ ಒದಗಿಸಿತ್ತು.

ಬಿಎಸ್‌ಎನ್‌ಎಲ್ ಬೇಡಿಕೆಯನ್ನು ಹೆಚ್ಚಿಸಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಈ ಯೋಜನೆ ಮೇ 1 ರಿಂದ ಜಾರಿಗೆ ಬಂದಿತ್ತು.

ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಏರ್‌ಟೆಲ್ ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಬಿಎಸ್‌ಎನ್‌ಎಲ್ ಸಂಸ್ಥೆ ಗಣನೀಯವಾಗಿ ಕುಸಿದಿದೆ. ಬಿಎಸ್ ಎನ್ ಎಲ್ ನ ಮೊಬೈಲ್ ಚಂದದಾರರ ಸಂಖ್ಯೆ ಮಾರ್ಚ್ ಅಂತ್ಯಕ್ಕೆ 7.72 ಕೋಟಿ ದಾಟಿದೆ ಎಂದು ಬಿಎಸ್ ಎನ್ ಎಲ್ ಸಿಎಂಡಿ ಅನುಪಮ್ ಶ್ರೀವತ್ಸ ಹೇಳಿದ್ದಾರೆ. (ಪಿಟಿಐ)

English summary
State-owned BSNL will offer its subscribers free incoming calls on roaming from June 15, Telecom Minister Ravi Shankar Prasad said on Tuesday, even as it looks to compete more aggressively with private telecom operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X