ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಹೋಮ್ ಡೆಲಿವರಿ, ಇಲ್ಲಿವೆ ಪ್ರಶ್ನೋತ್ತರ

|
Google Oneindia Kannada News

ಬೆಂಗಳೂರು, ಜೂನ್ 24: ಮನೆಮನೆಗೆ ಪೆಟ್ರೋಲ್-ಡೀಸೆಲ್ ಪೂರೈಸುವ ಬಗ್ಗೆ ನೀವು ಕೇಳಿದ್ದೀರಾ ಅನ್ನೋದಾದರೆ, ಬೆಂಗಳೂರಿನಲ್ಲಿ ಅಂಥದ್ದೇ ವ್ಯವಹಾರ ಮಾಡುತ್ತಿರುವ ಸ್ಟಾರ್ಟ್ ಅಪ್ ಬಗ್ಗೆ ಈ ದಿನ ಮಾಹಿತಿ ನೀಡುತ್ತಿದ್ದೇವೆ. ನಿಮ್ಮಲ್ಲಿ ಸಹಜವಾಗಿ ಮೂಡುವ ಪ್ರಶ್ನೋತ್ತರ ಮಾದರಿಯಲ್ಲಿ ಈ ಮಾಹಿತಿ ನಿಮ್ಮ ಮುಂದಿದೆ.

ಮೈ ಪೆಟ್ರೋಲ್ ಪಂಪ್ ಎಂಬ ಈ ಕಂಪೆನಿ ಸದ್ಯಕ್ಕೆ ವೆಬ್ ಸೈಟ್ ಮೂಲಕ ಆರ್ಡರ್ ಗಳನ್ನು ತೆಗೆದುಕೊಳ್ಳುತ್ತಿದೆ. ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಷನ್ ನ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದೆ. ಡೆಲಿವರಿ ಶುಲ್ಕ ಎಂದು ನೂರು ಲೀಟರ್ ವರೆಗಿನ ಆರ್ಡರ್ ಗೆ ತೊಂಬತ್ತೊಂಬತ್ತು ರುಪಾಯಿ ಪಡೆಯಲಾಗುತ್ತಿದೆ. ಆ ನಂತರ ಪ್ರತಿ ಲೀಟರ್ ಗೆ ಒಂದು ರುಪಾಯಿ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ.

ತಮಿಳುನಾಡಿನಲ್ಲಿ ಇನ್ಮುಂದೆ 'ಅಮ್ಮ ಪೆಟ್ರೋಲ್ ಬಂಕ್' ಓಪನ್ತಮಿಳುನಾಡಿನಲ್ಲಿ ಇನ್ಮುಂದೆ 'ಅಮ್ಮ ಪೆಟ್ರೋಲ್ ಬಂಕ್' ಓಪನ್

ಮೊದಲಿಗೆ ಯಾವ ಪ್ರದೇಶಕ್ಕೆ ಡೆಲಿವರಿ ಬೇಕು ಎಂಬುದನ್ನು ಭರ್ತಿ ಮಾಡಬೇಕು. ಆ ನಂತರ ಎಷ್ಟು ಪ್ರಮಾಣದ ಹಾಗೂ ಡೀಸೆಲ್ ಅಥವಾ ಪೆಟ್ರೋಲ್ ಎಂಬುದನ್ನು ದಾಖಲಿಸಬೇಕು. ಅದಾದ ಮೇಲೆ ಯಾವ ವೇಳೆ ಅಂದರೆ ದಿನಾಂಕ, ಸಮಯ ಎಲ್ಲವನ್ನೂ ತಿಳಿಸಿದರೆ, ನೀವಿರುವಲ್ಲಿಗೆ ಬಂದು ಡೆಲಿವರಿ ನೀಡಲಾಗುತ್ತದೆ.

