ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬೇ ಇಂಡಿಯಾ ಖರೀದಿಸಿದ ಆನ್ಲೈನ್ ರೀಟೈಲರ್ ಫ್ಲಿಪ್ ಕಾರ್ಟ್?

ಸರಿ ಸುಮಾರು 2 ಬಿಲಿಯನ್ ಡಾಲರ್ ಮೊತ್ತಕ್ಕೆ ಇಬೇ ಇಂಡಿಯಾವನ್ನು ಆನ್ ಲೈನ್ ರೀಟೈಲರ್ ಫ್ಲಿಪ್ ಕಾರ್ಟ್ ಸಂಸ್ಥೆ ಖರೀದಿಸಲು ಮುಂದಾಗಿದೆ ಎಂಬ ಸುದ್ದಿ ಬಹಿರಂಗವಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 24: ಭಾರತದ ಅತಿ ದೊಡ್ಡ ಆನ್ ಲೈನ್ ರೀಟೇಲರ್ ಫ್ಲಿಪ್ ಕಾರ್ಟ್ ಮತ್ತೊಂದು ಭರ್ಜರಿ ಡೀಲ್ ಗೆ ಕೈ ಹಾಕಿದೆ. ಇಬೇ ಇಂಡಿಯಾ ಸಂಸ್ಥೆಯನ್ನು 2 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸುತ್ತಿದೆ ಎಂಬ ಸುದ್ದಿಯನ್ನು ಫಾಕ್ಟರ್ ಡೈಲಿ ವರದಿ ಮಾಡಿದೆ.

2004ರದಲ್ಲಿ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಇಬೇ(eBay), 2013ರಲ್ಲಿ ಸ್ನಾಪ್ ಡೀಲ್ ನಲ್ಲೂ ಬಂಡವಾಳ ಹೂಡಿಕೆ ಮಾಡಿತ್ತು. ಇತ್ತೀಚೆಗೆ ಚೀನಾದ ಟೆನ್ಸೆಂಟ್ ಹಾಗೂ ಮೈಕ್ರೋಸಾಫ್ಟ್ ಜತೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿರುವ ಫ್ಲಿಪ್ ಕಾರ್ಟ್ ಈಗ ಅಮೆಜಾನ್ ಹಾಗೂ ಚೀನಾದ ದೈತ್ಯ ಅಲಿಬಾಬಾ ಜತೆ ನೇರ ಪೈಪೋಟೆ ಇಳಿದಿದೆ.

Flipkart to reportedly acquire eBay India

ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಕ್ವಿಕರ್, ಓಎಲ್ಎಕ್ಸ್, ಸ್ನಾಪ್ ಡೀಲ್, ಪೇಟಿಯಂ, ಶಾಪ್ ಕ್ಲ್ಯೂಸ್ ಸದ್ಯಕ್ಕೆ ತಕ್ಕಮಟ್ಟಿಗೆ ಸದ್ದು ಮಾಡುತ್ತಿವೆ.ಆದರೆ, ಸದ್ಯ ಮಾರುಕಟ್ಟೆಯಲ್ಲಿ ದೊಡ್ಡ ಆಟಗಾರರಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಡುವೆ ಪೈಪೋಟಿ ತೀವ್ರವಾಗಿದೆ.
English summary
India’s largest online retailer Flipkart is planning to acquire eBay India’s operations as part of its latest funding round of $2billion, according to a report by Factordaily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X