ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಫೆರಾ' ಉಲ್ಲಂಘನೆ ಮಲ್ಯ ವಿರುದ್ಧ 'ಇಡಿ' ತನಿಖೆಗೆ ಓಕೆ

By Mahesh
|
Google Oneindia Kannada News

ನವದೆಹಲಿ, ಜುಲೈ 13: ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ(ಫೆರಾ) ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಆಘಾತಕಾರಿ ಸುದ್ದಿ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ತನಿಖೆಗೆ ಇದ್ದ ತಡೆಯನ್ನು ಸುಪ್ರೀಂಕೋರ್ಟ್ ಪಕ್ಕಕ್ಕೆ ಸರಿಸಿ, ತನಿಖೆ ಮುಂದುವರೆಸುವಂತೆ ಆದೇಶಿಸಿದೆ. [ಮತ್ತೆ ಸುಸ್ತಿದಾರನಾದರೂ ಸುಸ್ತಾಗದ ಮಲ್ಯ]

1995ರಲ್ಲಿ ವಿದೇಶದಲ್ಲಿ ಯುಬಿ ಸಮೂಹದ ಕಿಂಗ್ ಫಿಷರ್ ಬ್ರ್ಯಾಂಡ್ ಪ್ರಚಾರಕ್ಕಾಗಿ ಲಂಡನ್ ಮೂಲದ ಬೆನೆಟನ್ ಫಾರ್ಮೂಲಾ ಲಿಮಿಟೆಡ್ ಜೊತೆ ಮಲ್ಯ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದ್ದರು. [ಗುಜರಿ ಅಂಗಡಿಗೆ ಸೇರಿದ ಮಲ್ಯ ಖಾಸಗಿ ವಿಮಾನ]

Vijay Mallya faces ED probe

ಲಂಡನ್ನಿನಲ್ಲಿ ನಡೆಯುವ ಫಾರ್ಮುಲಾ ಒನ್ ರೇಸಿಂಗ್ ಚಾಂಪಿಯನ್ ಶಿಪ್ ಗಳಲ್ಲಿ ಕಿಂಗ್ ಫಿಷರ್ ಬ್ರ್ಯಾಂಡ್ ಲೋಗೋ ಪ್ರದರ್ಶಿಸಲು ಬೆನೆಟನ್ ಸಂಸ್ಥೆಗೆ ಮಲ್ಯ ಅವರು ಸುಮಾರು 200,000 ಯುಎಸ್ ಡಾಲರ್ ನೀಡಿದ್ದರು. 1996, 1997 ಹಾಗೂ 1998ರಲ್ಲಿ ಪ್ರಚಾರಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. [ಮಲ್ಯ ಆರ್ ಸಿಬಿ ಮಾರುತ್ತಾರಂತೆ!]

ಈ ಒಪ್ಪಂದಕ್ಕೆ ಭಾರತೀಯ ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಬೇಕಿತ್ತು. ಅದರೆ, ಅನುಮತಿ ಪಡೆಯದೆ ಹಣ ರವಾನೆ ಮಾಡಿ ವಿದೇಶಿ ವಿನಿಯಮ ನಿಯಂತ್ರಣ ಕಾಯ್ದೆ(ಫೆರಾ) ಉಲ್ಲಂಘನೆ ಮಾಡಿದ ಆರೋಪ ಹೊರೆಸಿ ಮಲ್ಯ ಅವರ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. [ಪಾರ್ಟ್ನರ್ ವಿರುದ್ಧ ತಿರುಗಿ ಬಿದ್ದ ವಿಜಯ್ ಮಲ್ಯ]

ಅದರೆ, ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ರದ್ದು ಕೋರಿ ಮಲ್ಯ ಅವರು ಕೋರ್ಟ್ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟಿನ ಮುಂದೆ ಈ ಬಗ್ಗೆ ವಿವರಣೆ ನೀಡಿದ ಜಾರಿ ನಿರ್ದೇಶನಾಲಯ, ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಈಗ ಸುಪ್ರೀಂಕೋರ್ಟ್ ಕೂಡಾ ಜಾರಿ ನಿರ್ದೇಶನಾಲಯ ತನ್ನ ತನಿಕೆ ಮುಂದುವರೆಸಬಹುದು ಎಂದು ಆದೇಶ ನೀಡಿದೆ. ನ್ಯಾ. ಜೆ ಚೆಲಮೇಶ್ವರ್ ಹಾಗೂ ಎಕೆ ಗೋಯಲ್ ಅವರಿದ್ದ ನ್ಯಾಯ ಪೀಠ ಮಲ್ಯ ಅವರಿಗೆ 10 ಲಕ್ಷ ರು ದಂಡವನ್ನು ಕೂಡಾ ವಿಧಿಸಿದೆ.

English summary
The enforcement directorate (ED) will now be free to pursue criminal proceedings against liquor tycoon Vijay Mallya over violation of foreign exchange laws as the Supreme Court on Monday dismissed his appeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X