ಕೆಲವರು ಇದರ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿದ್ದು, ಅದಕ್ಕೆ ಕಂಪೆನಿಯವರು, ಇದು ತುಂಬ ಸುರಕ್ಷಿತ ಎಂಬ ಉತ್ತರ ನೀಡಿದ್ದಾರೆ. ಇನ್ನು ವೆಬ್ ಸೈಟ್ ನಲ್ಲಿ ಕಂಪೆನಿಯ ಮೊಬೈಲ್ ನಂಬರ್ 7880504050 ನೀಡಿದ್ದಾರೆ. ಅದಕ್ಕೆ ನಾಲ್ಕೈದು ಬಾರಿ ಕರೆ ಮಾಡಿದಾಗಲೂ ಸ್ವೀಕರಿಸಲಿಲ್ಲ. ಕಂಪೆನಿಯ ವೆಬ್ ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

ಪೆಟ್ರೋಲ್-ಡೀಸೆಲ್ ಆರ್ಡರ್

ಪೆಟ್ರೋಲ್-ಡೀಸೆಲ್ ಆರ್ಡರ್

ಪ್ರಶ್ನೆ: ಏನಿದು ಮೈ ಪೆಟ್ರೋಲ್ ಪಂಪ್?

ಉತ್ತರ: ನೀವಿರುವ ಸ್ಥಳದಲ್ಲಿಯೇ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಳ್ಳಲು ಈ ಮೂಲಕ ಆರ್ಡರ್ ಮಾಡಬಹುದು.

ನಿಯಮಿತವಾದ ಪ್ರದೇಶಗಳಲ್ಲಿ

ನಿಯಮಿತವಾದ ಪ್ರದೇಶಗಳಲ್ಲಿ

ಪ್ರಶ್ನೆ: ಯಾವ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದೆ?

ಉತ್ತರ: ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಈ ವ್ಯವಸ್ಥೆ ಒದಗಿಸಲಾಗುತ್ತಿದೆ. ಉದಾಹರಣೆಗೆ ಎಚ್ ಎಸ್ ಆರ್ ಲೇಔಟ್, ಕೋರಮಂಗಲ, ಬೆಳ್ಳಂದೂರು, ಬಿಟಿಎಂ ಹಾಗೂ ಬೊಮ್ಮನಹಳ್ಳಿಯಲ್ಲಿ ಇದೆ. ವ್ಯಾಪ್ತಿ ಹೆಚ್ಚಿಸಲು ಪ್ರಯತ್ನ ನಡೆದಿದೆ.


ನಿಮ್ಮ ಪ್ರದೇಶದ ಪಿನ್ ಕೋಡ್ ಟೈಪ್ ಮಾಡಿ, ಅಲ್ಲಿಗೆ ಸೇವೆ ಇದೆಯಾ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ತೀರಾ ತುರ್ತು ಸೇವೆ ಅಗತ್ಯ ಇದ್ದಲ್ಲಿ ಮೇಲ್ ಮಾಡಬಹುದು ಅಥವಾ ಕರೆ ಮಾಡಬಹುದು.

ಇಪ್ಪತ್ನಾಲ್ಕು ಗಂಟೆ ವಿಸ್ತರಣೆ

ಇಪ್ಪತ್ನಾಲ್ಕು ಗಂಟೆ ವಿಸ್ತರಣೆ

ಪ್ರಶ್ನೆ: ಮೈ ಪೆಟ್ರೋಲ್ ಪಂಪ್ ಕಾರ್ಯ ನಿರ್ವಹಿಸುವ ಅವಧಿ ಎಷ್ಟು?

ಉತ್ತರ: ಸದ್ಯಕ್ಕೆ ಬೆಳಗ್ಗೆ ಆರರಿಂದ ರಾತ್ರಿ ಎಂಟರವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ದಿನದ ಇಪ್ಪತ್ನಾಲ್ಕು ಗಂಟೆ ಸೇವೆ ವಿಸ್ತರಿಸಲಿದೆ.

ಮನೆ ಹತ್ತಿರದ ಪೆಟ್ರೋಲ್ ಪಂಪ್

ಮನೆ ಹತ್ತಿರದ ಪೆಟ್ರೋಲ್ ಪಂಪ್

ಪ್ರಶ್ನೆ: ಮನೆಗೆ ತಲುಪಿಸುವುದಕ್ಕೆ ಎಷ್ಟು ಹಣ ಪಡೆಯುತ್ತೀರಿ?

