ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಯರ್ ಬಾಟಲಿ ಮೇಲೆ ಗಣೇಶನ ಚಿತ್ರ, ಯುಎಸ್ ಕಂಪನಿ ಮೇಲೆ ಎಫ್ ಐ ಆರ್

ಬಿಯರ್ ಬಾಟಲ್ ಗಣೇಶನ ಚಿತ್ರ ಮತ್ತು ಶೂಗಳ ಮೇಲೆ ಓಂಕಾರದ ಚಿಹ್ನೆಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ಅಮೆರಿಕದ ಎರಡು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಬಿಯರ್ ಬಾಟಲ್ ಗಣೇಶನ ಚಿತ್ರ ಮತ್ತು ಶೂಗಳ ಮೇಲೆ ಓಂಕಾರದ ಚಿಹ್ನೆಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ಅಮೆರಿಕದ ಎರಡು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ದೆಹಲಿಯ ಸ್ಕೌಟ್ಸ್ ಹಾಗೂ ಗೈಡಸ್ ಆಯುಕ್ತ ನರೇಶ್ ಕದ್ಯಾನ್ ಎಂಬುವವರು ಅವರು ದೂರು ದಾಖಲಿಸಿದ್ದು, ಈ ಪದಾರ್ಥಗಳ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು. ಭಾರತ ಅಥವಾ ಅಮೆರಿಕ ಎಲ್ಲೇ ಆದರೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂಥ ವಸ್ತುಗಳ ಮಾರಾಟ ಸಹಿಸಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.[ಅಮೆಜಾನ್ ವಿರುದ್ಧ ಸುಷ್ಮಾ ಸ್ವರಾಜ್ ಕೆಂಡಾಮಂಡಲ]

FIRs Against US Online Stores for Selling Om Shoes, Ganesha Beer

ಅಮೆಜಾನ್ ಕಂಪನಿಯು ತನ್ನ ವೆಬ್​ಸೈಟ್​ನಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳುಳ್ಳ ಮತ್ತು ಮಹಾತ್ಮಾ ಗಾಂಧಿಯವರ ಚಿತ್ರವುಳ್ಳ ಕೆಲವು ವಸ್ತುಗಳನ್ನು ಮಾರಾಟ ಮಾಡಿ, ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣ ವಿದೇಶಾಂಗ ಸಚಿವಾಲಯದ ಮೆಟ್ಟಿಲೇರಿ, ಸಚಿವೆ ಸುಷ್ಮಾ ಸ್ವರಾಜ್ ಅವರು ಅಮೆಜಾನ್ ಕಂಪನಿಗೆ ಖಡಕ್ ಎಚ್ಚರಿಕೆ ನೀಡಿದ್ದರು.[ಅಮೆಜಾನ್ ನಲ್ಲಿ ಸ್ಕೇಟಿಂಗ್ ಬೋರ್ಡ್ ಮೇಲೆ ಗಣೇಶ]

ಓಂಕಾರವಿರುವ ಶೂ ಮಾರಾಟ ಮಾಡಿದ್ದಕ್ಕಾಗಿ yeswevibe.com ವಿರುದ್ಧ ಮತ್ತು ಗಣೇಶನ ಚಿತ್ರವಿರುವ ಬಿಯರ್ ಬಾಟಲಿ ಮಾರಾಟ ಮಾಡಿದ್ದಕ್ಕಾಗಿ lostcoast.com ವೆಬ್​ಸೈಟ್ ವಿರುದ್ಧ ದೂರು ದಾಖಲಿಸಲಾಗಿದೆ. ಎರಡು ಕೂಡಾ ಯುಎಸ್ ಮೂಲದ ಕಂಪನಿಗಳಾಗಿವೆ

English summary
Two US-based online retailers have been booked for selling products with Hindu religious symbols.FIRs were lodged against yeswevibe.com for selling shoes with the Om symbol and another against lostcoast.com for using the image of Ganesha on its beer label and packaging
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X