ಅಮೆಜಾನ್ ಸವಾಲು ಎದುರಿಸಲು ಫ್ಲಿಪ್ ಕಾರ್ಟ್ ಮಹಾ ಮೈತ್ರಿ

Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಚೀನಾದ ದೈತ್ಯ ಆನ್ ಲೈನ್ ಕಂಪನಿಯಾದ ಟೆನ್ಸೆಂಟ್ ಜತೆಗೆ ಕೈ ಜೋಡಿಸಿರುವ ಫ್ಲಿಪ್ ಕಾರ್ಟ್, ಆನ್ ಲೈನ್ ಮಾರುಕಟ್ಟೆಯಲ್ಲಿ ತನಗೆ ಪ್ರಬಲ ಪೈಪೋಟಿ ನೀಡುತ್ತಿರುವ ಅಮೆಜಾನ್ ಕಂಪನಿ ವಿರುದ್ಧ ಸಡ್ಡು ಹೊಡೆದಿದೆ.

ಟೆನ್ಸೆಂಟ್, ಫ್ಲಿಪ್ ಕಾರ್ಟ್, ಇ ಬೇ ಸಂಸ್ಥೆಗಳೂ ಒಟ್ಟಿಗೆ ಕೈ ಜೋಡಿಸಿದ್ದು, ಒಟ್ಟಾರೆಯಾಗಿ ಇದು 9 ಸಾವಿರ ಕೋಟಿ ರು.ಗಳ ದೊಡ್ಡ ಹೂಡಿಕೆಯಾಗಲಿದೆ.

ಈ 9 ಸಾವಿರ ಕೋಟಿ ಹೂಡಿಕೆಯಲ್ಲಿ ಸಿಂಹಪಾಲು ಟೆನ್ಸೆಂಟ್ ಕಂಪನಿಯದ್ದೇ ಆಗಿದೆ. ಈ ಕಂಪನಿಯೇ ಸುಮಾರು 4500 ಕೋಟಿ ಹೂಡಿಕೆ ಮಾಡುತ್ತಿದೆ.

Flipkart raises $1.4 billion from Tencent, eBay and Microsoft, acquires eBay India

ಇ ಬೇ ಸಂಸ್ಥೆಯು 3,200 ಕೋಟಿ ರು. ಹೂಡಿಕೆ ಮಾಡುತ್ತಿದೆ. ಇನ್ನು, ಫ್ಲಿಪ್ ಕಾರ್ಟ್ ಸಂಸ್ಥೆಯಿಂದ ಸುಮಾರು 3,200 ಕೋಟಿ ರು. ಹೂಡಿಕೆಯಾಗಲಿದೆ.

ಈ ಮಹಾ ಮೈತ್ರಿಯ ಜತೆಗೆ ಫ್ಲಿಪ್ ಕಾರ್ಟ್ ಸಂಸ್ಥೆಯು ಇ ಬೇ ಸಂಸ್ಥೆಯ 1,290 ಕೋಟಿ ಮೌಲ್ಯದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಇ ಬೇ ಕಂಪನಿಯ ಮೇಲೆ ಪ್ರಭುತ್ವ ಸಾಧಿಸಿದೆ.

ಕೆಲ ದಿನಗಳ ಹಿಂದೆ, ಮಯಾಂತ್ರಾ ಎಂಬ ಆನ್ ಲೈನ್ ಮಾರಾಟ ಸಂಸ್ಥೆಯನ್ನು ಕೊಂಡಿದ್ದ ಫ್ಲಿಪ್ ಕಾರ್ಟ್, ಈಗ ಹೊಸ ತಂತ್ರಗಾರಿಕೆಯೊಂದನ್ನು ಅಳವಡಿಸಿಕೊಂಡಿದೆ.

English summary
Flipkart announced its biggest funding round and said it is buying rival eBay’s Indian operations, marking a flurry of moves by the country’s largest online retailer as it builds a ‘mahagathbandhan’ of global tech giants to counter Amazon.
Please Wait while comments are loading...