ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ರಿಟರ್ನ್ಸ್ ವಿಳಂಬವಾದರೆ ದಂಡ ಸದ್ಯಕ್ಕಿಲ್ಲ!

By Mahesh
|
Google Oneindia Kannada News

ನವದೆಹಲಿ, ಜುಲೈ13 : 2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡುವಲ್ಲಿ ವಿಳಂಬವಾದರೆ ಚಿಂತಿಸಬೇಡಿ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ ಹೊಸ ನೀತಿ ಪ್ರಸಕ್ತ ವರ್ಷಕ್ಕೆ ಅನ್ವಯವಾಗುವುದಿಲ್ಲ. ನಿಗದಿತ ಅವಧಿಯೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ 10,000 ರು ದಂಡ ವಿಧಿಸಲಾಗುತ್ತದೆ.

ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಮಾರ್ಗದರ್ಶಿ

ಆದರೆ, ನಿಗದಿತ ಅವಧಿಯೊಳಗೆ ಐಟಿ ರಿಟರ್ನ್ಸ್ ಮಾಡದಿದ್ದರೆ ವಿಧಿಸಲಾಗುವ 10,000 ರು ದಂಡ ಈ ವರ್ಷದಿಂದ ಜಾರಿಗೆ ಬರುತ್ತಿಲ್ಲ.
ಏಪ್ರಿಲ್ 01,2018ರಿಂದ ಸಲ್ಲಿಕೆಯಾಗುವ ಐಟಿ ಆರ್ ಗೆ ಹೊಸ ನೀತಿ ಜಾರಿಯಾಗಲಿದೆ. 2016-17 ಹಾಗೂ 2017-18 ರ ಮುಂಚಿತವಾದ ಐಟಿ ರಿಟರ್ನ್ಸ್ ಮೇಲೆ ಈ ನೀತಿ ಅನ್ವಯವಾಗುವುದಿಲ್ಲ.

Filing Income Tax Returns: Rs 10,000 late penalty is applicable from April 2018

ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ31 ಕೊನೆ ದಿನಾಂಕವಾಗಿದೆ. ಬಾಕಿ ಉಳಿಸಿಕೊಂಡ ತೆರಿಗೆದಾರರು ಡಿಸೆಂಬರ್ 31 ರೊಳಗೆ ರಿಟರ್ನ್ಸ್ ಸಲ್ಲಿಸಿದರೆ 5,000 ರು ತನಕ ದಂಡ ವಿಧಿಸಲಾಗುತ್ತದೆ. ನಂತರ ಹೊಸ ನೀತಿಯಂತೆ 10,000 ರು ದಂಡ ವಿಧಿಸಲಾಗುತ್ತದೆ.

English summary
July 31 is deadline for filing income tax returns, taxpayers are worried about paying extra over delay in taxes. the new penalty system will not be in effect till April 2018 and will not affect taxes to be paid for financial year 2016-17.Defaulters will have to pay Rs 5,000 if taxes are paid after the deadline but before December 31 of the assessment year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X