ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರ ಗತಿಯ ಸೇವೆಗೆ ಒತ್ತು ನೀಡಿದ ಫೆಡ್ ಎಕ್ಸ್

|
Google Oneindia Kannada News

ಬೆಂಗಳೂರು, ಅ. 30: ಅಂತಾರಾಷ್ಟ್ರೀಯ ಮಟ್ಟದ ಕೋರಿಯರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಫೆಡ್ ಎಕ್ಸ್ ಎಕ್ಸ್ ಪ್ರೆಸ್ ತನ್ನ ಸೇವೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಶೀಘ್ರ ವಿಲೇವಾರಿ ಮತ್ತು ಗ್ರಾಹಕ ಸ್ನೇಹಿಯಾಗಿರುವ ಫೆಡ್ ಎಕ್ಸ್ ಎಕ್ಸ್ ಪ್ರೆಸ್ ಒಂದೇ ದಿನದಲ್ಲಿ ಕೋರಿಯರ್ ತಲುಪಿಸಲಿದೆ.

ship

ಶೀಘ್ರ ವಿಲೇವಾರಿ ಲಭ್ಯವಿರುವ ದೇಶಗಳು
ಆಸ್ಟ್ರಿಯಾ, ಬಹರೇನ್, ಬೆಲ್ಜಿ, ಬೊಲಿವಿಯಾ, ಚೀನಾ, ಡೆನ್ಮಾರ್ಕ್, ಈಕ್ವೆಡಾರ್, ಫಿನ್ ಲ್ಯಾಂಡ್, ಗಯಾನಾ, ಹಂಗೇರಿ. ಭಾರತ, ಇಂಡೋನೆಷಿಯಾ, ಕೋರಿಯಾ, ಕುವೈತ್, ಮಲೇಷಿಯಾ, ನಾರ್ವೆ, ಪೆರುಗ್ವೆ, ಸಿಂಗಪುರ್, ಸ್ವೀಡನ್, ಥೈಲಾಂಡ್ ಮತ್ತು ಯುನೈಟಡ್ ಅರಬ್ ದೇಶಗಳಿಗೆ ಶೀಘ್ರ ವಿಲೇವಾರಿ ಲಭ್ಯವಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.[ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?]

ಈ ದೇಶಗಳ ನಡುವಿನ ಗುರುತು ಮಾಡಿರುವ 97 ಮಾರುಕಟ್ಟೆಯಿಂದ ಮತ್ತೊಂದು ದೇಶಕ್ಕೆ ಸುಲಭವಾಗಿ ವಸ್ತುಗಳನ್ನು ಕಳುಹಿಸಬಹುದು. ರವಾನಿಸುವ ಸ್ಥಳ ಮತ್ತು ಗುರಿ ಆಧರಿಸಿ ಕೆಲವೊಮ್ಮೆ ಒಂದು ದಿನದ ವ್ಯತ್ಯಾಸವಾಗಬಹುದು. ಆದರೆ ನೀವು ಬುಕ್ ಮಾಡಿದ ದಿನವೇ ನಿಮ್ಮ ವಸ್ತುಗಳು ಸುರಕ್ಷಿತವಾಗಿ ಹಡಗಿಗೆ ರವಾನೆಯಾಗುತ್ತವೆ. ಕೈಗಾರಿಕೆಗೆ ಸಂಬಂಧಿಸಿದ ಕಾಗದ ಪತ್ರಗಳು, ಇಲೆಕ್ಟ್ರಾನಿಕ್ ಮತ್ತು ಸೂಕ್ಷ್ಮ ಯಂತ್ರಗಳು, ವೈದ್ಯಕಿಯ ಕಿಟ್ ಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಸಾಗಿಸಲು ಇದು ಅತ್ಯುತ್ತಮವಾಗಿದೆ.

ಈ ವಿನೂತನ ಯೋಜನೆಯನ್ನು 'ಇಂಟರ್ ನ್ಯಾಷನಲ್ ಫಸ್ಟ್' ಎಂದು ಕರೆಯಲಾಗಿದ್ದು, ಪ್ರಪಂಚದ ವಿವಿಧ ಮೂಲೆಗೆ ನಿಮ್ಮ ವಸ್ತುಗಳನ್ನು ಸುಲಭವಾಗಿ ರವಾನಿಸಲು ಸಾಧ್ಯ ಎಂದು ಫೆಡ್ ಎಕ್ಸ್ ಎಕ್ಸ್ ಪ್ರೆಸ್ ಉಪಾಧ್ಯಕ್ಷ ರಾಜ್ ಸುಬ್ರಮಣಿಯನ್ ತಿಳಿಸಿದ್ದಾರೆ.

English summary
FedEx is expanding solutions for global customers who need their critical deliveries to arrive as early as the start of the next business day. This expansion brings the total number of origin markets to 97, and means that customers can now use FedEx International First to ship packages from the above countries to any of the existing International First destination markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X