ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.1ರಿಂದಲೇ ಎಸ್ ಬಿಐ ಜತೆ 5 ಸಹವರ್ತಿ ಬ್ಯಾಂಕ್‌ ಗಳ ವಿಲೀನ

|
Google Oneindia Kannada News

ನವದೆಹಲಿ, ಫೆಬ್ರವರಿ. 24 : ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಸೇರಿದಂತೆ 5 ಬ್ಯಾಂಕ್‌ ಗಳು ಭಾರತೀಯ ಸ್ಟೇಟ್‌ ಬ್ಯಾಂಕ್‌ ಜತೆ 2017, ಏಪ್ರಿಲ್ 1ರಂದು ವಿಲೀನ ಗೊಳ್ಳಲಿವೆ.

ಇದರಿಂದ ಜಾಗತಿಕ ಮಟ್ಟದ 50 ದೊಡ್ಡ ಬ್ಯಾಂಕ್‌ ಗಳ ಸಾಲಿಗೆ ಎಸ್ ಬಿಐ ಸೇರಲಿದೆ. ಫೆಬ್ರವರಿ 15ರಂದು ನಡೆದಿದ್ದ ಕೇಂದ್ರ ಸಂಪುಟ ಸಭೆ ಐದು ಬ್ಯಾಂಕ್‌ಗಳ ವಿಲೀನದ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು.[ಎಸ್ ಬಿಐ ಜೊತೆ 5 ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರದ ಹಸಿರು ನಿಶಾನೆ]

Five associate banks will merge with SBI from April 1

ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್ ಆಂಡ್ ಜೈಪುರ್‌ (ಎಸ್‌ಬಿಬಿಜೆ), ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು (ಎಸ್ ಬಿಎಂ), ಸ್ಟೇಟ್‌ ಬ್ಯಾಂಕ್‌ ಆಫ್ ಟ್ರಾವಂಕೂರ್ (ಎಸ್‌ಬಿಟಿ), ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌ (ಎಸ್ ಬಿಎಚ್), ಸ್ಟೇಟ್‌ ಬ್ಯಾಂಕ್‌ ಆಫ್ ಪಾಟಿಯಾಲನ(ಎಸ್‌ಬಿಪಿ) ಆಸ್ತಿ ಏಪ್ರಿಲ್ 1ರಿಂದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಗೆ ವರ್ಗಾವಣೆಯಾಗಲಿದೆ.

ಐದು ಸಹವರ್ತಿ ಬ್ಯಾಂಕ್‌ ಗಳ ಪೈಕಿ ಎಸ್‌ಬಿಬಿಜೆ, ಎಸ್‌ಬಿಎಂ ಮತ್ತು ಎಸ್‌ಬಿಟಿ - ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿವೆ. ವಿಲೀನದಿಂದಾಗಿ ಈ ಬ್ಯಾಂಕ್‌ ಗಳ ಷೇರು ವಹಿವಾಟು ಸ್ಥಗಿತಗೊಳ್ಳಲಿದೆ.

English summary
Five associate banks of State Bank of India (SBI) will merge with SBI from April 1 in the largest consolidation exercise in the banking history of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X