ಉತ್ತರ: ನಿಮ್ಮ ಮನೆ ಹತ್ತಿರದ ಪೆಟ್ರೋಲ್ ಪಂಪ್ ನಲ್ಲಿ ಯಾವ ದರಕ್ಕೆ ಸಿಗುತ್ತದೋ ಅದೇ ಬೆಲೆ ಇರುತ್ತದೆ. ಜತೆಗೆ ಮನೆಗೆ ತಲುಪಿಸುವ ಶುಲ್ಕ ಎಂದು ನೂರು ಲೀಟರ್ ವರೆಗೆ ಈಗ ತೊಂಬತ್ತೊಂಬತ್ತು ರುಪಾಯಿ ಪಡೆಯಲಾಗುತ್ತಿದೆ. ಅದರ ಮೇಲೆ ಪ್ರತಿ ಲೀಟರ್ ಗೆ ಒಂದು ರುಪಾಯಿ ಪಡೆಯಲಾಗುತ್ತದೆ.

ಮುಂಚೆಯೇ ದಾಸ್ತಾನು ಮಾಡಲ್ಲ

ಮುಂಚೆಯೇ ದಾಸ್ತಾನು ಮಾಡಲ್ಲ

ಪ್ರಶ್ನೆ: ಮೈ ಪೆಟ್ರೋಲ್ ಪಂಪ್ ನವರು ಎಲ್ಲಿಂದ ಪೆಟ್ರೋಲ್-ಡೀಸೆಲ್ ತರೋದು?

ಉತ್ತರ: ಆರ್ಡರ್ ಮಾಡಿದ ಪ್ರದೇಶದ ಬಳಿಯಿರುವ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಲಾಗುತ್ತದೆ. ಮುಂಚಿತವಾಗಿಯೇ ಇಂಧನ ಖರೀದಿಯೋ ದಾಸ್ತಾನೋ ಮಾಡುವುದಿಲ್ಲ. ಒಮ್ಮೆ ಆರ್ಡರ್ ಬಂದ ನಂತರವೇ ಖರೀದಿಸಲಾಗುತ್ತದೆ.

ಆರ್ಡರ್ ರದ್ದು ಮಾಡಿದರೆ...

ಆರ್ಡರ್ ರದ್ದು ಮಾಡಿದರೆ...

ಪ್ರಶ್ನೆ: ಆರ್ಡರ್ ರದ್ದು ಮಾಡಲು ಶುಲ್ಕ ಹಾಕ್ತಾರಾ?

ಉತ್ತರ: ಇಲ್ಲ. ಡೆಲಿವರಿಗಾಗಿ ವಾಹನ ಹೊರಡುವ ಮುಂಚೆಯೇ ರದ್ದು ಮಾಡಿದರೆ ಯಾವುದೇ ಶುಲ್ಕ ಹಾಕುವುದಿಲ್ಲ.

ಡೆಲಿವರಿ ನಂತರ ಹಣ ಪಾವತಿ

ಡೆಲಿವರಿ ನಂತರ ಹಣ ಪಾವತಿ

ಪ್ರಶ್ನೆ: ಪೆಟ್ರೋಲ್ ಅಥವಾ ಡೀಸೆಲ್ ಡೆಲಿವರಿ ಆದ ನಂತರ ಹಣ ಪಾವತಿ ಹೇಗೆ?

ಉತ್ತರ: ಸದ್ಯಕ್ಕೆ ನಗದು ಮೂಲಕ ಮಾತ್ರ ಪಡೆಯಲಾಗುತ್ತಿದೆ ಮತ್ತು ಪಿಒಎಸ್ ಮಷೀನ್ ಕೂಡ ಬಳಸಲಾಗುತ್ತಿದೆ. ಈ ರೀತಿ ಕಾರ್ಡ್ ಮೂಲಕ ಪಾವತಿಸಿದರೆ ಬ್ಯಾಂಕ್ ನವರು ಅದಕ್ಕಾಗಿ ಹೆಚ್ಚು ಶುಲ್ಕ ಪಡೆಯುತ್ತಿದ್ದರೆ, ಗ್ರಾಹಕರೇ ಭರಿಸಬೇಕು.

English summary
India’s Silicon Valley Bangalore is usually the first to experiment with tech solutions to everyday problems. The latest is home delivery of fuel ordered online from MyPetrolPump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X